ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕೊರೊನಾ ಪತ್ತೆಗೆ RT-PCR ಪರೀಕ್ಷೆಗಿಂತ CT ಸ್ಕ್ಯಾನ್‌ ಉತ್ತಮ"

|
Google Oneindia Kannada News

ನವದೆಹಲಿ, ಏಪ್ರಿಲ್ 20: ಭಾರತದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ RT-PCR ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಎರಡು ಮಾದರಿ ಪರೀಕ್ಷೆಗಳೂ ಸುರಕ್ಷಿತವಲ್ಲ ಎಂದು ತಜ್ಞವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮತ್ತು RT-PCR ಪರೀಕ್ಷೆಯಲ್ಲಿ ಕೊರೊನಾವೈರಸ್ ಸೋಂಕು ಇಲ್ಲ ಎಂಬ ವರದಿ ಬಂದಿತ್ತು. ಇದರ ಬೆನ್ನಲ್ಲೇ ಕಂಪ್ಯೂಟರೈಸಡ್ ಟೋಮೋಗ್ರಫಿ(ಸಿಟಿ ಸ್ಕ್ಯಾನ್) ಪರೀಕ್ಷೆಯ ನಡೆಸಿದಾಗ ವ್ಯಕ್ತಿಯ ಸ್ನಾಯುಗಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

Can You Be COVID Positive Even if Your RT-PCR Test Says Negative?

 ಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ ಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ

ಪ್ರಸ್ತುತ RT-PCR ಪರೀಕ್ಷೆಯಲ್ಲಿ ಕೊರೊನಾವೈರಸ್ ಸೋಂಕಿನ ಪಾಸಿಟಿವ್ ವರದಿಯನ್ನು ತೋರಿಸುವ ಅಗತ್ಯವಿಲ್ಲ. ಆದರೆ ವಿಮಾ ಕಂಪನಿ ಮತ್ತು ಮೂರನೇ ನಿರ್ವಾಹಕರು ಕೊವಿಡ್-19 ಎಂದು ಪರಿಗಣಿಸಬೇಕಾಗುತ್ತದೆ ಎಂದು ವಡೋದರಾ ಮಹಾನಗರ ಪಾಲಿಕೆ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಏಕೆಂದರೆ RT-PCR ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದ ವ್ಯಕ್ತಿಯನ್ನು ಸಿಟಿ ಸ್ಕ್ಯಾನ್ ಗೆ ಒಳಪಡಿಸಿದಾಗ ಕೊವಿಡ್-19 ಸೋಂಕು ಇರುವುದು ದೃಢಪಟ್ಟಿದೆ.

"ಕೊರೊನಾ ನೆಗೆಟಿವ್ ಹೊಂದಿದವರಲ್ಲಿ ಅಸ್ವಸ್ಥತೆ":
"RT-PCR ಪರೀಕ್ಷೆಯಲ್ಲಿ ಕೊರೊನಾವೈರಸ್ ಸೋಂಕು ಇಲ್ಲ ಎಂಬ ವರದಿಯನ್ನು ಇಟ್ಟುಕೊಂಡ ರೋಗಿಗಳು ನಮ್ಮ ಬಳಿ ಬರುತ್ತಾರೆ. ಹೀಗಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮಟ್ಟಕ್ಕೆ ಅವರ ಆರೋಗ್ಯ ಹದಗೆಟ್ಟಿರುತ್ತದೆ. ಸಿಟಿ ಸ್ಕ್ಯಾನ್ ಪರೀಕ್ಷೆಗೆ ಒಳಪಟ್ಟ 25 ಮಂದಿಯಲ್ಲಿ 10 ಜನರಿಗೆ ಕೊವಿಡ್-19 ಸೋಂಕು ಇರುವುದು ಪತ್ತೆಯಾಗಿದೆ. ಇದರ ಅರ್ಥ RT-PCR ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಹೊಂದಿರುವವರ ದೇಹದಲ್ಲಿ ಈಗಾಗಲೇ ಸ್ನಾಯುಗಳು ಶಕ್ತಿ ಕಳೆದುಕೊಂಡಿರುತ್ತವೆ" ಎಂದು SETU ಅಧ್ಯಕ್ಷ ಕ್ರುತೇಶ್ ಶಾ ತಿಳಿಸಿದ್ದಾರೆ.

RT-PCR ಜೊತೆಗೆ ಸಿಟಿ ಸ್ಕ್ಯಾನ್ ಉತ್ತಮ:
ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಗಳು RT-PCR ಪರೀಕ್ಷೆ ಜೊತೆಗೆ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ. ಹಿತೇನ್ ಕರೇಲಿಯಾ ತಿಳಿಸಿದ್ದಾರೆ. "ನಾವು ನೋಡಿದ ಹಲವು ರೋಗಿಗಳಲ್ಲಿ ಕೊರೊನಾವೈರಸ್ ಲಕ್ಷಣಗಳೇ ಇರುವುದಿಲ್ಲ ಅಥವಾ ಜ್ವರ ಹಾಗೂ ಸ್ವಲ್ಪಮಟ್ಟಿಗೆ ಅಸ್ವಸ್ಥರಾಗಿರುತ್ತಾರೆ. ಆದರೆ ದೇಹದ ಸ್ನಾಯುಗಳಲ್ಲಿ ಸಂಪೂರ್ಣ ಶಕ್ತಿ ಕಳೆದುಕೊಂಡಿರುತ್ತಾರೆ" ಎಂದು ಹೇಳಿದ್ದಾರೆ.

RT-PCR ಪರೀಕ್ಷೆಯಲ್ಲಿ ಶೇ.30ರಷ್ಟು ಸುಳ್ಳು:
ಕೊರೊನಾವೈರಸ್ ಸೋಂಕಿನ ಪತ್ತೆಯಲ್ಲಿ RT-PCR ಪರೀಕ್ಷೆಯು ಶೇ.70ರಷ್ಟು ಸೂಕ್ಷ್ಮತೆಯನ್ನು ಹೊಂದಿರುತ್ತದೆ. ಅಂದರೆ ಉಳಿದ ಶೇ.30ರಷ್ಟು ನಗೆಟಿವ್ ವರದಿ ಸುಳ್ಳಾಗುವ ಸಾಧ್ಯತೆಗಳಿರುತ್ತವೆ. ಆದರೆ ಸಿಟಿ ಸ್ಕ್ಯಾನ್ ಪರೀಕ್ಷೆಯಲ್ಲಿ ಈ ಸುಳ್ಳು ವರದಿಗಳ ಪರಾಮರ್ಶೆ ಮಾಡಲಾಗುವುದು ಎಂದು ನಂದಾ ಆಸ್ಪತ್ರೆಯ ಎಂ.ಡಿ ಡಾ. ನೀರಜ್ ಚೌಡಾ ತಿಳಿಸಿದ್ದಾರೆ.

English summary
Some people's RT-PCR COVID test results have been coming back negative. COVID was then detected in other follow-up tests including CT scans, but only after their health deteriorated significantly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X