• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೊಹ್ರಾಬುದ್ದೀನ್ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಸೋದರನ ಹೇಳಿಕೆ

|

ಅಹಮದಾಬಾದ್, ಸೆಪ್ಟೆಂಬರ್ 18: ಸೊಹ್ರಾಬುದ್ದೀನ್ ಶೇಕ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಶೇಕ್ ಅವರ ಕಿರಿಯ ಸೋದರ ಈ ಬಗ್ಗೆ ನಯಾಮುದ್ದೀನ್ ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರಿಸಿದೆ.

'ಸಿಬಿಐ ಅಧಿಕಾರಿಯೊಬ್ಬರು 2010ರಲ್ಲಿ ದಾಖಲಿಸಿಕೊಂಡಿದ್ದ ನನ್ನ ಹೇಳಿಕೆಯಲ್ಲಿ ಗುಜರಾತ್ ಪೊಲೀಸ್ ಅಧಿಕಾರಿ ಅಭಯ್ ಚೂಡಸಮ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೆಸರುಗಳನ್ನು ಸಿಬಿಐ ತಾನಾಗಿಯೇ ಸೇರಿಸಿತ್ತು' ಎಂದು ನಯಾಮುದ್ದೀನ್ ಶೇಕ್ ಅವರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಬಲಿ

ನವೆಂಬರ್ 29, 2017ರಂದು ಪ್ರಾಸಿಕ್ಯೂಶನ್ ಪರ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ನಯಾಮುದ್ದೀನ್ ಹಲವಾರು ಸಮನ್ಸ್ ಹಾಗೂ ಜಾಮೀನುರಹಿತ ವಾರಂಟ್ ಗಳ ತರುವಾಯ ಅಂತಿಮವಾಗಿ ಸೋಮವಾರದಂದು ಹಾಜರಾಗಿದ್ದಾರೆ. ಸಿಬಿಐ ಹಾಗೂ ಈ ಪ್ರಕರಣದಲ್ಲಿ ತಿರುಗಿಬಿದ್ದ ಸಾಕ್ಷಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಅವರು ಮೌಖಿಕವಾಗಿ ನ್ಯಾಯಾಲಯವನ್ನು ಕೋರಿದ್ದಾರೆ. ಸಿಬಿಐ ಈ ಕೇಸನ್ನು ಹಾಳುಗೆಡಹಿದೆ ಎಂದು ಹೇಳಿದರು.

ನವೆಂಬರ್ 2005ರ ಘಟನಾವಳಿಗಳ ಬಗ್ಗೆ ನ್ಯಾಯಾಲಯದ ಮುಂದೆ ನಯಾಮುದ್ದೀನ್ ಹೇಳಿಕೊಂಡ ನಂತರ ಆತನ ವಿಚಾರಣೆ ಸಂಪೂರ್ಣಗೊಂಡಿದೆಯೆಂದು ವಿಶೇಷ ಸಾರ್ವಜನಿಕ ಅಭಿಯೋಜಕ ಬಿ.ಪಿ. ರಾಜು ಘೋಷಿಸಿದರು.

ಆದರೆ ತನಗೆ ಇನ್ನೂ ಹೇಳಲಿದೆ ಎಂದ ನಯಾಮುದ್ದೀನ್ 'ನನಗೆ ಬಿಜೆಪಿಯಿಂದ ಬೆದರಿಕೆಯಿಲ್ಲ. ಅಜಂ ಖಾನ್ ಹೆಸರು ಕೇಳಿಯೇ ಇಲ್ಲ. ಸಿಬಿಐ ತನಿಖಾಧಿಕಾರಿ ದಾಗರ್ ಸಾಹೇಬ್ ನನ್ನ ಗ್ರಾಮಕ್ಕೆ ಆಟೋರಿಕ್ಷಾದಲ್ಲಿ ಬಂದು ಈ ಪ್ರಕರಣದ ಬಗ್ಗೆ ಕೇಳಿದರು. ಸೊಹ್ರಾಬುದ್ದೀನ್ ನ ಸಹವರ್ತಿ ಹಾಗೂ ಹಮೀದ್ ಲಾಲಾ ಕೊಲೆ ಪ್ರಕರಣದ ಸಹ ಆರೋಪಿ ಅಝಂ ನನ್ನನ್ನು ಭೇಟಿಯಾಗಿದ್ದ ಎಂದು ನಾನು ಆತನಿಗೆ ಹೇಳಿಲ್ಲ. ಆದರೆ ಸೋದರನ ಸಾವಿನ ಪ್ರಕರಣದದ ತನಿಖೆಗೆ ಸುಪ್ರೀಂ ಕೋರ್ಟಿನಲ್ಲಿ ದಾಖಲಾದ ಅಪೀಲನ್ನು ವಾಫಸ್ ಪಡೆಯಲು ಅಭಯ್ ಚುಡಸಮ ರೂ 50 ಲಕ್ಷ ಆಫರ್ ಮಾಡಿದ್ದರೆಂದು ಹೇಳಿದ್ದೆ'' ಎಂದಿದ್ದಾರೆ.

