ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಸಾಂಕ್ರಾಮಿಕದ ಮೂಲ 'ಸೂಪರ್‌ಬಗ್‌' ಅಂಡಮಾನ್‌ನಲ್ಲಿ ಪತ್ತೆ

|
Google Oneindia Kannada News

ನವದೆಹಲಿ, ಮಾರ್ಚ್ 18: ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕದ ಪ್ರಕರಣಗಳು ಮತ್ತೆ ಕಳವಳಕಾರಿ ರೀತಿಯಲ್ಲಿ ಏರಿಕೆಯಾಗುತ್ತಿದೆ. ಈ ನಡುವೆ ಸಂಶೋಧಕರು ಮೊದಲ ಬಾರಿಗೆ, ಬಹುಔಷಧ-ಪ್ರತಿರೋಧಕ ಜೀವಿ 'ಸೂಪರ್‌ಬಗ್‌'ಅನ್ನು ಪತ್ತೆಹಚ್ಚಿದ್ದಾರೆ. ಈ ಸೂಪರ್‌ಬಗ್‌ಗಳು ಭಾರತದ ಮರಳು ತುಂಬಿದ ಬೀಚ್‌ಗಳಲ್ಲಿ ಕಂಡುಬಂದಿವೆ. ಈ ಬ್ಯಾಕ್ಟೀರಿಯಾಗಳು ಕೋವಿಡ್ ಬಳಿಕದ ಬಹುದೊಡ್ಡ, ಮಾರಕ ಸಾಂಕ್ರಾಮಿಕಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಶೋಧನೆಯನ್ನು ಮಹತ್ವದ ಆವಿಷ್ಕಾರ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಕ್ಯಾಂಡಿಡಾ ಆರಿಸ್ ಬ್ಯಾಕ್ಟೀರಿಯಾ ಅಸ್ತಿತ್ವದ ಬಗ್ಗೆ ಸ್ಪಷ್ಟ ಪುರಾವೆ ಸಿಕ್ಕಿದೆ. ಸಿ ಆರಿಸ್ ಎಂದೂ ಕರೆಯಲಾಗುವ ಇವುಗಳನ್ನು 'ಸೂಪರ್‌ಬಗ್' ಎಂದು ಗುರುತಿಸಲಾಗುತ್ತದೆ. ಏಕೆಂದರೆ ಇದು ಮುಖ್ಯ ಶಿಲೀಂದ್ರ ನಿಗ್ರಹ ಚಿಕಿತ್ಸೆಗೆ ಪ್ರತಿರೋಧ ಒಡ್ಡುತ್ತದೆ ಎಂದು ಮಾರ್ಚ್ 16ರಂದು ಎಂ ಬಯೋ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿ ತಿಳಿಸಿದೆ.

ಸೂಪರ್ ಬಗ್ ಎದುರಿಸಲು ಸನ್ನದ್ಧರಾಗಿ...ಸೂಪರ್ ಬಗ್ ಎದುರಿಸಲು ಸನ್ನದ್ಧರಾಗಿ...

ಕೋವಿಡ್-19 ಸಾಂಕ್ರಾಮಿಕವು ಸಿ. ಆರಿಸ್ ಸಾಂಕ್ರಾಮಿಕದ ಹರಡುವಿಕೆಗೆ ಪೂರಕವಾದ ಸನ್ನಿವೇಶವನ್ನು ಸೃಷ್ಟಿಸಿವೆ ಎಂದು ವಿಜ್ಞಾನಿಯೊಬ್ಬರು ಇತ್ತೀಚೆಗೆ ಎಚ್ಚರಿಸಿದ್ದರು.

ದೆಹಲಿ ವಿಶ್ವವಿದ್ಯಾಲಯದ ಡಾ. ಅನುರಾಧಾ ಚೌಧರಿ ನೇತೃತ್ವದ ತಂಡವು, ಅಂಡಮಾನ್ ದ್ವೀಪದ ಸುತ್ತಲಿನಿಂದ ಎಂಟು ನೈಸರ್ಗಿಕ ತಾಣಗಳಿಂದ ಸಂಗ್ರಹಿಸಿ ಮಣ್ಣು ಮತ್ತು ನೀರಿನ 48 ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಇದರಲ್ಲಿ ಬೀಚ್‌ನ ಮರಳು, ತೀರದಲ್ಲಿನ ಕಲ್ಲುಗಳು, ಚೌಗು ಮತ್ತು ಪೊದೆಗಳ ಮಾದರಿಗಳು ಸೇರಿವೆ.

