ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ವಾನ್ ಕಣಿವೆಯನ್ನು ಎಂದಿಗೂ ಚೀನಾಕ್ಕೆ ಬಿಟ್ಟುಕೊಡುವುದಿಲ್ಲ: ಮೊಹಮ್ಮದ್ ಅಮೀನ್ ಗಲ್ವಾನ್

|
Google Oneindia Kannada News

ಶ್ರೀನಗರ, ಜೂನ್ 25: ಗಲ್ವಾನ್ ಕಣಿವೆಯನ್ನು ಎಂದಿಗೂ ಚೀನಾಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಮೊಹಮ್ಮದ್ ಅಮೀನ್ ಗಲ್ವಾನ್ ಹೇಳಿದ್ದಾರೆ.

Recommended Video

ಪ್ರಪಂಚದ ಮುಂದೆ ಮತ್ತೆ ಪಾಕಿಸ್ತಾನಕ್ಕೆ ಮುಖಭಂಗ | Oneindia Kannada

ಈ ಗಲ್ವಾನ್ ಕಣಿವೆಯನ್ನು ಕಂಡುಹಿಡಿದಿದ್ದ ಗುಲಾಮ್ ರಸೂಲ್ ಗಲ್ವಾನ್ ಅವರ ಮರಿ ಮೊಮ್ಮಗ ಮಹಮದ್ ಅಮೀನ್ ಗಲ್ವಾನ್ ಅವರು ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, 'ಗಲ್ವಾನ್ ಕಣಿವೆ ನನ್ನ ಮುತ್ತಜ್ಜನಿಗೆ ಸೇರಿದ್ದು.

Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?

ಮುತ್ತಜ್ಜ ಗುಲಾಮ್ ರಸೂಲ್ ಗಲ್ವಾನ್ ಅವರು 1890 ರ ದಶಕದಲ್ಲಿ ಗಲ್ವಾನ್ ಕಣಿವೆಯನ್ನು ಕಂಡುಹಿಡಿದ ವ್ಯಕ್ತಿ. ಇದೇ ಕಾರಣಕ್ಕೆ ಈ ಕಣಿವೆಗೆ ಆ ಹೆಸರು ಬಂದಿದೆ. ಚೀನಾ ಗಲ್ವಾನ್ ವಿಚಾರವಾಗಿ ಸುಳ್ಳು ಹೇಳುತ್ತಿದ್ದು, ಭಾರತ ಸರ್ಕಾರ ಯಾವುದೇ ಕಾರಣಕ್ಕೂ ಕಣಿವೆಯನ್ನು ಚೀನಾಗೆ ಒಪ್ಪಿಸಬಾರದು ಎಂದು ಹೇಳಿದ್ದಾರೆ.

Can’t Afford To Lose Galwan, Says Kin Of Man Valley Is Named After

ಗಲ್ವಾನ್ ಕಣಿವೆಯಲ್ಲಿ ಮುಸ್ಲಿಮರು ಬೌದ್ಧರು ಸೇರಿದಂತೆ ಹಲವು ಸಮುದಾಯದ ಜನರಿದ್ದಾರೆ. ಎಲ್ಲರೂ ಭಾರತದ ಸೇನೆಯ ಹಿಂದೆ ಇದ್ದೇವೆ. ಸರ್ಕಾರ ಚೀನಾಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಗಲ್ವಾನ್ ಕಣಿವೆ ಭಾರತದ ಅವಿಭಾಜ್ಯ ಅಂಗ. ಅದನ್ನು ಚೀನಾಗೆ ಒಪ್ಪಿಸುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಮಹಮದ್ ಅಮೀನ್ ಗಲ್ವಾನ್ ಅವರು ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದು, ತಾಂತ್ರಿಕವಾಗಿ ಮತ್ತು ವ್ಯೂಹಾತ್ಮಕವಾಗಿ ಭಾರತಕ್ಕೆ ಅತ್ಯಂತ ಮಹತ್ವದ ಪ್ರದೇಶವಾಗಿದ್ದು, ಯಾವುದೇ ಕಾರಣಕ್ಕೂ ಭಾರತೀಯ ಸೇನೆ ಈ ಭೂ ಪ್ರದೇಶದಲ್ಲಿ ಚೀನಾ ಅತಿಕ್ರಮಣಕ್ಕೆ ಆಸ್ಪದ ನೀಡಬಾರದು. 1962ರ ಯುದ್ಧದ ಬಳಿಕವೂ ಗಲ್ವಾನ್ ಕಣಿವೆ ಭಾರತದಲ್ಲಿಯೇ ಇದೆ. ಭಾರತದಲ್ಲೇ ಉಳಿಯಲಿದೆ ಎಂದು ಹೇಳಿದರು.

ಭಾರತ-ಚೀನಾ ಸಂಘರ್ಷ: ಗಾಲ್ವಾನ್ ಕಣಿವೆ ಹೆಸರಿನ ರಹಸ್ಯಭಾರತ-ಚೀನಾ ಸಂಘರ್ಷ: ಗಾಲ್ವಾನ್ ಕಣಿವೆ ಹೆಸರಿನ ರಹಸ್ಯ

ಗಾಲ್ವಾನ್ ಕಣಿವೆಯೊಂದಿಗಿನ ಅವರ ಕುಟುಂಬದ ಸಂಪರ್ಕ ಮತ್ತು ಕಣಿವೆಯ ಹೆಸರನ್ನು ಹೇಗೆ ಪಡೆದರು ಎಂಬುದರ ಕುರಿತು ಮಾತನಾಡಿದ ಮೊಹಮ್ಮದ್ ಈ ಕಣಿವೆಗೆ ಮುತ್ತಜ್ಜ ಗುಲಾಮ್ ರಸೂಲ್ ಗಾಲ್ವಾನ್ ಅವರ ಹೆಸರನ್ನು ಇಡಲಾಗಿದೆ.

ಬ್ರಿಟಿಷರು ಈ ಪ್ರದೇಶದಲ್ಲಿ ದಾರಿ ತಪ್ಪಿದಾಗ ಗುಲಾಮ್ ರಸೂಲ್ ಗಲ್ವಾನ್ ಅವರು ಸಹಾಯ ಮಾಡಿದ್ದ ಹಿನ್ನೆಲೆಯಲ್ಲಿ ಬ್ರಿಟೀಷ್ ಅಧಿಕಾರಿಗಳು ಈ ಪ್ರದೇಶಕ್ಕೆ ಅವರ ಹೆಸರನ್ನೇ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.

English summary
Mohammad Amin Galwan, grandson of Ghulam Rasool Galwan — the Ladakhi explorer on whose name the Galwan Valley lying along the LAC has been named asserted that the Galwan Valley was, is and will remain part of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X