ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಬೆಟ್ಟಿಂಗ್ ತನಿಖೆ ಹಳ್ಳ ಹಿಡಿಸಿದ 'ಇಡಿ' ಅಧಿಕಾರಿಗಳು ಜೈಲಿಗೆ

ಐಪಿಎಲ್ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ ಪ್ರತಿಷ್ಠಿತ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿಗಳನ್ನೇ ಸಿಬಿಐ ಬಂಧಿಸಿದೆ. ತನಿಖೆ ವೇಳೆ ಲಂಚ ತೆಗೆದುಕೊಂಡ ಆರೋಪ ಈ ಅಧಿಕಾರಿಗಳ ಮೇಲಿದೆ.

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 21: ಐಪಿಎಲ್ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ ಪ್ರತಿಷ್ಠಿತ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿಗಳನ್ನೇ ಸಿಬಿಐ ಬಂಧಿಸಿದೆ. ತನಿಖೆ ವೇಳೆ ಲಂಚ ತೆಗೆದುಕೊಂಡ ಆರೋಪ ಈ ಅಧಿಕಾರಿಗಳ ಮೇಲಿದೆ.

ಹವಾಲ ಡೀಲರ್ ಅಫ್ರೋಜ್ ಫಟ್ಟಾ ಮೇಲಿನ 5,000 ಕೋಟಿ ಅಕ್ರಮ ಹಣ ವರ್ಗಾವಣೆ ಮತ್ತು ಐಪಿಎಲ್ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ಜೆಪಿ ಸಿಂಗ್ ಇದೀಗ ಸಿಬಿಐ ಪೊಲೀಸರ ಅತಿಥಿಯಾಗಿದ್ದಾರೆ. ಮಂಗಳವಾರ ಜೆಪಿ ಸಿಂಗ್ ರನ್ನು ಸಿಬಿಐ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದೆ.[ಇಡಿ, ಐಟಿ ದಾಳಿಯಿಂದ ಕಾಂಗ್ರೆಸ್ ನಿರ್ನಾಮಕ್ಕೆ ಕೇಂದ್ರ ಯತ್ನ: ಗುಂಡೂರಾವ್]

 CBI arrests ED Joint Director JP Singh and 3 others in IPL betting scam

ಇಂಡಿಯನ್ ಪ್ರೀಮಿಯರ್ ಲೀಗ್ ಬೆಟ್ಟಿಂಗ್ ಹಗರಣ ಮತ್ತು 5,000 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಲಂಚ ಸ್ವೀಕರಿಸದ ಆರೋಪ ಸಿಂಗ್ ಮೇಲಿದೆ. ಸಿಬಿಐ ಪ್ರಕಾರ ಈ ಎರಡೂ ಪ್ರಕರಣಗಳನ್ನು ಮುಚ್ಚಿ ಹಾಕಲು ಸಿಂಗ್ ಹಾಗೂ ಇತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೊಡ್ಡ ಮೊತ್ತದ ಲಂಚ ಸ್ವೀಕರಿಸಿದ್ದಾರೆ. ಈ ಕುರಿತು ಹಣಕಾಸು ಸಚಿವಾಲಯ ಸಿಂಗ್ ವಿರುದ್ಧ 2015ರಲ್ಲಿ ಪ್ರಕರಣ ದಾಖಲಿಸಿತ್ತು.[ಮಂಗಳೂರು: ಐಟಿ ದಾಳಿ, ಒಂದೇ ದಿನದಲ್ಲಿ ಸಿಕ್ಕಿರೋದು ರು.172 ಕೋಟಿ!]

ಇದೀಗ ಸಿಂಗ್ ಹಾಗೂ ಜಾರಿ ನಿರ್ದೇಶನಾಲಯದ ಇತರ ಮೂವರು ಅಧಿಕಾರಿಗಳನ್ನು ಸಿಬಿಐ ಬಂಧಿಸಿದ್ದು ತನಿಖೆ ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ.

English summary
The Central Bureau of Investigation on Tuesday arrested the former Joint Director Enforcement Directorate JP Singh and 3 others, who were accused of accepting a bribe while investigating the Indian Premier League betting scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X