• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆನಡಾ ದೊರೆಯ ಚರಕ ಪ್ರೀತಿ: ಸಾಬರಮತಿಯಲ್ಲೊಂದು ಚೆಂದದ ಚಿತ್ರ!

|

ಸಾಬರಮತಿ, ಫೆಬ್ರವರಿ 20: ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟ ವಿದೇಶಿಯರನ್ನು ಕಂಡರೆ ಒಂಥರಾ ಖುಷಿ. ನಮ್ಮ ಸಂಸ್ಕೃತಿಗೆ ಒಂದಷ್ಟು ತೂಕ ಸಿಕ್ಕಂಥ ಸಂತೋಷ. ಕೈತುಂಬ ಬಳೆ ತೊಟ್ಟು, ಕಿವಿಗೆ ಚೆಂದದ ಓಲೆ ಹಾಕಿ, ಹಣೆಗೊಪ್ಪುವ ಸಿಂಧೂರ ಇಟ್ಟ ರಾಣಿ, ಶೇರ್ವಾಣಿ ತೊಟ್ಟು ಮಿಂಚಿದ ದೊರೆ... ಅವರಿಬ್ಬರನ್ನು ಅನುಸರಿಸಿದ ಪುಟ್ಟ ಪುಟ್ಟ ಮಕ್ಕಳು... ನಿನ್ನೆ(ಫೆ.19) ಸಾಬರಮತಿಯಲ್ಲಿ ಕಂಡ ಈ ದೃಶ್ಯಕ್ಕೆ ಯಾರದ್ದಾದರೂ ದೃಷ್ಟಿ ತಗುಲಿದರೂ ಅಚ್ಚರಿಯಿಲ್ಲ!

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೋ ಅವರು ಒಂದು ವಾರದ ಭಾರತ ಭೇಟಿಯಲ್ಲಿದ್ದಾರೆ. ಅವರ ಕುಟುಂಬ ಭಾರತಕ್ಕೆ ಬಂದಾಗಿನಿಂದ ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ, ಇಲ್ಲಿನ ಉಡುಗೆ ತೊಟ್ಟು, ಇಲ್ಲಿನ ಆಚರಣೆಗಳನ್ನು ಪಾಲಿಸುತ್ತಿದೆ. ನಿನ್ನೆ ಗುಜರಾತಿನ ಸಾಬರಮತಿಯ ಆಶ್ರಮದಲ್ಲಿ, ಮಹಾತ್ಮಾ ಗಾಂಧಿಯವರನ್ನು ನೆನಪಿಸಿಕೊಂಡು ಚರಕದಿಂದ ನೂಲು ತೆಗೆಯುವ ಮೂಲಕ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದರು.

ಬಾಹುಬಲಿ ನೆಪದಲ್ಲಿ ಕೇಂದ್ರ ಬಜೆಟ್ ಸ್ಮರಿಸಿದ ಮೋದಿ

ಸಾಬರಮತಿಯ ಈ ಅಮೋಘ ದೃಶ್ಯದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಶೀರ್ವದಿಸಿದ ಶ್ವೇತಾಂಬರರು, ಛತ್ರಪತಿ ಶಿವಾಜಿಗೆ ನಮನ, ತಾಜ್ ಮಹಲ್ ಮುಂದೆ ಸುಂದರಿಯರು, ಕಾಶ್ಮೀರದ ತುಂಬ ಹಿಮದ ಮಳೆ ಮುಂದಾದ ಸುಂದರ ಚಿತ್ರಗಳು ನಿಮಗಾಗಿ ಇಲ್ಲಿವೆ.

ಸಾಬರಮತಿಯಲ್ಲೊಂದು ಅಮೋಘ ದೃಶ್ಯ

ಸಾಬರಮತಿಯಲ್ಲೊಂದು ಅಮೋಘ ದೃಶ್ಯ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೋ ಅವರ ಪತ್ನಿ, ಮತ್ತು ಮೂವರು ಮಕ್ಕಳು, ಮಹಾತ್ಮಾ ಗಾಂಧೀಜಿಯವರ ಸಾಬರಮತಿ ಆಶ್ರಮದ ಚರಕದ ಮೂಲಕ ನೂಲು ತೆಗೆದರು. ಪುಟ್ಟ ಮಕ್ಕಳಿಗೆ ಈ ನೂಲು ತೆಗೆಯುವ ಕ್ರಮ ಒಂಥರಾ ಆಟವೆನ್ನಿಸಿ, ಸಂಭ್ರಮಿಸಿದರು. ಭಾರತೀಯ ಉಡುಗೆ, ತೊಡುಗೆಗಳ ಮೂಲಕ ಪೂರ್ತಿ ಕುಟುಂಬಕ್ಕೆಲ್ಲಿ ದೃಶ್ಟಿ ತಾಗುತ್ತೇನೋ ಎಂಬಂತಿತ್ತು!

ಆಯುಷ್ಮಾನ್ ಭವ...

ಆಯುಷ್ಮಾನ್ ಭವ...

ಐತಿಹಾಸಿಕ ಪ್ರಸಿದ್ಧ ಬಾಹುಬಲಿ 88 ನೇ ಮಹಾಮಸ್ತಕಾಭಿಷೇಕಕ್ಕಾಗಿ ಹಾಸನ ಜಿಲ್ಲೆಯ ಶ್ರವಣಬೆಳಗೊಳಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೊದಿಯವರಿಗೆ ಶ್ವೇತಾಂಬರರು ಆಶಿರ್ವದಿಸಿದರು. ಫೆ.17 ರಿಂದ ಆರಂಭವಾಗಿರುವ ಸಂಭ್ರಮದ ಮಹಾಮಜ್ಜನ ಫೆ.26 ರವರೆಗೂ ನಡೆಯಲಿದೆ.

