ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಗುಲದಲ್ಲಿ ಚಿತ್ರೀಕರಣ, ರವೀನಾ ಟಂಡನ್ ವಿರುದ್ಧ ಎಫ್ಐಆರ್

By Mahesh
|
Google Oneindia Kannada News

ಭುವನೇಶ್ವರ್, ಮಾರ್ಚ್ 07: 'ನೋ ಕ್ಯಾಮೆರಾ ಜೋನ್' ಎಂಬ ಫಲಕವನ್ನು ಲೆಕ್ಕಿಸದೆ ದೇಗುಲದಲ್ಲಿ ಶೂಟಿಂಗ್ ಮಾಡಿದ ಬಾಲಿವುಡ್ ನಟಿ ರವೀನಾ ಟಂಡನ್ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ.

11ನೇ ಶತಮಾನದ ಲಿಂಗರಾಜ ದೇಗುಲದಲ್ಲಿ ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರವೀನಾ ಟಂಡನ್ ಅವರು ಈಗ ಸಮಸ್ಯೆಗೆ ಸಿಲುಕಿದ್ದಾರೆ.

ಭಾನುವಾರದಂದು ದೇಗುಲಕ್ಕೆ ಭೇಟಿ ನೀಡಿದ್ದ ರವೀನಾ ಟಂಡನ್ ಹಾಗೂ ಚಿತ್ರ ತಂಡವು ದೇಗುಲದೊಳಗೆ ಕದ್ದುಮುಚ್ಚಿ ಮೊಬೈಲ್ ನಲ್ಲಿ ಚಿತ್ರೀಕರಿಸಿದೆ.

ಟಂಡನ್ ಅವರು ದೇಗುಲದ ಆವರಣದಲ್ಲಿ ನಿಂತು, ಸೌಂದರ್ಯವರ್ಧಕ ಸಲಹೆಗಳನ್ನು ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೇಲೆ ನಮಗೆ ತಿಳಿದು ಬಂದಿತು. ಹೀಗಾಗಿ, ದೂರು ದಾಖಲಿಸಿದೆವು ಎಂದು ದೇಗುಲದ ಆಡಳಿತ ಮಂಡಳಿಯ ಮುಖ್ಯಸ್ಥ ರಾಜೀವ್ ಲೋಚಾನ ಪರಿದಾ ಅವರು ಹೇಳಿದ್ದಾರೆ.

Case filed against actor Raveena Tandon for shooting in No Camera Zone inside Lingaraj temple

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಫೋನ್ ಮೂಲಕ ಪ್ರತಿಕ್ರಿಯೆ ನೀಡಿರುವ ರವೀನಾ, ಈ ವಿವಾದದ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಯಾರಿಗೂ ಚಿತ್ರೀಕರಣ ಮಾಡಿ ಎಂದು ಹೇಳಿಲ್ಲ. ನಾನು ಶೂಟಿಂಗ್ ನಲ್ಲಿ ಪಾಲ್ಗೊಂಡಿಲ್ಲ ಎಂದಿದ್ದಾರೆ.

'ನಾನು ದೇಗುಲದಲ್ಲಿ ಓಡಾಡುವಾಗ ಪ್ರವಾಸಿಗರು ಅನೇಕ ಮಂದಿ ನನ್ನ ಬಳಿ ಬಂದು ಮಾತನಾಡಿಸಿ, ಸೆಲ್ಫಿ ಕ್ಲಿಕ್ ಮಾಡಿಸಿಕೊಂಡು ಹೋಗಿದ್ದಾರೆ. ಈ ಪೈಕಿ ಕೆಲವರು ನನ್ನ ಫಿಟ್ನೆಸ್ ಹಾಗೂ ಬ್ಯೂಟಿ ಟಿಪ್ಸ್ ಕೇಳಿದರು. ಅವರು ಕೇಳಿದ ಪ್ರಶ್ನೆಗೆ ನಾನು ಉತ್ತರಿಸಿದೆ. ಇದನ್ನೇ ವಿಡಿಯೋ ಮಾಡಿ ಯಾರಾದರೂ ಹಾಕಿದ್ದರೆ, ಅದಕ್ಕೆ ನಾನು ಹೊಣೆಯಲ್ಲ' ಎಂದಿದ್ದಾರೆ.

English summary
A case has been registered gainst Bollywood actress Raveena Tandon for allegedly shooting an advertisement in the 'No Camera Zone' inside the premises of the 11th century Lingagarj temple in Bhubaneswar. The temple's administration has lodged a police complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X