• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಬಿಕ್ಕಟ್ಟನ್ನು ನೋಡಿಕೊಂಡು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ; ಸುಪ್ರೀಂ

|
Google Oneindia Kannada News

ನವದೆಹಲಿ, ಏಪ್ರಿಲ್ 28: ರಾಷ್ಟ್ರೀಯ ಬಿಕ್ಕಟ್ಟು ಎದುರಾಗಿರುವ ಈ ಸಮಯದಲ್ಲಿ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ದೇಶದಲ್ಲಿ ವೈದ್ಯಕೀಯ ಆಮ್ಲಜನಕ ಹಾಗೂ ಅಗತ್ಯ ಔಷಧಗಳ ಸಾಗಣೆ, ವೈದ್ಯಕೀಯ ಸೌಲಭ್ಯಗಳು ಹಾಗೂ ಕೇಂದ್ರದ ಲಸಿಕಾ ದರದ ಕುರಿತು ಸುಪ್ರೀಂ ಕೋರ್ಟ್ ವಿವರ ಕಲೆ ಹಾಕಿತು.

ಇದು ರಾಷ್ಟ್ರೀಯ ಬಿಕ್ಕಟ್ಟು. ಇಂಥ ಸಂದರ್ಭದಲ್ಲಿ ರಾಷ್ಟ್ರೀಯ ಸಾಂವಿಧಾನಿಕ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಮೂಕಪ್ರೇಕ್ಷಕನಾಗಿ ಕುಳಿತಿರಲು ಸಾಧ್ಯವಿಲ್ಲ ಎಂದು ಹೇಳಿದ್ದು, ನ್ಯಾಯಾಲಯದ ಹಸ್ತಕ್ಷೇಪವನ್ನು ಸೂಕ್ತ ದೃಷ್ಟಿಕೋನದಿಂದ ಪ್ರಶಂಸಿಸಬೇಕಿದೆ ಎಂದು ಹೇಳಿದೆ. ಮೂಲಭೂತ ಹಕ್ಕುಗಳ ರಕ್ಷಣೆಗೆ 32ನೇ ವಿಧಿಯನ್ವಯ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ತಿಳಿಸಿದೆ.

ಈ ರಾಷ್ಟ್ರೀಯ ಬಿಕ್ಕಟ್ಟಿನಲ್ಲಿ ಕೋರ್ಟ್ ಎಲ್ಲವನ್ನು ಸುಮ್ಮನೆ ನೋಡಿಕೊಂಡು ನಿಲ್ಲುವುದಿಲ್ಲ ಎಂದು ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ ಅವರನ್ನೊಳಗೊಂಡ ಪೀಠವು ತಿಳಿಸಿದೆ. ಈ ಕುರಿತು ನ್ಯಾಯಾಲಯ ಸ್ವಯಂ ಪ್ರಕರಣ ದಾಖಲಿಸಿಕೊಂಡಿತ್ತು.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠವು, "ಸುಪ್ರೀಂ ಕೋರ್ಟ್ ಎಲ್ಲಾ ಗಡಿ ಮೀರಿದ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿದೆ" ಎಂದು ತಿಳಿಸಿತು. ಶುಕ್ರವಾರ ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸುವುದಾಗಿ ತಿಳಿಸಿದ ನ್ಯಾಯಾಲಯ, ಈ ದೇಶದ ನಾಗರಿಕರ ಅಗತ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರದಿಂದ ತಾನು ಏಕೀಕೃತ ರಾಷ್ಟ್ರೀಯ ಯೋಜನೆ ಬಯಸುವುದಾಗಿ ತಿಳಿಸಿದೆ.

ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೋವಿಡ್ ಸೋಂಕು
ಇದುವರೆಗೂ ನೀವು ಏನು ಮಾಡಿದ್ದೀರೋ ಅದು ಒಂದು ವಿಷಯವಾಯಿತು. ಆದರೆ ಭವಿಷ್ಯದಲ್ಲಿ ಏನು ಮಾಡಬೇಕೆಂದುಕೊಂಡಿದ್ದೀರೋ ಅದನ್ನು ಸುಪ್ರೀಂ ಕೋರ್ಟ್ ತಿಳಿದುಕೊಳ್ಳಲು ಬಯಸುತ್ತದೆ. ನಾವು ಎಲ್ಲಿ ನಿಂತಿದ್ದೇವೆ. ನಮ್ಮ ಬಳಿ ಭವಿಷ್ಯಕ್ಕೆ ಏನೇನು ಯೋಜನೆಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಕೇಂದ್ರ ಸರ್ಕಾರ ಪ್ರತಿನಿಧಿಸುವ ಸಾಲಿಸಿಟರ್ ಜನರನ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದೆ.

ಕೊರೊನಾ ಏಕಾಏಕಿ ಏರಿಕೆಯಾಗಿ ಬಿಕ್ಕಟ್ಟು ಸೃಷ್ಟಿಸಿರುವ ನಡುವೆ ರಾಜ್ಯ ಸರ್ಕಾರಗಳಿಗೆ ನೆರವಾಗಲು ಹೇಗೆ ಕೇಂದ್ರವು ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದೆ ಎಂಬುದರ ಕುರಿತು ಸರ್ಕಾರ ಅಫಿಡವಿಟ್ ಸಲ್ಲಿಸಿರುವುದಾಗಿ ಮೆಹ್ತಾ ಅವರು ತಿಳಿಸಿದರು.

English summary
"We cannot remain a mute spectator in the times of a national crisis”, said the Supreme Court as it sought details of availability of medical oxygen, supply of essential medicines, ramping up of critical medical infrastructure in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X