ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಂಗ್ಯೂ ಸಾವು ತಡೆಯಲು ಕೃತಕ ಬುದ್ಧಿಮತ್ತೆ ಸಹಾಯ; ಹೊಸ ಅಧ್ಯಯನ

Google Oneindia Kannada News

ನವದೆಹಲಿ, ಸೆಪ್ಟೆಂಬರ್ 19; ಭಾರತದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ ವಿವಿಧ ರಾಜ್ಯಗಳಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ವರದಿಯಾಗುತ್ತಿವೆ. ಅದರದಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ಉತ್ತರ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ನೂರಾರು ಜನರು ಬಲಿಯಾಗಿದ್ದಾರೆ. ಸ್ಥಳೀಯ ಆಡಳಿತಗಳು ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ. ಡೆಂಗ್ಯೂ ತಡೆಗಟ್ಟಲು ಇಲ್ಲಿಯವರೆಗೆ ಪರೀಕ್ಷಿಸಿದ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ.

ಡೆಂಗ್ಯೂ ಜ್ವರದ ಲಕ್ಷಣವನ್ನು ನಿಖರವಾಗಿ ಊಹಿಸುವುದು ಚಿಕಿತ್ಸೆ ವಿಧಾನದಲ್ಲಿ ಪ್ರಮುಖವಾಗಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಡೆಂಗ್ಯೂ ತಡೆಗಟ್ಟುವಿಕೆಕೆಗೆ ಅದಕ್ಕೆ ಕಾರಣವಾಗುವ ಸೊಳ್ಳೆಗಳನ್ನು ನಿಯಂತ್ರಿಸುವುದು ಪ್ರಮುಖವಾಗಿದೆ.

ಪ್ರಸ್ತುತ ವೈಜ್ಞಾನಿಕ ಕ್ಷೇತ್ರದಲ್ಲಿ ಹಲವಾರು ಉದಯೋನ್ಮುಖ ತಂತ್ರಜ್ಞಾನಗಳು ಲಭ್ಯವಿದೆ. ಕೃತಕ ಬುದ್ಧಿಮತ್ತೆ (Artificial Intelligence) ಡೆಂಗ್ಯೂ ರೋಗವನ್ನು ಎದುರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಾಗಾದರೆ ಇದರ ಬಳಕೆ ಮೂಲಕ ಡೆಂಗ್ಯೂನಿಂದ ಆಗುವ ಸಾವುಗಳನ್ನು ತಡೆಯಲು ಸಾಧ್ಯವೇ?.

ಭಾರತದ ಯುವ ವೈದ್ಯ, ವಿಜ್ಞಾನಿ ಡಾ. ಅಭಿಜಿತ್ ರೇ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರವನ್ನು ತಿಳಿಸಿದ್ದಾರೆ. ಇದು ಡೆಂಗ್ಯೂನ ಗಂಭೀರತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಮತ್ತು ಅನಿಶ್ಚಿತತೆಯನ್ನು ತೆಗೆದುಹಾಕುತ್ತದೆ. ವೈದ್ಯರು, ಆಸ್ಪತ್ರೆ ಆಡಳಿತ, ರೋಗಿಗಳಿಗೆ ಸಹಾಯಕವಾಗಿದೆ.

ಹಲವಾರು ಪ್ರಕರಣಗಳಲ್ಲಿ ಹೆಮರಾಜಿಕ್ ಆಘಾತದಿಂದಾಗಿ ಡೆಂಗ್ಯೂ ರೋಗಿಯ ವ್ಯಕ್ತಿಯ ಸಾವು ಸಂಭವಿಸುತ್ತದೆ. ಇದನ್ನು ಥ್ರಂಬೋಸೈಟೋಪೆನಿಯಾ ಪ್ರೇರಿತ ರಕ್ತಸ್ರಾವ ಎಂದು ಹೇಳುತ್ತಾರೆ. ರೋಗ ಪೀಡಿತ ವ್ಯಕ್ತಿಯ ದೇಹದಲ್ಲಿನ ರಕ್ತದ ಪ್ಲೇಟ್ಲೆಟ್ ಎಣಿಕೆ ಅತ್ಯಂತ ಕಡಿಮೆ ಮಟ್ಟವನ್ನು ತಲುಪುತ್ತದೆ, ಬಳಿಕ ಅಗತ್ಯವಾದ ಆಮ್ಲಜನಕ ಮತ್ತು ಪೋಷಕಾಂಶಗಳು ನಮ್ಮ ದೇಹದಲ್ಲಿನ ಜೀವಕೋಶಗಳನ್ನು ತಲುಪದಂತೆ ಅದು ತಡೆಯುತ್ತದೆ.

