ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿನ ಪಟೇಲರಿಗೆ ಮೀಸಲಾತಿ ಏಕೆ ಸಿಗುತ್ತಿಲ್ಲ?

By Mahesh
|
Google Oneindia Kannada News

ಅಹಮದಾಬಾದ್, ಆಗಸ್ಟ್ 27: ಗುಜರಾತಿನ ಆನಂದಿಬೆನ್ ಸರ್ಕಾರಕ್ಕೆ ಪಟೇಲ್ ಸಮುದಾಯದ ಪ್ರತಿಭಟನೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಪ್ರಧಾನಿ ನರೇಂದ್ರ ಮೋದಿ ನಾಡಲ್ಲಿ ಹಿಂಸಾಚಾರ, ಗಲಭೆ ಮೊದಲಾಗಿದ್ದು, ಸರ್ಕಾರ ತನ್ನ ಪಟ್ಟು ಸಡಿಲಿಸಲು ಮನಸ್ಸು ಮಾಡಿಲ್ಲ. ಅಸಲಿಗೆ ಏನಿದು ಮೀಸಲಾತಿ ಸಮಸ್ಯೆ? ಮುಂದೆ ಓದಿ...

ಮೂಲತಃ ಕೃಷಿಕರಾದ ಪಟೇಲ್ ಸಮುದಾಯದವರು ಕಾಲಕ್ರಮೇಣ ಜವಳಿ, ವಜ್ರ ಹಾಗೂ ಔಷಧ ತಯಾರಿಕ ಕ್ಷೇತ್ರದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. 1931ರ ಜಾತಿಗಣತಿ ಪ್ರಕಾರ ಗುಜರಾತ್ ಜನಸಂಖ್ಯೆಯಲ್ಲಿ ಪಟೇಲ್ ಸಮುದಾಯವು ಶೇ.15 ರಷ್ಟಿದೆ. ಹೇಗೆ ಲೆಕ್ಕ ಹಾಕಿದರೂ ಶೇ 20ರಷ್ಟು ಪಟೇಲರು ಗುಜರಾತಿನಲ್ಲಿ ಕಾಣಸಿಗುತ್ತಾರೆ.[ಗುಜರಾತ್ ಸರ್ಕಾರ ಅಲ್ಲಾಡಿಸುತ್ತಿರುವ ಹಾರ್ದಿಕ್ ಪಟೇಲ್]

ಇತರೆ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಪಟೇಲ್ ಸಮುದಾಯವನ್ನು ಸೇರಿಸಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಗುಜರಾತ್‌ನ ಪಟೇಲ್ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. [ಹಾರ್ದಿಕ್, ಒಬಿಸಿ, ಗಲಭೆ, ಟ್ವಿಟ್ಟರ್ ನಲ್ಲಿ ಶಾಂತಿ ಮಂತ್ರ]

ಕಳೆದ ಎರಡು ತಿಂಗಳ ಹಿಂದೆ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (PAAS) ಸ್ಥಾಪನೆಯಾಗಿದ್ದು 22 ವರ್ಷ ವಯಸ್ಸಿನ ಬಿಸಿರಕ್ತದ ಯುವಕ ಹಾರ್ದಿಕ್ ಪಟೇಲ್ ಈ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದಾರೆ. [ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ?]

ಪಟೇಲರಿಗೆ ಮೀಸಲಾತಿಗೆ ಏಕೆ ಬೇಕು? ಗುಜರಾತ್ ಸರ್ಕಾರ ಹೇಗೆ ಹಿಂದೇಟು ಹಾಕುತ್ತಿದೆ? ಪಟೇಲ್ ಸಮುದಾಯದ ಸ್ಥಿತಿ ಗತಿ ಹೇಗಿದೆ? ಪ್ರತಿಭಟನೆಯ ಮುಂದಿನ ಸ್ವರೂಪ ಏನು? ಮುಂದೆ ಓದಿ...

