• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುದ್ದು ಮುಖ, ನೀಲಿ ಕಣ್ಣು... ಭಾರತದಲ್ಲಿ ಸೆಲೆಬ್ರಿಟಿಯಾಗಿದ್ದಾನೆ ಪುಟ್ಟ ಪೋರ!

|
   ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಮಗ ಹಡ್ರಿನ್ ಈಗ ಸೆಲೆಬ್ರಿಟಿ | Oneindia Kannada

   ನವದೆಹಲಿ, ಫೆಬ್ರವರಿ 24: ಬೆಣ್ಣೆಯಂಥ ಮೈಬಣ್ಣ, ಮುದ್ದು ಮುದ್ದು ಮುಖ, ನೀಲಿ ಕಣ್ಣು... ಈ ಸೌಂದರ್ಯ ಸಾಲದೆಂಬಂತೆ ತುಂಟಾಟ ಮಾಡುತ್ತ ಮತ್ತಷ್ಟು ಮುದ್ದುಬರಿಸುವ ಪುಟ್ಟ ಕಂದ... ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಚಿಕ್ಕಮಗ ಹಡ್ರಿನ್ ಒಂದು ವಾರದಿಂದ ಭಾರತದ ಸೆಲೆಬ್ರಿಟಿ ಆಗಿಬಿಟ್ಟಿದ್ದಾನೆ!

   ಈ ಸುಂದರ ಕುಟುಂಬ ಭಾರತದ ಪಾರಂಪರಿಕ, ಪ್ರಸಿದ್ಧ ತಾಣಗಳ ಮುಂದೆ, ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಕಂಗೊಳಿಸುತ್ತಿದ್ದರೆ ಅವರ ಪುಟ್ಟ ಮಗ ಹಡ್ರಿನ್ ಮಾತ್ರ ಹೋದಲ್ಲೆಲ್ಲ ತುಂಟಾಟ ಮಾಡುತ್ತ ಎಲ್ಲರ ಮೆಚ್ಚಿನ ಕೂಸಾಗಿಬಿಟ್ಟಿದ್ದಾನೆ. ಕೆನಡಾ ಪ್ರಧಾನಿ ಮತ್ತವರ ಕುಟುಂಬದ ಚಿತ್ರ ಕ್ಲಿಕ್ಕಿಸುವುದಕ್ಕೆಂದು ಹೋದ ಛಾಯಾಗ್ರಾಹಕರೆಲ್ಲ ಮರೆಯದೇ ಹಡ್ರಿನ್ ನ ಚಿತ್ರವನ್ನುಕ್ಲಿಕ್ಕಿಸಿಕೊಂಡು ಬರುತ್ತಿದ್ದಾರೆ.

   ಆಹಾ... ಎಷ್ಟು ಚೆಂದ! ಈ ಕುಟುಂಬಕ್ಕೆ ದೃಷ್ಟಿಯಾದೀತು ಜೋಕೆ..!

   ಒಂದು ವಾರದಲ್ಲಿ ಭಾರತೀಯರ ಮನಸ್ಸಲ್ಲಿ ಕಚಗುಳಿ ಇಟ್ಟ ಈ ಮುದ್ದು ಬಂಗಾರಿಯ ಒಂದಷ್ಟು ಚಿತ್ರ ಇಲ್ಲಿದೆ. (ಚಿತ್ರಕೃಪೆ: ಪಿಟಿಐ)

   ಹಸಿರು ಹುಲ್ಲಿನ ಮೇಲೆ ಹೊರಳಾಡೋ ಮಜ ನಿಮಗೇನ್ ಗೊತ್ತು!?

   ಹಸಿರು ಹುಲ್ಲಿನ ಮೇಲೆ ಹೊರಳಾಡೋ ಮಜ ನಿಮಗೇನ್ ಗೊತ್ತು!?

   ನವದೆಹಲಿಯ ರಾಜ್ ಘಾಟ್ ನಲ್ಲಿ ಮಹಾತ್ಮಾಗಾಂಧಿ ಸ್ಮಾರಕಕ್ಕೆ ಭೇಟಿ ನೀದಿದ್ದ ಸಂದರಭದಲ್ಲಿ ಅಲ್ಲಿನ ಹಸಿರು ಹುಲ್ಲಿನ ಮೇಲೆ ತರಹೇವಾರಿ ಭಂಗಿಯಲ್ಲಿ ಬಿದ್ದು, ಹೊರಳಾಡಿ ಹಡ್ರಿನ್ ಮಜಾ ಉಡಾಯಿಸಿದ್ದು ಹೀಗೆ..!

