ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಕ್ಯಾನ್ಸರ್‌ ಭಯವಿಲ್ಲ: ಜೋಶ್‌ನಿಂದ ಯಶಸ್ವಿ ಜಾಗೃತಿ ಅಭಿಯಾನ

Google Oneindia Kannada News
Cancer Awareness Campaign: A successful Campaign by Josh App

ಮ್ಯಾಶ್ ಪ್ರಾಜೆಕ್ಟ್ ಫೌಂಡೇಶನ್ ಗುರುಗ್ರಾಮದ ಮೆದಾಂತ ಮೆಡಿಸಿಟಿ ಹಾಸ್ಪಿಟಲ್‌, ಲಂಗ್ ಕೇರ್ ಫೌಂಡೇಶನ್‌ ಸಹಯೋಗದೊಂದಿಗೆ ಜೋಶ್ ವಿಶ್ವ ಕ್ಯಾನ್ಸರ್ ದಿನದಂದು ವಿವಿಧ ರೀತಿಯ ಕ್ಯಾನ್ಸರ್‌ಗಳು, ಅವುಗಳ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ಮೂಡಿಸಿದೆ.

ಜೋಶ್, ಭಾರತದ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಜನಪ್ರಿಯವಾದ ಕಿರು-ವೀಡಿಯೊ ಅಪ್ಲಿಕೇಶನ್ ಆಗಿದ್ದು, ಪ್ರಶಸ್ತಿ ವಿಜೇತ ಸಾಮಾಜಿಕ ಉದ್ಯಮವಾದ ಮ್ಯಾಶ್ ಪ್ರಾಜೆಕ್ಟ್ ಫೌಂಡೇಶನ್ ಜೊತೆಯಾಗಿ ಈ ಕ್ಯಾನ್ಸರ್ ಜಾಗೃತಿ ಅಭಿಯಾನ ಆರಂಭ ಮಾಡಿದೆ. 4ನೇ ಫೆಬ್ರವರಿ 2022 ರಿಂದ #Cancerseladai ಅಭಿಯಾನವನ್ನು ಆಯೋಜಿಸಲು Lung Care Foundation ಜೊತೆಗೆ ಕೈಜೋಡಿಸಿದೆ. ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

ಕಿರು-ವೀಡಿಯೋ ಆಪ್‌ ಆದ ಜೋಶ್ ಮೂಲಕ ಅಭಿಯಾನವು ಪ್ರೇಕ್ಷಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ಅರಿವು ಮೂಡಿಸಲು ಮತ್ತು ಕ್ಯಾನ್ಸರ್ ಬಗ್ಗೆ ಶಿಕ್ಷಣದ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ವೈದ್ಯರು ಸಹ ಕ್ಯಾನ್ಸರ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌‌ನಿಂದ ಹೊರಬರಲು ಸಾಧ್ಯ ಎಂಬುವುದರ ಬಗ್ಗೆ ವೈದ್ಯರುಗಳು ವಿವರಣೆ ನೀಡಿದ್ದಾರೆ. ವೀಡಿಯೋಗಳು 140,000+ ಜನರನ್ನು ತಲುಪಿದ್ದು, 44,000+ ಜೋಷ್‌ ಬಳಕೆದಾರರು ಲೈಕ್‌ ಮಾಡಿದ್ದಾರೆ.

ಅಭಿಯಾನದಲ್ಲಿ ಯುವಜನರಿಗೆ ಕ್ಯಾನ್ಸರ್ ಬಗ್ಗೆ, ಅದರ ಚಿಕಿತ್ಸೆಯ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ಕ್ಯಾನ್ಸರ್ ಎಂಬುದು ಈಗ ಭಾರತದಲ್ಲಿ ವ್ಯಾಪಕವಾಗಿ ಹೆಚ್ಚಾಗಿರುವ ರೋಗವಾಗಿದ್ದು, ಅದರ ಚಿಕಿತ್ಸೆಯ ಬಗ್ಗೆ ಹಲವಾರು ಮಂದಿಗೆ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಕ್ಯಾನ್ಸರ್‌ ಚಿಕಿತ್ಸೆಗಳು ಮತ್ತು ಕ್ಯಾನ್ಸರ್ ನಂತರದ ಆರೈಕೆ ಬಗ್ಗೆ ಈ ಅಭಿಯಾನದ ಮೂಲಕ ಚರ್ಚೆ ಮಾಡಲಾಗಿದೆ.

ಈ ಬಗ್ಗೆ ಲಂಗ್ ಕೇರ್ ಫೌಂಡೇಶನ್‌ನ ಸಂಸ್ಥಾಪಕ, ರಾಜೀವ್ ಖುರಾನಾ ಮಾತನಾಡಿ, "ಕ್ಯಾನ್ಸರ್ ಕಾಯಿಲೆಗಳಿಂದ ಉಂಟಾಗುವ ತೀವ್ರತೆ ಮತ್ತು ಪರಿಣಾಮವು ಭಾರತದಲ್ಲಿ ವಿವಿಧ ವಯೋಮಾನದವರಲ್ಲಿ ಸ್ಥಿರವಾಗಿ ಹೆಚ್ಚುತ್ತಿದೆ. ರೋಗಕ್ಕೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಜೋಶ್ ವೇದಿಕೆಯಲ್ಲಿ ಲಂಗ್ ಕೇರ್ ಫೌಂಡೇಶನ್ ಮತ್ತು ಮ್ಯಾಶ್ ಜಂಟಿ ಅಭಿಯಾನವು ಮುಖ ವೈದ್ಯರು ಮತ್ತು ಮೆದಾಂತ ಆಸ್ಪತ್ರೆಯ ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಸರ್ಜರಿ ತಂಡದ ಸರಳ ಮಾಹಿತಿ ಮೂಲಕ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಸೃಷ್ಟಿಸುವ ಪ್ರಯತ್ನವಾಗಿದೆ," ಎಂದು ತಿಳಿಸಿದ್ದಾರೆ.

ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಸರ್ಜರಿ- ಚೆಸ್ಟ್ ಆಂಕೊ-ಸರ್ಜರಿ ಆಂಡ್‌ ಲಂಗ್ ಟ್ರಾನ್ಸ್‌ಪ್ಲಾಂಟೇಶನ್‌ನ ಹಿರಿಯ ಸಲಹೆಗಾರ ಡಾ. ಹರ್ಷವರ್ಧನ್ ಪುರಿ ಮಾತನಾಡಿ, "ಮೇದಾಂತದಲ್ಲಿನ ವೈದ್ಯರು ಜೋಶ್ ಅಪ್ಲಿಕೇಶನ್‌ನೊಂದಿಗೆ ಮ್ಯಾಶ್ ಪ್ರಾಜೆಕ್ಟ್‌ನ ಸಹಯೋಗದ ಬಗ್ಗೆ ತಿಳಿದಾಗ ನಾವು ಈ ಸಹಯೋಗದ ಬಗ್ಗೆ ತುಂಬಾ ಉತ್ಸುಕರಾದೆವು. ಕ್ಯಾನ್ಸರ್‌ಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿಯನ್ನು ಸರಳ ಭಾಷೆಯಲ್ಲಿ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಯುವಕರು ವೀಡಿಯೊವನ್ನು ಡೌನ್‌ಲೋಡ್ ಮಾಡಿದ್ದಾರೆ. ಆದ್ದರಿಂದಾಗಿ ಮಾಹಿತಿಯು ಹೆಚ್ಚು ಹರಡಿದೆ," ಎಂದು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X