ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಸಿಗದೇ ಗಲಾಟೆ ಮಾಡಿದ್ದ ಕೋತಿಗೆ ಜೀವಾವಧಿ ಶಿಕ್ಷೆ!

|
Google Oneindia Kannada News

ಕಾನ್ಪುರ, ಜೂನ್ 21 : ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ದಾಂಧಲೆ ಮಾಡಿದ್ದ ಮಂಗವೊಂದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 6 ವರ್ಷದ ಮಂಗ ಇನ್ನು ಮುಂದೆ ಕಾನ್ಪುರದ ಮೃಗಾಲಯದಲ್ಲಿ ಸೆರೆಯಲ್ಲಿ ಕಾಲ ಕಳೆಯಬೇಕಿದೆ.

ಕೌಲ ಎಂಬ ಆರು ವರ್ಷದ ಮಂಗನನ್ನು ಕಾನ್ಪುರದ ಮಾಟ-ಮಂತ್ರ ಮಾಡುವ ವ್ಯಕ್ತಿಯೊಬ್ಬ ಸಾಕಿದ್ದ. ಅದಕ್ಕೆ ಪ್ರತಿದಿನ ಕುಡಿಯಲು ಮದ್ಯವನ್ನು ನೀಡುತ್ತಿದ್ದ. ಇದರಿಂದಾಗಿ ಮಂಗಕ್ಕೆ ಮದ್ಯ ಚಟವಾಗಿ ಹೋಗಿತ್ತು. ಸುಮಾರು 4 ತಿಂಗಳ ಹಿಂದೆ ಆತ ತೀರಿಕೊಂಡಿದ್ದ.

ಸ್ವಚ್ಛ ಭಾರತ ಅಭಿಯಾನಕ್ಕೆ ಮಾಡೆಲ್ ನಂತಿದೆ ನೋಡಿ ಈ ಮಂಗ...ಸ್ವಚ್ಛ ಭಾರತ ಅಭಿಯಾನಕ್ಕೆ ಮಾಡೆಲ್ ನಂತಿದೆ ನೋಡಿ ಈ ಮಂಗ...

ಸಾಕಿದ್ದ ವ್ಯಕ್ತಿ ಸಾವನ್ನಪ್ಪಿದ್ದ ಬಳಿಕ ಮಂಗ ಅನಾಥವಾಯಿತು, ಅದಕ್ಕೆ ಮದ್ಯ ಪೂರೈಕೆಯೂ ನಿಂತು ಹೋಯಿತು. ಇದರಿಂದಾಗಿ ಆಕ್ರೋಶಗೊಂಡ ಅದು ಜನರ ಮೇಲೆ ದಾಳಿ ಮಾಡಲು ಆರಂಭಿಸಿತು. ಸುಮಾರು 250 ಜನರಿಗೆ ಅದು ಕಚ್ಚಿ ಗಾಯಗೊಳಿಸಿದೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಗ್ರಾಮದ 20 ಮಂದಿಗೆ ಕಚ್ಚಿದ ಒಂಟಿ ಮಂಗ, ಆತಂಕ ಗ್ರಾಮದ 20 ಮಂದಿಗೆ ಕಚ್ಚಿದ ಒಂಟಿ ಮಂಗ, ಆತಂಕ

Captivity For Alcoholic Monkey In Kanpur

ಅರಣ್ಯ ಇಲಾಖೆ ಅಧಿಕಾರಿಗಳು ಕೌಲನನ್ನು ಹಿಡಿದು ಕಾನ್ಪುರ ಮೃಗಾಲಯಕ್ಕೆ ಸ್ಥಳಾಂತರ ಮಾಡಿದರು. ಕೆಲವು ತಿಂಗಳ ಕಾಲ ಐಸೋಲೇಷನ್‌ನಲ್ಲಿಟ್ಟು ಅದರ ವರ್ತನೆ ಬದಲಾಗುತ್ತದೆಯೇ? ಎಂದು ಪರಿಶೀಲಿಸಲಾಯಿತು.

ವೈರಲ್ ವಿಡಿಯೋ: ದೇವಾಲಯದ ಗಂಟೆ ಬಾರಿಸುತ್ತಿರುವ ಕೋತಿ!ವೈರಲ್ ವಿಡಿಯೋ: ದೇವಾಲಯದ ಗಂಟೆ ಬಾರಿಸುತ್ತಿರುವ ಕೋತಿ!

ಮದ್ಯ ಸಿಗದ ದಿನ ಮಂಗದ ವರ್ತನೆ ಅತಿರೇಕಕ್ಕೆ ಹೋಗುತ್ತಿತ್ತು. ಅಂತಿಮವಾಗಿ ವೈದ್ಯರು ಮಂಗವನ್ನು ಸೆರೆಯಲ್ಲಿ ಇಡಬೇಕು ಎಂದು ಶಿಫಾರಸು ಮಾಡಿದ್ದಾರೆ. ಅದರ ವರ್ತನೆ ಸರಿ ಹೋದರೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು.

ಕೌಲ ಬದುಕಿರುವ ತನಕ ಇನ್ನು ಮೃಗಾಲಯದಲ್ಲಿ ಸೆರೆಯಲ್ಲಿ ಇರಬೇಕು. ಅದಕ್ಕಾಗಿಯೇ ಪ್ರತ್ಯೇಕವಾದ ಕೊಠಡಿಯೊಂದನ್ನು ನಿರ್ಮಾಣ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅದನ್ನು ಹೊರಗೆ ಬಿಟ್ಟರೆ ಜನರ ಮೇಲೆ ದಾಳಿ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
An 6 year old alcoholic monkey Kanpur will remain in captivity for the rest of life. Aggressive behavior monkey named Kalua bit over 250 people, including one who died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X