ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್ ರಹೀಮ್ ಸಿಂಗ್ ಗೆ ಪಂಚಕುಲ ನ್ಯಾಯಾಲಯದಿಂದ ಜಾಮೀನು

|
Google Oneindia Kannada News

Recommended Video

ರಾಮ್ ರಹೀಮ್ ಸಿಂಗ್ ಗೆ ಪಂಚಕುಲ ನ್ಯಾಯಾಲಯದಿಂದ ಜಾಮೀನು | Oneindia Kannada

ಚಂಡೀಗಢ, ಅಕ್ಟೋಬರ್ 05: ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಇನ್ಸಾನ್ ಅವರಿಗೆ ಇಂದು ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ.

ಡೇರಾ ಸಚ್ಛಾ ಸೌಧ ಆಶ್ರಮಗಳಲ್ಲಿ ಪುರುಷತ್ವ ಹರಣ ಮಾಡಲಾಗುತ್ತಿದೆ ಎಂಬ ಆರೋಪ ಹೊರೆಸಿ ಹಾಕಲಾಗಿದ್ದ ಪ್ರಕರಣ(castration case) ದಲ್ಲಿ ಮಾತ್ರ ಜಾಮೀನು ಸಿಕ್ಕಿದೆ.

ರಾಮ್ ರಹೀಮ್‌ ಸಿಂಗ್‌ಗೆ 20 ವರ್ಷಗಳ ಶಿಕ್ಷೆಯಾಗಿದ್ದು ಹೇಗೆ?ರಾಮ್ ರಹೀಮ್‌ ಸಿಂಗ್‌ಗೆ 20 ವರ್ಷಗಳ ಶಿಕ್ಷೆಯಾಗಿದ್ದು ಹೇಗೆ?

ಈ ಮುಂಚೆ ಸಿಬಿಐನ ವಿಶೇಷ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ನಂತರ ಅರ್ಜಿ ವಿಚಾರಣೆಯನ್ನು ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ನಡೆಸಲಾಯಿತು. ಸಿಬಿಐ ಜಡ್ಜ್ ಜಗ್ದೀಪ್ ಸಿಂಗ್ ಅವರು ಯಾವುದೇ ಷರತ್ತುಗಳಿಲ್ಲದೆ ಜಾಮೀನು ಮಂಜೂರು ಮಾಡಿದ್ದಾರೆ.

Castration case Dera chief Gurmeet Ram Rahim gets bail

ಎರಡು ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯವು ತಲಾ ಹತ್ತು ವರ್ಷದಂತೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಮೂವತ್ತು ಲಕ್ಷ ದಂಡ ವಿಧಿಸಿ, ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಮ್ ರಹೀಮ್ ಕುರಿತು ನಿಮಗೆ ಗೊತ್ತಿರದ 10 ಸಂಗತಿರಾಮ್ ರಹೀಮ್ ಕುರಿತು ನಿಮಗೆ ಗೊತ್ತಿರದ 10 ಸಂಗತಿ

ಈ ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ರಾಮ್ ರಹೀಮ್ ಅವರ ಜೈಲುವಾಸ ಮುಂದುವರೆಯಲಿದೆ. ರಾಮ್ ರಹೀಮ್ ದೋಷಿ ಎಂದು ನ್ಯಾಯಾಲಯವು ಘೋಷಿಸುತ್ತಿದ್ದಂತೆ ಹರ್ಯಾಣ, ಪಂಜಾಬ್‌ನಲ್ಲಿ ಹಿಂಸಾಚಾರ ನಡೆದಿತ್ತು. ಗಲಭೆಯಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದರು.

ರಾಮ್ ರಹೀಮ್ ವಿರುದ್ಧ ಐಪಿಸಿ ಸೆಕ್ಷನ್ 326, 417, 506, 120 ಬಿ ಅನ್ವಯ ಕೂಡಾ ಪ್ರತ್ಯೇಕವಾಗಿ ಸಿಬಿಐ ಚಾರ್ಜ್ ಶೀಟ್ ಹಾಕಿದೆ.

English summary
Panchkula CBI court judge Jagdeep singh today(October 05) granted regular bail to Dera chief Gurmeet Ram Rahim in castration case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X