   ಎಲ್ಲರಿಗೂ ಮನಸ್ಕಾರ..!

   ಎಲ್ಲರಿಗೂ ಮನಸ್ಕಾರ..!

   ಕೆನಡಾ ಪ್ರಧಾನಿ ದಂಪತಿ ಭಾರತಕ್ಕೆ ಭೇಟಿ ನೀಡಿದ ಮೊದಲ ದಿನ ವಿಮಾನದಿಂದ ಇಳಿಯುತ್ತಿದ್ದ ಸಂದರ್ಭದಲ್ಲಿ ಎರಡು ಕೈಗಳನ್ನೂ ಜೋಡಿಸಿ, ಭಾರತೀಯ ಪದ್ಧತಿಯಂತೆ ನಮಸ್ಕರಿಸಿದರು. ಈ ಸಂದರ್ಭದಲ್ಲಿ ಅಪ್ಪ-ಅಮ್ಮನನ್ನು ಅನುಸರಿಸಿದ ಹಡ್ರಿನ್ ತನ್ನ ಪುಟ್ಟ ಪುಟ್ಟ ಕೈಯಲ್ಲಿ ನಮಸ್ಕಾರ ಹೇಳಿದ್ದು ಹೀಗೆ...

   ಕೊನೆಗೂ ಮೋದಿ-ಟ್ರುಡೋ ಭೇಟಿ: ಊಹಾಪೋಹಗಳಿಗೆ ತೆರೆ!

   ಗಾಂಧಿ ತಾತಂಗೆ ಪುಷ್ಪಾರ್ಚನೆ...

   ಗಾಂಧಿ ತಾತಂಗೆ ಪುಷ್ಪಾರ್ಚನೆ...

   ನವದೆಹಲಿಯ ರಾಜ್ ಘಾಟ್ ನಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಸಮಾಧಿಗೆ ಕೆನಡಾ ಪ್ರಧಾನಿ ಮತ್ತವರ ಪತ್ನಿ ಗಂಭೀರವಾಗಿ ನಮಿಸಿ, ಪ್ರಾರ್ಥನೆ ಸಲ್ಲಿಸುತ್ತಿದ್ದರೆ, ಈ ತುಂಟ ಹಡ್ರಿನ್ ಮಾತ್ರ ಗಾಂಧಿ ತಾತಂಗೆ ಪುಷ್ಪಾರ್ಚನೆ ಮಾಡಿದ್ದು ಹೀಗೆ...!

   ಪ್ರೇಮ ಸೌಧದ ಮುಂದೆ ಆಕಳಿಸುತ್ತಿದ್ದಾನೆ ಪೋರ!

   ಪ್ರೇಮ ಸೌಧದ ಮುಂದೆ ಆಕಳಿಸುತ್ತಿದ್ದಾನೆ ಪೋರ!

   ಈ ಸುಂದರ ಕುಟುಂಬ ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಿ, ಪ್ರೇಮಸೌಧದ ಸೌಂದರ್ಯ ಸವಿಯುತ್ತ, ಫೋಟೋಕ್ಕೆ ಪೋಸು ನೀಡುತ್ತಿದ್ದರೆ, ಇದ್ಯಾವುದರ ಪರಿವೆಯೂ ಇಲ್ಲದಂತೆ ಹಡ್ರಿನ್ ಆಕಳಿಸುತ್ತಿದ್ದಾನೆ ನೋಡಿ..!

   ಕೆನಡಾ ದೊರೆಯ ಚರಕ ಪ್ರೀತಿ: ಸಾಬರಮತಿಯಲ್ಲೊಂದು ಚೆಂದದ ಚಿತ್ರ!

   ಅಪ್ಪಾ... ಏನ್ ಬರೀತಿದೀರಾ...?

   ಅಪ್ಪಾ... ಏನ್ ಬರೀತಿದೀರಾ...?

   ರಾಜ್ ಘಾಟ್ ನಲ್ಲಿ ಅನಿಸಿಕೆ ಪುಸ್ತಕದ ಮೇಲೆ ತಮ್ಮ ಭೇಟಿಯ ಅನುಭವ ಬರೆಯುತ್ತಿರುವ ಟ್ರುಡೋ ಅವರ ಬಳಿ ಏನೋ ತುಂಟ ಪ್ರಶ್ನೆ ಕೇಳುತ್ತ ನಿಂತಿರುವ ಹಡ್ರಿನ್..!

   ಅಯ್ಯೋ ಅಪ್ಪ, ಕ್ಯಾಮರಾ ಈ ಕಡೆ ಇದೆ..!