ತಾನು ತನ್ನ 2010ರ ಹೇಳಿಕೆಯಲ್ಲಿ ಹೇಳಿಲ್ಲದ ವಿಚಾರಗಳೂ ಸೇರಿಕೊಂಡಿವೆಯೆಂದು ಹಾಗೂ ತಾನು ಲಿಖಿತ ಅಫಿದಾವತ್ ನೀಡಿದ್ದಾಗಿಯೂ ನಯೀಮುದ್ದೀನ್ ಹೇಳಿದ್ದಾರೆ. ಪ್ರಕರಣದಲ್ಲಿ ದೋಷಮುಕ್ತಗೊಂಡಿದ್ದ ಚುಡಸಮ ನಯಾಮುದ್ದೀನ್ ನನ್ನು ಭೇಟಿಯಾಗಿ ಬೆದರಿಸಿದ್ದ ಎಂದು ಸಿಬಿಐ ಡಿವೈಎಸ್ಪಿ ಫೆಬ್ರವರಿ 19, 2010ರಂದು ದಾಖಲಿಸಿಕೊಂಡಿದ್ದ ನಯಾಮುದ್ದೀನ್ ಹೇಳಿಕೆ ತಿಳಿಸಿತ್ತು.

"ನಾನು ಆತನಿಗೆ (ಚುಡಸಮ) ನಾವು ದೂರು ವಾಪಸ್ ಪಡೆಯುವುದಿಲ್ಲ ಎಂದು ಹೇಳಿದಾಗ ಆತ ನನ್ನನ್ನು ಬೆದರಿಸಿ ಸೊಹ್ರಾಬುದ್ದೀನ್ ಗ ಆದ ಗತಿಯೂ ನನಗಾಗುವುದು ಎಂದ. ಅಮಿತ್ ಭಾಯಿ ತುಂಬಾ ಸಿಟ್ಟಾಗಿದ್ದಾರೆಂದು ನಿನಗೆ ತಿಳಿದಿಲ್ಲ. ನಾನು ಅಮಿತ್ ಭಾಯಿ ಜತೆ ಮಾತನಾಡುತ್ತೇನೆ, ಅವರು ನಿನ್ನನ್ನು ಮಧ್ಯ ಪ್ರದೇಶದಲ್ಲಿಯೇ ಮುಗಿಯಸಬಹುದು, ಅಮಿತ್ ಭಾಯಿಯವರ ಸರಕಾರ ಅಲ್ಲಿದೆ ಅವರನ್ನು ಈ ಅಪೀಲಿನ ಭಾಗವಾಗಿಸಿದ್ದಲ್ಲದೆ ನಿನ್ನನ್ನು ಕೊಲ್ಲಲಾಗುವುದು'' ಎಂದು ನಯಾಮುದ್ದೀನ್ 2010ರಲ್ಲಿ ಹೇಳಿಕೆ ನೀಡಿದ್ದ ಎಂದು ಸಿಬಿಐ ತಿಳಿಸಿತ್ತು. ಆದರೆ ತನ್ನ ಹೇಳಿಕೆಯ ಈ ಭಾಗವನ್ನು ಸಿಬಿಐ ತಾನಾಗಿಯೇ ಸೇರಿಸಿದ. ತಾನು ಹಾಗೆ ಹೇಳಿಲ್ಲ ಎಂದು ನಯಾಮುದ್ದೀನ್ ಸೋಮವಾರ ಹೇಳಿದ್ದಾನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In an interesting twist of events, Shaikh Naymuddin, the youngest brother of Sohrabuddin Shaikh claimed that the CBI on its own added to his statement the names of Gujarat police officer Abhay Chudasama and BJP president, Amit Shah.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more