ಎರಡು ಸ್ಥಳಗಳಲ್ಲಿ ಸಿ. ಆರಿಸ್

ಎರಡು ಸ್ಥಳಗಳಲ್ಲಿ ಸಿ. ಆರಿಸ್

ಎರಡು ಸ್ಥಳಗಳಲ್ಲಿ ಸಿ ಆರಿಸ್ ಇರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಒಂದು ಯಾವ ಜನರೂ ಓಡಾಡದ ಉಪ್ಪು ಜವುಳಿನ ತೇವಾಂಶಯುತ ಭೂಮಿ ಮತ್ತು ಇನ್ನೊಂದು ಅತ್ಯಂತ ಜನನಿಬಿಡ ಬೀಚ್.

ಬೀಚ್‌ನಲ್ಲಿನ ಎಲ್ಲ ಬಹು ಔಷಧ ಪ್ರತಿರೋಧಕಗಳಿಂದ ಮತ್ತು ಜವುಳು ನೆಲದಲ್ಲಿ ಕಾಣಿಸುವ ಇತರೆ ಎಲ್ಲ ಜೀವಿಗಳಿಗಿಂತಲೂ ಸಿ. ಆರಿಸ್ ಪ್ರತ್ಯೇಕವಾಗಿ ಇರುತ್ತದೆ. ಜವುಗಿನಲ್ಲಿ ಕಂಡುಬಂದ ಒಂದು ತಳಿಯು ಔಷಧ-ನಿಗ್ರಹವಾಗಿರಲಿಲ್ಲ ಮತ್ತು ಇತರೆ ತಳಿಗಳಿಗಿಂತ ಅಧಿಕ ಉಷ್ಣತೆಯಲ್ಲಿ ನಿಧಾನವಾಗಿ ಬೆಳೆಯುತ್ತವೆ. ಈ ತಳಿಯು ಸಿ. ಆರಿಸ್‌ನ ಇತರೆ ರೂಪಾಂತರಗಳಿಗಿಂತ ವ್ಯಾಪಕವಾಗಿರಬಹುದು ಎಂದು ವಿಜ್ಞಾನಗಳು ಅಭಿಪ್ರಾಯಪಟ್ಟಿದ್ದಾರೆ.

ಮನುಷ್ಯನ ದೇಹದ ಉಷ್ಣತೆ

ಮನುಷ್ಯನ ದೇಹದ ಉಷ್ಣತೆ

ಈ ತಳಿಯು ಇನ್ನೂ ಮನುಷ್ಯ ಹಾಗೂ ಇತರೆ ಸಸ್ತನಿಗಳ ದೇಹದ ಅಧಿಕ ಉಷ್ಣಾಂಶಕ್ಕೆ ಹೊಂದಿಕೊಂಡಿಲ್ಲದೆ ಇರಬಹುದು. ಅಂಡಮಾನ್ ದ್ವೀಪದಲ್ಲಿ ಕಂಡುಬಂದಿರುವ ಸಿ. ಆರಿಸ್, ಅಲ್ಲಿ ಹುಟ್ಟಿದ್ದೇ ಅಥವಾ ಸಹಜವಾಗಿಯೇ ಅಲ್ಲಿ ಜೀವಿಸುತ್ತಿವೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಬಾಲ್ಟಿಮೋರ್‌ನ ಜಾನ್ಸ್ ಹಾಕಿನ್ಸ್ ಬ್ಲೂಮ್‌ಬರ್ಗ್ ಶಾಲೆಯ ಅಣು ವಿಭಾಗದ ಮುಖ್ಯಸ್ಥ ಡಾ. ಅರ್ಟುರೊ ಕ್ಯಾಸಡೆವಲ್ ಹೇಳಿದ್ದಾರೆ.

ಹುಟ್ಟುತ್ತಲೇ ಮಗುವಿನಲ್ಲಿತ್ತು ಕೊರೊನಾವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಹುಟ್ಟುತ್ತಲೇ ಮಗುವಿನಲ್ಲಿತ್ತು ಕೊರೊನಾವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ

