ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಚುನಾವಣೆ: 331 ಕೋಟಿ ರೂ. ಮೊತ್ತದ ನಗದು, ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

|
Google Oneindia Kannada News

ನವದೆಹಲಿ, ಮಾರ್ಚ್ 18: ವಿಧಾನಸಭೆ ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ದಾಖಲೆ ಪ್ರಮಾಣದಲ್ಲಿ ನಗದು, ವಸ್ತು ವಶಪಡಿಸಿಕೊಂಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

2016ರ ಚುನಾವಣೆ ಸಂದರ್ಭದಲ್ಲಿ ವಶಕ್ಕೆ ಪಡೆಯಲಾದ ಮೊತ್ತಕ್ಕಿಂತಲೂ ಇದು ಹೆಚ್ಚಾಗಿದೆ. ಚುನಾವಣೆ ಇನ್ನೂ ಆರಂಭವಾಗದಿದ್ದರೂ ದಾಖಲೆ ಪ್ರಮಾಣದಲ್ಲಿ ವಶಕ್ಕೆ ಪಡೆದಿರುವುದು ಮಹತ್ವದ ಅಂಶವಾಗಿದೆ ಎಂದು ಆಯೋಗ ತಿಳಿಸಿದೆ.

ಪಶ್ಚಿಮ ಬಂಗಾಳ: ಬಿಜೆಪಿಯಿಂದ 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಪಶ್ಚಿಮ ಬಂಗಾಳ: ಬಿಜೆಪಿಯಿಂದ 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚುನಾವಣಾ ವೆಚ್ಚ ನಿರ್ವಹಣೆ ಪ್ರಕ್ರಿಯೆ ಭಾಗವಾಗಿ ನಾಲ್ಕು ರಾಜ್ಯಗಳು ಹಾಗೂ ಪುದುಚೇರಿಯಲ್ಲಿ ಈವರೆಗೂ 331 ಕೋಟಿ ರೂ. ಮೊತ್ತದ ವಸ್ತು ವಶಕ್ಕೆ ಪಡೆದಿರುವುದಾಗಿ ಆಯೋಗ ಹೇಳಿದೆ.

 Cash, Freebies Worth Rs 331 Crore Seized In Poll-Bound States

ಕೇರಳದಲ್ಲಿ 21 ಕೋಟಿ ರೂ ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನಲ್ಲಿ ಗರಿಷ್ಠ 127.64 ಕೋಟಿ, ಪಶ್ಚಿಮ ಬಂಗಾಳದಲ್ಲಿ 112.59 ಕೋಟಿ ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಪ್ಪು ಹಣ ತಡೆಗಾಗಿ 295 ವೆಚ್ಚ ವೀಕ್ಷಕರನ್ನು ಚುನಾವಣಾ ಸಮಿತಿ ನಿಯೋಜಿಸಿದೆ.

English summary
The government agencies already seized much more cash, liquor, drugs and other freebies and valuables in poll-bound Tamil Nadu, Kerala, Assam, West Bengal and Puducherry this time than they had done during the 2016 Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X