ಪ್ರೇಮಸೌಧದ ಮುಂದೆ ಸುರಸುಂದರಿಯರು!

ಪ್ರೇಮಸೌಧದ ಮುಂದೆ ಸುರಸುಂದರಿಯರು!

ಪ್ರೇಮಸೌಧ ಎಂದೇ ಖ್ಯಾತಿ ಪಡೆದ ಆಗ್ರಾದ ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲೊಂದು. ಮಿಸ್ ಮಲ್ಟಿನ್ಯಾಶನಲ್ 2017-2018 ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ದೇಶದ ಸ್ಪರ್ಧಿಗಳು ಈ ಪ್ರೇಮಸೌಧದ ಎದುರು ನಿಂತು ಪೋಸ್ ನೀಡಿದ್ದು ಹೀಗೆ.

ಜೈ ಛತ್ರಪತಿ ಶಿವಾಜಿ

ಜೈ ಛತ್ರಪತಿ ಶಿವಾಜಿ

ಮಹಾನ್ ಯೋಧ, ಧೈರ್ಯಕ್ಕೆ ಮತ್ತೊಂದು ಹೆಸರು ಎಂಬಂತಿದ್ದ ಛತ್ರಪತಿ ಶಿವಾಜಿ ಜಯಂತಿಯನ್ನು ನಿನ್ನೆ ದೇಶದಾದ್ಯಂತ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮರಾಠಿ ಸಮುದಾಯದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಧ್ವಜವನ್ನು ಹಿಡಿದು, ಮಹಾನ್ ನಾಯಕನ ಜಯಂತಿಗೆ ಶುಭಕೋರಿದರು.

ಶಿವಾಜಿ ಜಯಂತಿ ಸಂಭ್ರಮ

ಶಿವಾಜಿ ಜಯಂತಿ ಸಂಭ್ರಮ

ನ ವದೆಹಲಿಯಲ್ಲಿ ಓರ್ವ ಮಹಿಳೆ ತಮ್ಮ ಪುಟ್ಟ ಮಗಳೊಂದಿಗೆ ಮರಾಠಿ ಸಂಪ್ರದಾಯದಂತೆ ಶಿವಾಜಿ ಜಯಂತಿಯನ್ನು ಸಸಂಬ್ರಮಿಸಿದ್ದು ಹೀಗೆ.

ಅವರಿಗೆ ಮೋಜು, ಇವರಿಗೆ ಬದುಕು!

ಅವರಿಗೆ ಮೋಜು, ಇವರಿಗೆ ಬದುಕು!

ಜಮ್ಮು ಕಾಶ್ಮೀರದಲ್ಲಿ ಈಗ ಮಂಜಿನ ಮಳೆ ಆರಂಭವಾಗಿ ಹಲವು ದಿನವೇ ಸಂದಿದೆ. ಈ ಸಂಮದರ್ಭದಲ್ಲೇ ಪ್ರವಾಸಿಗರ ಸಂಖ್ಯೆಯೂ ಜಾಸ್ತಿ. ಹೀಮಾಚ್ಛಾದಿತ ಬೆಟ್ಟವನ್ನು ಹತ್ತಲು ಕಷ್ಟಪಡುವವರಿಗಾಗಿ ಮಣೆಯೊಂದನ್ನು ಮಾಡಿ, ಅದರ ಮೇಲೆ ಅವರನ್ನು ಕೂರಿಸಿ, ಎಳೆದಯ್ಯಲಾಗುತ್ತದೆ. ಸುತ್ತಲೂ ಮಂಜು, ಮಣೆಯ ಮೇಲೆ ಕೂತುಬಿಟ್ಟರೆ ಒಂಥರಾ ಮೋಜು. ಆದರೆ ಎಳೆದುಕೊಂಡು ಹೋಗುವವರಿಗೆ ಮಾತ್ರ ರೋದನೆ. ಹೀಗೆ ಎಳೆದೊಯ್ದಾಗ ಸಿಗುವ ಕಾಸೇ ಅವರ ಬದುಕು!

ಶುದ್ಧ ಗಾಳಿ ನಮ್ಮ ಹಕ್ಕು

ಶುದ್ಧ ಗಾಳಿ ನಮ್ಮ ಹಕ್ಕು

ವಾಹನಗಳ ಹೊಗೆಯಿಂದ ಆಗುತ್ತಿರುವ ಮಾಲಿನ್ಯ ಮತ್ತು ಅದರಿಂದ ಆರೋಗ್ಯದ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಜರ್ಮನಿಯ ಸ್ಟುಟ್ ಗಾರ್ಟ್ ನಲ್ಲಿ ರಸ್ತೆಯಲ್ಲಿ ನಡೆದ ಪ್ರತಿಭಟನೆಯ ದೃಶ್ಯ.

ಇದೇರಿ ನನ್ ಇವತ್ತಿನ ಲಂಚು!

ಇದೇರಿ ನನ್ ಇವತ್ತಿನ ಲಂಚು!

ಗಿಡವೊಂದರ ಪುಟ್ತ ಟೊಂಗೆಯನ್ನು ಮುರಿದು, 'ಇದೇರಿ, ನನ್ ಇವತ್ತಿನ ಲಂಚು' ಎನ್ನುತ್ತಿರುವಂತಿದೆ ಈ ಮುದ್ದು ಅಳಿಲು. ನವದೆಹಲಿಯಲ್ಲಿ ಕಂಡುಬಂದ ದೃಶ್ಯ ಇದು.

English summary
Canadian Prime Minister Justin Trudeau along with his family spins cotton on a traditional 'charkha' in Sabarmati Ashram in Ahmedabad, Gujarat on Feb 20th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X