• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ ಹೊಸ ವೈರಸ್ ಕ್ಯಾಟ್ ಕ್ಯೂ ಬಗ್ಗೆ ಭಾರತಕ್ಕೆ ಐಸಿಎಂಆರ್ ಎಚ್ಚರಿಕೆ

|

ನವದೆಹಲಿ, ಸೆಪ್ಟೆಂಬರ್ 29: ದೇಶಕ್ಕೂ ಚೀನಾ ಕ್ಯಾಟ್ ಕ್ಯೂ ಎನ್ನುವ ಹೊಸ ವೈರಸ್ ಕಾಲಿಟ್ಟಿದ್ದು, ಐಸಿಎಂಆರ್ ಎಚ್ಚರಿಕೆ ಸಂದೇಶ ರವಾನಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ನೀಡಿದ ಮಾಹಿತಿ ಪ್ರಕಾರ, ಚೀನ ದಿಂದ "ಕ್ಯಾಟ್‌ ಕ್ಯೂ ವೈರಸ್‌ (Cat Que Virus-CQV)' ಭಾರತ ಪ್ರವೇಶಿಸಿದೆ. ಅದೂ ಕರ್ನಾಟಕದಲ್ಲಿ ನಡೆಸಲಾಗಿರುವ ಎರಡು ಮಾದರಿ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬೊಜ್ಜುತನ ಹಚ್ಚಳ

ಪುಣೆಯಲ್ಲಿರುವ ರಾಷ್ಟ್ರೀ ಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆ (ಎನ್‌ಐವಿ)ಯ ವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ ವಿವಿಧ ರಾಜ್ಯಗಳಲ್ಲಿ ನಡೆಸಲಾಗಿರುವ 883 ಮಾನವರ ರಕ್ತದ ಮಾದರಿಗಳ ಪರೀಕ್ಷೆ ಪೈಕಿ ಎರಡರಲ್ಲಿ ಹೊಸ ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ 2014 ಮತ್ತು 2017ರಲ್ಲಿ ನಡೆಸಲಾಗಿರುವ ಪರೀಕ್ಷೆಯ ಪ್ರಕಾರ, ಕರ್ನಾಟಕದ ಇಬ್ಬರಿಗೆ ಒಂದು ಹಂತದಲ್ಲಿ ಕ್ಯಾಟ್‌ ಕ್ಯೂ ವೈರಸ್‌ ತಗಲಿರುವ ಸಾಧ್ಯತೆ ಇದೆ. ನಂತರದ ದಿನಗಳಲ್ಲಿ ಕ್ಯಾಟ್‌ ಕ್ಯೂ ವೈರಸ್‌ಗೆ ಪ್ರತಿಕಾಯ (CQV IgG antibodies) ಪತ್ತೆಯಾಗಿದೆ ಎಂದು ಅವರು ಕಂಡುಕೊಂಡಿದ್ದಾರೆ.

ಉಣ್ಣೆ, ಸೊಳ್ಳೆ ಮೊದಲಾದ ಕೀಟಗಳಿಂದ ಹರಡುವ ರೋಗ ಇದಾಗಿದೆ. ಇದು ಹಂದಿಗಳಲ್ಲಿ, ಕೆಲವು ಜಾತಿಯ ಸೊಳ್ಳೆಗಳಲ್ಲಿ ಕಂಡುಬರುತ್ತವೆ. ಈಗಾಗಲೇ ಕ್ಯಾಟ್‌ ಕ್ಯೂ ವೈರಸ್‌ ವಿಯೆಟ್ನಾಂ ಮತ್ತು ಚೀನ ದ ಕೆಲವು ಭಾಗಗಳಲ್ಲಿ ಕಂಡು ಬಂದಿದೆ.

ದೇಶದಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಯಾರ್ಯಾರಿಗೆ ನೀಡುವಂತೆ ಶಿಫಾರಸು?

ಲೈವ್‌ ಮಿಂಟ್‌ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ಸಸ್ತನಿ ವರ್ಗಕ್ಕೆ ಸೇರಿದ ಪರಾವಲಂಬಿಯೇ ಅದನ್ನು ಪ್ರಧಾನವಾಗಿ ರವಾನೆ ಮಾಡುತ್ತದೆ. ಹೀಗಾಗಿ ಇದು ದೇಶದ ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ಕಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಸಿಎಂಆರ್‌ ವಿಜ್ಞಾನಿಗಳು ಹೇಳಿದ್ದಾರೆ. ದೇಶದಲ್ಲಿರುವ ಸೊಳ್ಳೆಯ ವರ್ಗಗಳು ಸಿಕ್ಯೂವಿಗೆ ಬೇಗ ತುತ್ತಾಗುತ್ತವೆ ಎಂದೂ ಉಲ್ಲೇಖೀಸಲಾಗಿದೆ.

ಮುಂದಿನ ವರ್ಷ ಲಸಿಕೆ

   Bengaluru Moving ಸಾರ್ವಜನಿಕ ಸಾರಿಗೆಯನ್ನು ಜನರು ಬಳಸುತ್ತಿಲ್ಲವೇಕೆ | Part 2 | Oneindia Kannada

   ದೇಶದಲ್ಲಿ ಕೊರೊನಾಕ್ಕೆ ಲಸಿಕೆ 2021ರ ಮೊದಲ ತ್ತೈಮಾಸಿಕದಲ್ಲಿ ಲಭಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌ ತಿಳಿಸಿದ್ದಾರೆ. ಇದೇ ವೇಳೆ ಸೋಂಕು ಮತ್ತು ಅದಕ್ಕೆ ಸಂಬಂಧಿಸಿದ ಲಸಿಕೆಗಳ ಸಂಶೋಧನೆ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ https://vaccine.icmr.org.in/ ಅನ್ನು ಸಚಿವರು ಇದೇ ಸಂದರ್ಭದಲ್ಲಿ ಅನಾವರಣ ಗೊಳಿಸಿದ್ದಾರೆ.

   English summary
   As India struggles to control the spread of the novel coronavirus, a team of scientists at National Institute of Virology (NIV), ICMR in Maharashtra have warned of anothera new virus, known as 'Cat Que virus' (CQV), from China that has the potential to spread diseases in India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X