ಮೀಸಲಾತಿಗೆ ಏಕೆ ಬೇಕು?

ಮೀಸಲಾತಿಗೆ ಏಕೆ ಬೇಕು?

ಮೂಲತಃ ಕೃಷಿಕರಾದ ಪಟೇಲ್ ಸಮುದಾಯದವರು ಕಾಲಕ್ರಮೇಣ ಜವಳಿ, ವಜ್ರ ಹಾಗೂ ಔಷಧ ತಯಾರಿಕ ಕ್ಷೇತ್ರದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಅದರೆ, ಈಗ ಉದ್ಯಮ ಕೈ ಹಿಡಿಯುತ್ತಿಲ್ಲ, ಮೀಸಲಾತಿ ಪಡೆದವರು ಮೇಲಕ್ಕೆ ಬಂದಿದ್ದಾರೆ ಹಾಗಾಗಿ ನಮಗೂ ಮೀಸಲಾತಿ ನೀಡಿ ಎನ್ನುತ್ತಿದ್ದಾರೆ. ಶೇ 20ರಷ್ಟು ಪಟೇಲರು ಗುಜರಾತಿನಲ್ಲಿ ಕಾಣಸಿಗುತ್ತಾರೆ.

ರಾಜಕೀಯವಾಗಿ ಪಟೇಲ್ ಸಮುದಾಯ

ರಾಜಕೀಯವಾಗಿ ಪಟೇಲ್ ಸಮುದಾಯ

70ರ ದಶಕಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಈ ಸಮುದಾಯ, 81 ಹಾಗೂ 85ರಲ್ಲಿ ದಲಿತ- ಹಿಂದುಳಿದ ವರ್ಗಕ್ಕೆ ಮೀಸಲಾತಿ ವಿರೋಧಿಸಿ ಹೋರಾಟ ನಡೆಸಿದ್ದರು. ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್ ಮಾಡೆಲ್ ಅಭಿವೃದ್ಧಿಗೆ ಮಾರುಹೋಗಿದ್ದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಸಿಎಂ ಆನಂದಿಬೇನ್ ಕೂಡಾ ಪಟೇಲ್ ಸಮುದಾಯದವರು. ಅಗತ್ಯ ಸೌಲಭ್ಯ ಎಲ್ಲಾ ಸಮುದಾಯಕ್ಕೂ ಸಿಗುತ್ತಿದೆ.

ಪಟೇಲ್ ಸಮುದಾಯದ ಬೇಡಿಕೆ ಏನು?

ಪಟೇಲ್ ಸಮುದಾಯದ ಬೇಡಿಕೆ ಏನು?

ಇತರೆ ಹಿಂದುಳಿದ ವರ್ಗ(ಒಬಿಸಿ) ಕೆಟಗರಿಗೆ ಸೇರಿಸಬೇಕು. ಭೂ ಕಳೆದುಕೊಂಡ ಪಾಟೀದಾರ್ ಗಳಿಗೆ ಶೇ 5ರಷ್ಟು ಮೀಸಲು ಕಲ್ಪಿಸಬೇಕು. ವಿಶೇಷ ಹಿಂದುಳಿತ ವರ್ಗಗಳ ಕೋಟಾದಲ್ಲಿ ಸಿಗಬೇಕು.

ಪಟೇಲ್ ಸಮುದಾಯದ ಯುವ ಜನಾಂಗ ಕೃಷಿ ಇಲ್ಲವೇ ಮಧ್ಯಮ ಗಾತ್ರದ ಉದ್ಯಮದಲ್ಲಿ ತೊಡಗಿಕೊಂಡಿದೆ. ಉನ್ನತ ಶಿಕ್ಷಣಕ್ಕೂ ಪಟೇಲರಿಗೂ ಆಗಿ ಬಂದಿಲ್ಲ. ಈಗ ಸಣ್ಣ ಹಾಗೂ ಮಧ್ಯಮ ಉದ್ಯಮ ಬೇಡಿಕೆ ತಗ್ಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ಬೇಡಿಕೆ ಹುಟ್ಟಿಕೊಂಡಿದೆ.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

