ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಮೇಲೆ 'ಸಿಬಿಐ' ಎಫ್ಐಆರ್

ಕಲ್ಲಿದ್ದಲು ಹಗರಣದ ಆರೋಪಿಗಳನ್ನು ರಂಜಿತ್ ಸಿನ್ಹಾ ಭೇಟಿಯಾಗಿದ್ದು ತನಿಖೆ ವೇಳೆ ಸಾಬೀತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಐಆರ್ ದಾಖಲಿಸಿಕೊಂಡಿರುವುದಾಗಿ ಸಿಬಿಐ ಹೇಳಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ನವ ದೆಹಲಿ, ಏಪ್ರಿಲ್ 25: ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಮೇಲೆ ಸ್ವತಃ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಪ್ರಕರಣದ ಆರೋಪಿಗಳನ್ನು ರಂಜಿತ್ ಸಿನ್ಹಾ ಭೇಟಿಯಾಗಿದ್ದು ತನಿಖೆ ವೇಳೆ ಸಾಬೀತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸಿಬಿಐ ಹೇಳಿದೆ. ಪ್ರಕರಣದ ತನಿಖೆ ಮೇಲೆ ಪ್ರಭಾವ ಬೀರಲು ರಂಜಿತ್ ಸಿನ್ಹಾ ಯತ್ನಿಸಿದ್ದರು ಎಂದು ಸಿಬಿಐ ಇದೇ ವೇಳೆ ಹೇಳಿದೆ.[ನಕಲಿ ಪಾಸ್ಪೋರ್ಟ್ ಕೇಸ್: ಛೋಟಾ ರಾಜನ್ ಗೆ 7 ವರ್ಷ ಜೈಲು]

CBI files FIR against its former director Ranjit Sinha for influencing coal scam probe

ಇತ್ತೀಚೆಗೆ ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ತನಿಖೆಯ ಮೇಲೆ ಪ್ರಭಾವ ಬೀರಲು ರಂಜಿತ್ ಸಿನ್ಹಾ ಯತ್ನಿಸಿದ್ದರು ಎಂಬುದಾಗಿ ಸಮಿತಿ ಹೇಳಿದೆ ಎಂದಿದ್ದರು. ತನಿಖೆಯ ಮೇಲೆ ರಂಜಿತ್ ಸಿನ್ಹಾ ಪ್ರಭಾವ ಬೀರಲು ಯತ್ನಿಸಿದ್ದರಾ ಎಂದು ಪತ್ತೆ ಹಚ್ಚಲು ಈ ಸಮಿತಿಯನ್ನು ರಚಿಸಲಾಗಿತ್ತು.

ಈ ಕುರಿತು ವರದಿ ನೀಡಿದ್ದ ಸಿಬಿಐ ವಿಶೇಷ ನಿರ್ದೇಶಕ ಎಂಎಲ್ ಶರ್ಮಾ, ಸಿನ್ಹಾ ಮನೆಯಲ್ಲಿದ್ದ ವಿಸಿಟರ್ಸ್ ಡೈರಿ ನಿಜವಾದುದು ಎಂದು ಹೇಳಿತ್ತು. ಇದರಲ್ಲಿ ಆರೋಪಿಗಳು ಸಿನ್ಹಾ ಮನೆಗೆ ಭೇಟಿ ನೀಡಿದ್ದ ವಿವರಗಳಿದ್ದವು. ಆದರೆ ಸಮಿತಿ ಎಲ್ಲೂ ಆರೋಪಿ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿಲ್ಲ.[ಮಲೆಗಾಂವ್ ಸ್ಫೋಟ: ಸಾಧ್ವಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್]

ಇನ್ನು ಇದೇ ಜನವರಿಯಲ್ಲಿ ನ್ಯಾಯಮೂರ್ತಿ ಮನ್ ಬಿ ಲೋಕುರ್ ನೇತೃತ್ವದ ತ್ರಿ ಸದಸ್ಯ ಪೀಠ ಸಿನ್ಹಾ ಸಿಬಿಐ ನಿರ್ದೇಶಕರಾಗಿ ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿತ್ತು.

English summary
The Central Bureau of Investigation has filed a case against its former director Ranjit Sinha in the coal scam case. The CBI says that the case was filed after it had found that Sinha had met with accused linked to the coal scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X