• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ ಬಲೆಗೆ ಬಿದ್ದ ಇಬ್ಬರು ಲಂಚಕೋರ ಜಿಎಸ್ಟಿ ಆಫೀಸರ್ಸ್

By ವಿಕಾಸ್ ನಂಜಪ್ಪ
|

ನವದೆಹಲಿ, ಸೆ. 13: ಸರಕು ಸೇವಾ ತೆರಿಗೆ(ಜಿಎಸ್ಟಿ) ಕ್ರೆಡಿಟ್ ಬದಲಾವಣೆ ಮಾಡಲು 5 ಕೋಟಿ ರು ಲಂಚ ಪಡೆದ ಆರೋಪದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳಿಬ್ಬರನ್ನು ಸಿಬಿಐ ಬಂಧಿಸಿದೆ. ಬಂಧಿತರನ್ನು ಜಿಎಸ್ಟಿ ಇಲಾಖೆಯ ಮಾಜಿ ಉಪ ಆಯುಕ್ತರಾದ ಸುಧಾರಾಣಿ ಚಿಲಕ ಹಾಗೂ ಸೂಪರಿಡೆಂಟ್ ಶ್ರೀನಿವಾಸ ಗಾಂಧಿ ಬೊಲ್ಲಿನೇನಿ ಎಂದು ಗುರುತಿಸಲಾಗಿದೆ.

ಈ ಇಬ್ಬರು ಅಧಿಕಾರಿಗಳು ಹೈದರಾಬಾದಿನಲ್ಲಿ ಕಾರ್ಯ ನಿರ್ವಹಿಸುವಾಗ ಇನ್ಫಿನಿಟಿ ಮೆಟಲ್ ಪ್ರಾಡೆಕ್ಟ್ ಇಂಡಿಯಾ ಲಿಮಿಟೆಡ್ ಎಂಬ ಕಂಪನಿಯಿಂದ ಏಪ್ರಿಲ್ 15, 2019ರಂದು 10 ಲಕ್ಷ ಹಣ ಪಡೆದುಕೊಂಡಿದ್ದಾರೆ. ಕಂಪನಿಗೆ 5 ಕೋಟಿ ರು ಬೇಡಿಕೆ ನೀಡಿದ್ದರು. ನಿವೇಶನ, ಭೂಮಿ ಮಂಜೂರು ಮುಂತಾದ ರೀತಿಯಲ್ಲಿ ಲಂಚ ಪಡೆದುಕೊಳ್ಳಲು ಯತ್ನಿಸಿದ್ದರು

ಕಾರು, ಬೈಕ್ ಬೆಲೆ ಇಳಿಕೆ ಸಾಧ್ಯತೆ: ಜಿಎಸ್‌ಟಿ ಕಡಿತಕ್ಕೆ ಸರ್ಕಾರ ಪರಿಶೀಲನೆ

ಈ ಪ್ರಕರಣದಲ್ಲಿ ಕಂಪನಿಯ ಮಾಲೀಕರಾದ ಜೆ ಸತ್ಯ ಶ್ರೀಧರ್ ರೆಡ್ಡಿ ಅವರನ್ನು ಬಂಧಿಸಲಾಗಿತ್ತು. ಆದರೆ, ವಿಚಾರಣೆ ಬಳಿಕ ಮಾರ್ಚ್ 29, 2019ರಂದು ಬಿಡುಗಡೆ ಮಾಡಲಾಗಿದೆ. ಮಿಕ್ಕಂತೆ ಭಾರತಿ ಕಮಾಡಿಟಿಸ್ ಪ್ರೈ ಲಿಮಿಟೆಡ್ ಕೂಡಾ ಪ್ರಕರಣದಲ್ಲಿ ಆರೋಪಿಸಲಾಗಿದೆ.

ಸುಮಾರು 11 ತಿಂಗಳ ಪ್ರಾಥಮಿಕ ತನಿಖೆ ಬಳಿಕ, ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ತಿಳಿಸಲಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೂರ್ವಾನುಮತಿ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
The CBI has booked ex-deputy commissioner service tax anti-evasion in GST Department Sudha Rani Chilaka and department superintendent Sreenivasa Gandhi Bollineni for allegedly demanding a bribe of Rs five crore to settle a wrongful input tax credit case probed by them, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X