ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸೇರಿ 6 ನಗರದಲ್ಲಿ ಏರ್ ಏಷ್ಯಾ ಕಚೇರಿ ಮೇಲೆ ಸಿಬಿಐ ದಾಳಿ

By Manjunatha
|
Google Oneindia Kannada News

ಬೆಂಗಳೂರು, ಮೇ 29: ಏರ್ ಏಷಿಯಾ ಸಂಸ್ಥೆಯ ಕಾರ್ಯ ನಿರ್ವಾಹಕ ಟೋನಿ ಫರ್ನಾಂಡಸ್‌ ಗುರಿಯಾಗಿಸಿಕೊಂಡು ಸಿಬಿಐ ದಾಳಿ ನಡೆಸಿದ್ದು, ಬೆಂಗಳೂರು ಸೇರಿದಂತೆ ಒಟ್ಟು 6 ನಗರಗಳಲ್ಲಿ ದಾಳಿಗಳು ನಡೆದು ವಿಚಾರಣೆ ನಡೆಸಲಾಗುತ್ತಿದೆ.

ಏರ್ ಏಷಿಯಾ ಸಂಸ್ಥೆಯು ಅಂತರರಾಷ್ಟ್ರೀಯ ಹಾರಾಟ ಪರವಾನಗಿ ವಿಷಯದಲ್ಲಿ ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪ ಇದ್ದ ಕಾರಣ ಈ ರೀತಿ ರೈಡ್ ನಡೆಸಲಾಗಿದ್ದು, ಬೆಂಗಳೂರಿನ ಏರ್ ಏಷಿಯಾ ಕಚೇರಿ ಮೇಲೆಯೂ ದಾಳಿ ನಡೆದಿದೆ. ಅಲ್ಲದೆ ಮುಂಬೈ, ನವ ದೆಹಲಿ, ಕೊಲ್ಕತ್ತ ಸೇರಿ 6 ಕಡೆ ದಾಳಿಗಳು ನಡೆದಿವೆ.

ನೀರವ್ ಪ್ರಕರಣ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಮರಳಿ ಮಾತೃ ಕೇಡರ್‌ಗೆನೀರವ್ ಪ್ರಕರಣ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಮರಳಿ ಮಾತೃ ಕೇಡರ್‌ಗೆ

ಏರ್ ಏಷಿಯಾ ಸಂಸ್ಥೆಯ ಕಾರ್ಯ ನಿರ್ವಾಹಕ ಟೋನಿ ಫರ್ನಾಂಡಸ್‌ ಮೇಲೆ ಸಿಬಿಐ ಕೇಸು ದಾಖಲಿಸಿದ್ದು, ಅವರೊಂದಿಗೆ ಇನ್ನೂ ಹಲವರ ಮೇಲೆ ಭ್ರಷ್ಟಾಚಾರದ ಕೇಸುಗಳನ್ನು ದಾಖಲಿಸಲಾಗಿದೆ. ವಾಯುಯಾನ ಸಲಹೆಗಾರ ದೀಪಕ್ ತಲ್ವಾರ್ ಅವರ ಮೇಲೂ ಕೇಸು ದಾಖಲಿಸಲಾಗಿದೆ.

CBI file case against Air Asia CEO Tony Fernandas

ಟೋನಿ ಫರ್ನಾಂಡಸ್‌ ಅಂತರರಾಷ್ಟ್ರೀಯ ಹಾರಾಟದ ಲೈಸೆನ್ಸ್ ಪಡೆಯಲು ನಿಯಮಗಳನ್ನು ಮುರಿದಿದ್ದಾರೆ, ಭ್ರಷ್ಟಾಚಾರ ಮಾಡಿ ಲೈಸೆನ್ಸ್ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಅವರ ನೇತೃತ್ವದಲ್ಲಿ ಸಂಸ್ಥೆಯು ಅಂತರರಾಷ್ಟ್ರೀಯ ಬಂಡವಾಳ ಹೂಡಿಕೆ ನಿಯಮಗಳನ್ನು ಮೀರಿ ವ್ಯವಹಾರ ನಡೆಸಿದೆ ಎಂದು ಸಿಬಿಐ ಆರೋಪಿಸಿದೆ.

English summary
CBI filed a case against Chief executive officer (CEO) of Air Asia Group. Raids being conducted at their locations in Delhi, Mumbai and Bengaluru. Aviation consultant Deepak Talwar also named in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X