ಯಾವ ಚಿಕಿತ್ಸೆಗೂ ವಾಸಿಯಾಗೊಲ್ಲ

ಯಾವ ಚಿಕಿತ್ಸೆಗೂ ವಾಸಿಯಾಗೊಲ್ಲ

ಈ ಬ್ಯಾಕ್ಟೀರಿಯಾ ಜನರಿಂದಲೇ ಪರಿಚಯವಾಗಿದ್ದರೂ ಇರಬಹುದು. ಈ ಸೂಪರ್‌ಬಗ್‌ನಿಂದ ಉಂಟಾಗುವ ಸೋಂಕು ಜ್ವರ ಹಾಗೂ ಚಳಿ ಉಂಟಾಗುವ ಮುನ್ನ ಯಾವುದೇ ಲಕ್ಷಣ ತೋರಿಸುವುದಿಲ್ಲ. ಈ ಲಕ್ಷಣಗಳು ಯಾವುದೇ ಔಷಧ ಚಿಕಿತ್ಸೆಗೆ ವಾಸಿಯಾಗುವುದಿಲ್ಲ. ಚರ್ಮದ ಮೇಲೆ ಉಳಿದುಕೊಳ್ಳಬಲ್ಲ ಸಿ ಆರಿಸ್, ಗಾಯದ ಮೂಲಕ ದೇಹದ ಒಳಗೆ ಪ್ರವೇಶಿಸುತ್ತದೆ. ಅದು ಒಮ್ಮೆ ರಕ್ತದ ಹರಿವಿನೊಳಗೆ ಪ್ರವೇಶಿಸಿದರೆ ತೀವ್ರ ಅನಾರೋಗ್ಯ ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಈ ಸ್ಥಿತಿಯು ಪ್ರತಿ ವರ್ಷ 11 ಮಿಲಿಯನ್‌ವರೆಗೂ ಜನರ ಸಾವಿಗೆ ಕಾರಣವಾಗುತ್ತದೆ.

ಎಲ್ಲ ಭಾಗಗಳಿಗೂ ವ್ಯಾಪಿಸಿದೆ

ಎಲ್ಲ ಭಾಗಗಳಿಗೂ ವ್ಯಾಪಿಸಿದೆ

ಈ ಸೂಕ್ಷ್ಮಜೀವಿಯು ಈಗಿರುವ ಔಷಧಗಳನ್ನು ಎದುರಿಸುವಷ್ಟು ಪ್ರಬಲವಾಗಿದೆ. ಅದು ಪರಿಸರ ವ್ಯವಸ್ಥೆಯ ಯಾವುದೇ ಭಾಗದಲ್ಲಿಯೂ ಜೀವಿಸಬಹುದು. ಹೀಗಾಗಿ ಅದಕ್ಕೆ ಚಿಕಿತ್ಸೆ ನೀಡುವುದು ಬಹಳ ಕಷ್ಟ. ಸಿ. ಆರಿಸ್ ಹೇಗೆ ಹರಡುತ್ತಿದೆ ಎನ್ನುವುದು ವಿಜ್ಞಾನಿಗಳ ಊಹೆಗೂ ಇನ್ನು ಸಿಕ್ಕಿಲ್ಲ.

ಹೆಚ್ಚುತ್ತಿರುವ ವಾತಾವರಣದ ಉಷ್ಣತೆಯಿಂದಾಗಿ ಸಿ. ಆರಿಸ್ ಕೂಡ ಅಧಿಕ ತಾಪಮಾನದಲ್ಲಿ ಬದುಕುವುದನ್ನು ಕಲಿತುಕೊಳ್ಳುತ್ತಿದೆ. ಮನುಷ್ಯರ ದೇಶದ ಉಷ್ಣಾಂಶದಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳು ಬದುಕಲಾರವು. ಆದರೆ ಸಿ. ಆರಿಸ್ ಆ ಸಾಮರ್ಥ್ಯ ಪಡೆದುಕೊಳ್ಳುತ್ತಿದೆ. ಈ ಸೋಂಕು ಜಗತ್ತಿನ ಎಲ್ಲ ಭಾಗಗಳನ್ನೂ ಕಾಳ್ಗಿಚ್ಚಿನಂತೆ ವ್ಯಾಪಿಸಿದೆ. ಇದು ಮನುಷ್ಯ ಸಂಪರ್ಕದಿಂದಲು ಹರಡಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಪ್ರಕರಣಗಳು

ಬ್ರಿಟನ್‌ನಲ್ಲಿ ಪ್ರಕರಣಗಳು

ದಶಕದ ಹಿಂದೆ ಸಿ. ಆರಿಸ್ ಆಸ್ಪತ್ರೆಗಳಲ್ಲಿ ಪತ್ತೆಯಾಗಿತ್ತು. ಈ ನಿಗೂಢ ಸೂಪರ್‌ಬಗ್, 2009ರಲ್ಲಿ ಜಪಾನ್‌ನ ರೋಗಿಯೊಬ್ಬರಲ್ಲಿ ಮೊದಲು ಕಂಡುಬಂದಿತ್ತು. 2019ರವರೆಗೂ ಬ್ರಿಟನ್‌ನಲ್ಲಿ ಸುಮಾರು 270 ಜನರಲ್ಲಿ ಈ ಸೋಂಕು ಪತ್ತೆಯಾಗಿತ್ತು. ಅವರಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಆದರೆ ಫಂಗಸ್‌ನಿಂದ ಅವರು ಹೇಗೆ ಮೃತಪಟ್ಟರು ಎಂದು ನಿರ್ಧರಿಸುವುದು ಇಂದಿಗೂ ಸಾಧ್ಯವಾಗಿಲ್ಲ.

English summary
Researchers have found Superbug, Candida Auris that can lead to the next deadly pandemic in Andaman Islands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X