ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿರ್‌ ಅರಣ್ಯದ 21 ಸಿಂಹಗಳ ಸಾವಿನ ಹಿಂದಿನ ರಹಸ್ಯ ಬಯಲಾಯ್ತು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಲ್ಲಿ ಕೆಲವೇ ದಿನದಲ್ಲಿ 21 ಸಿಂಹಗಳು ಸತ್ತಿದ್ದು ಆತಂಕಕ್ಕೆ ಕಾರಣವಾಗಿತ್ತು. ಆದರೀಗ ಅದಕ್ಕೆ ಕಾರಣ ಪತ್ತೆಯಾಗಿದೆ.

ಗುಜರಾತ್ ನ ಗಿರ್ ಅರಣ್ಯದಲ್ಲಿ 18 ದಿನದಲ್ಲಿ 31 ಸಿಂಹ ಸಾವುಗುಜರಾತ್ ನ ಗಿರ್ ಅರಣ್ಯದಲ್ಲಿ 18 ದಿನದಲ್ಲಿ 31 ಸಿಂಹ ಸಾವು

ಸರಣಿ ಸಿಂಹಗಳ ಸಾವಿಗೆ ಕ್ಯಾನಿನ್ ಡಿಸ್ಟೆಂಪರ್ ಎಂಬ ವೈರಸ್ (ಸಿಡಿವಿ) ಕಾರಣ ಎಂದು ವನ್ಯಜೀವಿ ತಜ್ಞರು ಪತ್ತೆ ಹಚ್ಚಿದ್ದಾರೆ. ಸತ್ತ ಹಲವು ಸಿಂಹಗಳ ದೇಹದಲ್ಲಿ ಸಿಡಿವಿ ವೈರಾಣು ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿ(ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ(ಎನ್‍ಐವಿ) ಹೇಳಿದೆ. ಈ ಸಂಸ್ಥೆಗಳು ಸತ್ತ ಸಿಂಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದವು.

ಗುಜರಾತ್ ನ ಗಿರ್ ಅರಣ್ಯದಲ್ಲಿ 11 ಸಿಂಹಗಳ ಕಳೇಬರಗಳು ಪತ್ತೆ ಗುಜರಾತ್ ನ ಗಿರ್ ಅರಣ್ಯದಲ್ಲಿ 11 ಸಿಂಹಗಳ ಕಳೇಬರಗಳು ಪತ್ತೆ

ಸಿಂಹಗಳನ್ನು ಈ ವೈರಾಣುವಿನಿಂದ ಪಾರು ಮಾಡಲು ವನ್ಯಜೀವಿ ಇಲಾಖೆಯು ಅಮೆರಿಕದಿಂದ 300 ವೈರಾಣು ನಿರೋಧಕ ಚುಚ್ಚುಮದ್ದುಗಳನ್ನು ಕೂಡಲೇ ತರಿಸಲಾಗುತ್ತಿದೆ ಎಂದು ಐಸಿಎಂಆರ್‌ ಹೇಳಿದೆ.

Canine Distemper Virus found in some dead lions in Gir forest

ಪೂರ್ವ ಆಫ್ರಿಕಾದಲ್ಲಿ ಸಹ ಈ ವೈರಾಣು ವನ್ಯಜೀವಿಗಳಿಗೆ ಭಾರಿ ಹಾನಿ ಮಾಡಿತ್ತು. ಕೇವಲ ಸಿಂಹಗಳನ್ನಷ್ಟೆ ಅಲ್ಲ ಎಲ್ಲ ರೀತಿಯ ವನ್ಯಜೀವಿಗಳನ್ನು ಕಾಡುವ ಈ ವೈರಾಣು ಪೂರ್ಣ ಆಫ್ರಿಕಾದಲ್ಲಿ ಶೇ 30% ವನ್ಯಜೀವಿಗಳ ಜೀವಕ್ಕೆ ಎರವಾಗಿತ್ತು.

3 ಸಿಂಹಗಳಿಂದ ಒಡೆಯನನ್ನು ಕಾಪಾಡಿದ ನಿಯತ್ತಿನ ನಾಯಿ 3 ಸಿಂಹಗಳಿಂದ ಒಡೆಯನನ್ನು ಕಾಪಾಡಿದ ನಿಯತ್ತಿನ ನಾಯಿ

ಅಮೆರಿಕದಿಂದ ತರಿಸಲಾಗುತ್ತಿರುವ ಚುಚ್ಚುಮದ್ದನ್ನು ಕೂಡಲೇ ಗಿರ್ ಅರಣ್ಯ ಪ್ರದೇಶದ ಸಿಂಹಗಳಿಗೆ ಮತ್ತು ಅಲ್ಲಿನ ಇತರ ವನ್ಯಜೀವಿಗಳಿಗೆ ನೀಡಲಾಗುತ್ತದೆ ಎಂದು ಐಸಿಎಂಆರ್‌ ಸಿಬ್ಬಂದಿ ಹೇಳಿದ್ದಾರೆ.

ಗಿರ್‌ ಪ್ರದೇಶದಲ್ಲಿ ಸತತವಾಗಿ ಅಸುನೀಗಿದ ಸಿಂಹಗಳು ರಾಷ್ಟ್ರದ ಗಮನ ಸೆಳೆದಿದ್ದವು. ಪ್ರಾಣಿ ಪ್ರಿಯರು ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಸಿಂಹಗಳ ನಡುವೆ ಬೇಟೆ ಪ್ರದೇಶ ಹಂಚಿಕೆಗಾಗಿ ಯುದ್ಧ ನಡೆದು ಸಿಂಹಗಳು ಸಾಯುತ್ತಿವೆ ಎಂದು ಮೊದಲ ನಂಬಲಾಗಿತ್ತು. ಆದರೆ ಅದು ಸುಳ್ಳೆಂದು ಈಗ ತಿಳಿದುಬಂದಿದೆ.

English summary
21 Lions died is small spite of time in Gir forest. After the investigation and postmortem of the lion found that Canine Distemper Virus there in some dead lions body. MCMR is being brought 300 vaccines to prevent virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X