ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿನ ತಂದೆಯದೇ ತಪ್ಪೆಂದ ಹೇಮಾಗೆ ಟ್ವೀಟ್ ಛೀಮಾರಿ

|
Google Oneindia Kannada News

ಜೈಪುರ., ಜು. 08: ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ನಟಿ, ಸಂಸದೆ ಹೇಮಾಮಾಲಿನಿ ಮಾಡಿರುವ ಟ್ವೀಟ್ ವಿವಾದ ಎಬ್ಬಿಸಿದೆ. ಅಪಘಾತದಲ್ಲಿ ಮೃತಪಟ್ಟ ಬಾಲಕಿ ತಂದೆ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕಿತ್ತು ಎಂದು ಬರೆದಿಕೊಂಡಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಬಾಲಕಿ ಸಾವಿಗೆ ಸಂತಾಪ ಸೂಚಿಸಿರುವ ಹೇಮಾಮಾಲಿನಿ, ಬಾಲಕಿಯ ತಂದೆ ನಿಯಮಗಳನ್ನು ಪಾಲಿಸಿದಿದ್ದರೆ ಕಾರು ಅಪಘಾತ ಆಗುತ್ತಿರಲಿಲ್ಲ ಎಂದು ಬರೆದಿದ್ದಾರೆ. ಗಾಯದಿಂದ ನರಳುತ್ತಿದ್ದ ನಾನು ಆಸ್ಪತ್ರೆ ಸೇರಿದರೆ ಕೆಲವರು ಸಭ್ಯತೆ ಮೀರಿ ಮಾತನಾಡಿದ್ದಾರೆ ಎಂದು ಹೇಮಮಾಲಿನಿ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಗಳ ವಿರುದ್ಧವೂ ಹೇಮಾ ಕೆಂಗಣ್ಣು ಬೀರಿದ್ದಾರೆ.[ಮಗು ಬಲಿ ಪಡೆದ ಹೇಮಾಮಾಲಿನಿ ಮರ್ಸಿಡಿಸ್ ಬೆಂಜ್]

hema

ಜೈಪುರದ ದೌಸಾ ಬಳಿ ನಟಿ ಹೇಮಾಮಾಲಿನಿ ಕಾರು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಐದು ವರ್ಷದ ಮಗುವೊಂದು ಸಾವನ್ನಪ್ಪಿತ್ತು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ನಟಿ ಹೇಮಾಮಾಲಿನಿ ಜೊತೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಮಗುವಿನ ಜೀವ ಉಳಿಯುತ್ತಿತ್ತು ಎಂಬ ವಿಚಾರದಲ್ಲಿ ಟೀಕೆ ವ್ಯಕ್ತವಾಗಿತ್ತು. ಇದೀಗ ಹೇಮಾಮಾಲಿನಿ ಟ್ವೀಟ್ ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ಮರು ಟ್ವೀಟ್ ಮಾಡುತ್ತಿದ್ದಾರೆ.['ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ 34, ಅಭಿಮಾನಿಗಳಿಂದ ಟ್ವೀಟ್ಸ್]

ನಿಮ್ಮ ಹೇಳಿಕೆ ನಿಮಗೆ ನಾಚಿಕೆ ತರಬೇಕು, ಮೊದಲು ನಿಮ್ಮ ಚಾಲಕನನ್ನು ಸಮರ್ಥನೆ ಮಾಡುವುದನ್ನು ನಿಲ್ಲಿಸಿ, ಮಗು ಕಳೆದುಕೊಂಡ ಪಾಕರ ನೋವು ನಿಮಗೆಲ್ಲಿ ಅರ್ಥವಾಗಬೇಕು? ಎಂದು ಅನೇಕ ರೀತಿಯಲ್ಲಿ ಹೇಮಾ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

ಹೇಮಮಾಲಿನಿ ಮರ್ಸಿಡಿಸ್ ಕಾರಿನ ಚಾಲಕ ಮಹೇಶ್ ಠಾಕೂರ್ ನನ್ನ ಬಂಧಿಸಿದ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ರಾಜಸ್ಥಾನದ ಜೈಪುರದಿಂದ 50 ಕಿಮೀ ದೂರದಲ್ಲಿರುವ ದೌಸಾ ಬಳಿ ಆಲ್ಟೋ ಕಾರು ಮತ್ತು ಹೇಮಮಾಲಿನಿ ಚಲಿಸುತ್ತಿದ್ದ ಮರ್ಸಿಡಿಸ್ ಕಾರಿನ ನಡುವೆ ಡಿಕ್ಕಿಯಾಗಿ ಮಗುವೊಂದು ಸಾವನ್ನಪ್ಪಿತ್ತು.

English summary
Hours after Hema Malini broke her silence about the fatal accident in which a child died and blamed the girl's father for the accident, the 4-year-old's father slammed the actress-turned-BJP MP for her insensitivity. "My fault? There is no other way to go on that road.I even switched on indicators. She is a big name but must atleast think before speaking," father of girl who died in Dausa accident told ANI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X