ಈ ಸ್ಥಿತಿಯನ್ನು ನಾವು ಜೀವಕೋಶವು ಆಘಾತದ ಸ್ಥಿತಿಯಲ್ಲಿದೆ ಎಂದು ವಿವರಿಸಬಹುದು. ಇದನ್ನು ಡೆಂಗ್ಯೂ ಶಾಕ್ ಸಿಂಡ್ರೋಮ್ ಅಥವಾ ಡಿಎಸ್ಎಸ್ ಎಂದು ಕರೆಯಲಾಗುತ್ತದೆ. ಡೆಂಗ್ಯೂ ಜ್ವರ ತೀವ್ರವಾದ ಪ್ರಕರಣಗಳಲ್ಲಿ ಸಾವಿಗೆ ಡಿಎಸ್‌ಎಸ್ ಕಾರಣವಾಗುತ್ತದೆ.

ಪ್ಲೇಟ್‌ಲೆಟ್‌ಗಳ ನಷ್ಟ ತೀವ್ರವಾದ ಡೆಂಗ್ಯೂ ಶಾಕ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ. ಇದನ್ನು ಸ್ಪಷ್ಟವಾಗಿ ನಿರ್ಧರಿಸಲು ಕಷ್ಟವಾಗುತ್ತದೆ. ಹಲವಾರು ಪ್ರಕರಣಗಳನ್ನು ವೈದ್ಯರು ರೋಗಿ ಡಿಎಸ್‌ಎಸ್‌ಗೆ ಒಳಗಾಗಿರುವುದನ್ನು ಊಹಿಸಲು ವಿಳಂಬವಾಗುತ್ತದೆ ಮತ್ತು ಚಿಕಿತ್ಸೆ ಆರಂಭಿಸುವುದು ತಂಡ ತಡವಾಗಿರುತ್ತದೆ.

ಡಾ. ಅಭಿಜಿತ್ ಹೊಸ ಅಧ್ಯಯನವು ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆಯ ವಿಧಾನವನ್ನು ಬಳಸಿಕೊಂಡು ಡೆಂಗ್ಯೂ ಶಾಕ್ ಸಿಂಡ್ರೋಮ್ ಅನ್ನು ಗುರುತಿಸುವ ಸಂಶೋಧನೆಗೆ ಹೊಸ ಆಯಾಮವನ್ನು ನೀಡಿದೆ. ಡಿಎಸ್‌ಎಸ್‌ನಿಂದ ಬಳಲುತ್ತಿರುವ ಡೆಂಗ್ಯೂ ರೋಗಿಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಲು ಈ ಅಧ್ಯಯನ ಸಹಕಾರಿಯಾಗಿದೆ.

ಈ ಸಾಫ್ಟ್‌ವೇರ್ ರಕ್ತದ ಪ್ಲೇಟ್‌ಲೆಟ್‌ ಎಣಿಕೆ ಮತ್ತು ಹೆಮಾಟೋಕ್ರಿಟ್ ಮಟ್ಟಗಳನ್ನು ಬಳಕೆ ಮಾಡುತ್ತದೆ. ಕೃತಕ ಬುದ್ಧಿ ಮತ್ತೆ ಆಧಾರಿತ ವ್ಯವಸ್ಥೆ ಡೆಂಗ್ಯೂ ಜ್ವರವನ್ನು ಹೊಂದಿದೆ ವ್ಯಕ್ತಿಯ ಮೂರನೇ ದಿನದಿಂದಲೇ PLT ಮತ್ತು HCT ನಿಖರವಾಗಿ ನಿರ್ಧರಿಸಲು ಸಹಾಯಕವಾಗಿದೆ. ಇದರಿಂದಾಗಿ ರೋಗಿಯು ಡಿಎಸ್‌ಎಸ್‌ಗೆ ಒಳಗಾಗುವ ಸಂಭವನೀಯತೆ ಪತ್ತೆ ಹಚ್ಚಬಹುದಾಗಿದೆ.

ಡಾ. ಅಭಿಜಿತ್ ಈ ಸಂಶೋಧನೆಯು ಡಿಎಸ್‌ಎಸ್‌ನ ನಿಖರ ಮುನ್ಸೂಚನೆಗೆ ಸಹಾಯ ಮಾಡುತ್ತದೆ ಮತ್ತು ಅಪಾಯದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನದ ಮೇಲೆ ಪ್ರಭಾವ ಬೀರುತ್ತದೆ ಮತ್ತು ವೈದ್ಯರು ಡೆಂಗ್ಯೂ ರೋಗಿಗಳನ್ನು ಹೆಚ್ಚು ಜಾಗರೂಕತೆಯಿಂದ ಮೇಲ್ವಿಚಾರಣೆ ಮಾಡಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಈ ಸಂಶೋಧನೆಯಿಂದಾಗಿ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಅನುಕೂಲವಾಗಿವೆ. ಉತ್ತರ ಪ್ರದೇಶ ರಾಜ್ಯವು ಡೆಂಗ್ಯೂ ವಿರುದ್ಧ ಹೋರಾಡುತ್ತಿರುವಾಗ ಈ ಸಂಶೋಧನೆಯು ವರದಾನವಾಗಿದೆ. ಆದರೆ ಡೆಂಗ್ಯೂ ವೈರಸ್ ದೇಶದಲ್ಲಿ ಹರಡುತ್ತಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X