ವೈಬ್ರಂಟ್ ಗುಜರಾತ್ ಮೂಲಕ ಮೋದಿ ಅವರು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ದೊಡ್ಡ ದೊಡ್ಡ ಕಂಪನಿಗಳನ್ನು ಕರೆ ತಂದ ಮೇಲೆ ಪಟೇಲರ ಉದ್ಯಮ ಡಲ್ ಆಗಿಬಿಟ್ಟಿತು. 2.61 ಲಕ್ಷ ಸಣ್ಣ ಹಾಗೂ ಮಧ್ಯಮಪ್ರಮಾಣದ ಉದ್ಯಮ ರೋಗಗ್ರಸ್ತವಾಗಿವೆ. ಅಹಮದಾಬಾದ್, ಸೂರತ್, ರಾಜ್​ಕೋಟ್, ವಡೋದರಾ, ಭರೂಚ್, ಜಾಮ್ಗರ, ಭಾವನಗರ ಹಾಗೂ ವಲ್ಸಾಡ್​ನಲ್ಲಿ 21 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿತು.

ಪ್ರಧಾನಿ ಮೋದಿ ಮಾಡಿಕೊಂಡ ಮನವಿ

ಪ್ರಧಾನಿ ಮೋದಿ ಮಾಡಿಕೊಂಡ ಮನವಿ ಹೀಗಿದೆ

ಆನಂದಿಬೇನ್ ಪಟೇಲ್ ಪ್ರತಿಕ್ರಿಯೆ

ಆನಂದಿಬೇನ್ ಪಟೇಲ್ ಪ್ರತಿಕ್ರಿಯೆ

ಪಟೇಲ್ ಸಮುದಾಯಕ್ಕೆ ಸೇರಿದವರಾದ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರು ಪ್ರತಿಭಟನೆಗೆ ಜಗ್ಗಿಲ್ಲ. 1992ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ರಾಜ್ಯವು ಶೇ.50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ರಾಜ್ಯದಲ್ಲಿ ಒಬಿಸಿ ಶೇ.27, ಎಸ್ಟಿ-15 ಹಾಗೂ ಎಸ್ಸಿ -7 ಮೀಸಲಾತಿ ಹೊಂದಿದ್ದು, ಹೀಗಾಗಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮೂಲಕ ಪ್ರಕಟಣೆ ಹೊರಡಿಸಲಾಗಿದೆ.

ಹೋರಾಟದ ಮುಂದಿನ ಸ್ವರೂಪ

ಹೋರಾಟದ ಮುಂದಿನ ಸ್ವರೂಪ

ಆನಂದಿಬೇನ್ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿರುವ ಹಾರ್ದಿಕ್ ಪಟೇಲ್ ಅವರಿಗೆ ಬಿಹಾರ ಹಾಗೂ ದೆಹಲಿ ಸರ್ಕಾರದಿಂದ ಬೆಂಬಲ ವ್ಯಕ್ತವಾಗಿದೆ. ಸರ್ಕಾರ ಯಾವ ಒತ್ತಡಕ್ಕೂ ಮಣಿಯದಿದ್ದರೆ ರಾಜಸ್ಥಾನ್, ಬಿಹಾರ್, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿರುವ ಪಟೇಲ್ ಸಮುದಾಯವನ್ನು ಜಾಗೃತಿಗೊಳಿಸಿ ಇನ್ನೂ ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗಲು ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (PAAS) ಯೋಜಿಸಿದೆ.

English summary
Can Gujarat government provide reservation to Patel community? Patels, who control the lucrative diamond cutting and polishing industry of Gujarat, are among the most prosperous businessmen and farmers in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X