   ಅಯ್ಯೋ ಅಪ್ಪ, ಕ್ಯಾಮರಾ ಈ ಕಡೆ ಇದೆ..!

   ಅಪ್ಪ ಮತ್ತು ಅಣ್ಣ ಗ್ಸೇವಿಯರ್ ಜೊತೆ ನಡೆದುಕೊಂಡು ಬರುತ್ತಿರುವ ಹಡ್ರಿನ್, ಅಯ್ಯೋ ಅಪ್ಪಾ, ಎಲ್ಲೆಲ್ಲೋ ನೋಡ್ಬೇಡಿ, ಕ್ಯಾಮೆರಾ ಈ ಕಡೆ ಇದೆ, ಈ ಕಡೆ ಪೋಸ್ ಕೊಡಿ ಅಂತಿದ್ದಾನೆ ನೋಡಿ!

   ಏನಮ್ಮಾ ಇದು...?

   ಏನಮ್ಮಾ ಇದು...?

   ಗುಜರಾತಿನ ಸಾಬರಮತಿ ಆಶ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಖಾದಿ ಮಾಲೆಯನ್ನು ಕತ್ತಿಗೆ ಹಾಕಲು ಕಷ್ಟ ಪಡುತ್ತಿರುವ ಹಡ್ರಿನ್. ಅಯ್ಯೋ ಏನಮ್ಮ ಇದೆಲ್ಲ ಅಂತಿದ್ದಾನೆ!

   ನಾನ್ ಬರಲ್ಲ...!

   ನಾನ್ ಬರಲ್ಲ...!

   ನಾನ್ ಬರಲ್ಲ, ಏನ್ ಮಾಡ್ತೀಯಾ? ಎಂದು ಅಮ್ಮನಿಂದ ತಪ್ಪಿಸಿಕೊಂಡು ಓಡುತ್ತಿರುವ ಪೋರ ಹಡ್ರಿನ್. ಕ್ಯಾಮರಾ ಇದೆ ಅಂತ್ಲೇ ಈ ತುಂಟಾಟಾನಾ ಅಥವಾ ಅವನ ತುಂಟಾಟಾನೇ ಕ್ಯಾಮರಕ್ಕೆ ಕಾಣ್ತಿತ್ತಾ ದೇವರೇ ಬಲ್ಲ!

   ಬಿಸಿಲು... ಸಾಕು ಪೋಸ್ ಕೊಟ್ಟಿದ್ದು ಬನ್ನಿ!

   ಬಿಸಿಲು... ಸಾಕು ಪೋಸ್ ಕೊಟ್ಟಿದ್ದು ಬನ್ನಿ!

   ಜಾಮಾ ಮಸೀದಿಯಲ್ಲಿ ಛಾಯಾಗ್ರಾಹಕರಿಗೆ ಕುಟುಂಬ ಪೋಸು ನೀಡುತ್ತಿದ್ದರೆ, ಹಡ್ರಿನ್ ದು ಮಾತ್ರ ರಗಳೆ ಮುಗಿದಿಲ್ಲ ನೋಡಿ! ಅಯ್ಯೋ, ಬಿಸಿಲು. ಸಾಕು ನೀವು ಪೋಸ್ ಕೊಟ್ಟಿದ್ದು ಬನ್ನಿ ಹೋಗೋಣ ಅಂತಿದ್ದಾನೆ!

   ಶ್.. ನಾನಿಲ್ಲಿದ್ದೀನಿ ಅಂತ ಅಮ್ಮಂಗೆ ಹೇಳ್ಬೇಡಿ!

   ಶ್.. ನಾನಿಲ್ಲಿದ್ದೀನಿ ಅಂತ ಅಮ್ಮಂಗೆ ಹೇಳ್ಬೇಡಿ!

   ಸಾಬರಮತಿ ಆಶ್ರಮದಲ್ಲಿ ಅಮ್ಮ-ಅಮ್ಮನನ್ನು ಬಿಟ್ಟು ಇವರೆಲ್ಲರ ಸಹವಾಸವೇ ಸಾಕು, ನಾನು ಆಟ ಆಡ್ಬೇಕು ಅಂತ ಓಡ್ತಿದ್ದಾನೆ ಹಡ್ರಿನ್. ಆದ್ರೂ ಈ ಕ್ಯಾಮರಾ ಕಣ್ಣು ಈ ಮುದ್ದು ಹುಡುಗನ್ನ ಬಿಟ್ಟಿಲ್ಲ ನೋಡಿ..!

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Canadian Prime Minister Justin Trudeau's son Hadrien becomes a celebrity in India by his cute photos. Naughty Hadrien's many photos become viral in social media now. Here are few of them.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more