ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ. ಸಿಎಂ ಆಗೋದು ಬಾಲಿವುಡ್ ಡ್ರೀಮ್ ಗರ್ಲ್ ಗೆ ನಿಮಿಷದ ಕೆಲಸ, ಆದರೆ

|
Google Oneindia Kannada News

ಮಥುರಾ (ಉತ್ತರ ಪ್ರದೇಶ), ಜುಲೈ 26 : "ನಾನು ಆಗಬೇಕು ಅಂದುಕೊಂಡರೆ ನಿಮಿಷದಲ್ಲಿ ಮುಖ್ಯಮಂತ್ರಿ ಆಗ್ತೀನಿ" ಎಂದು ಹೇಳುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದ್ದಾರೆ ನಟಿ-ಬಿಜೆಪಿ ಸಂಸದೆ ಹೇಮಾಮಾಲಿನಿ.

ಅದೂ ಉತ್ತರ ಪ್ರದೇಶದಂಥ ರಾಜ್ಯಕ್ಕೆ ಮುಖ್ಯಮಂತ್ರಿ ಆಗುವುದು ತನ್ನ ಪಾಲಿಗೆ ನಿಮಿಷದ ವಿಚಾರ ಎಂದು ಹೇಳುವ ಮೂಲಕ ಅಚ್ಚರಿಗೆ ದೂಡಿದ್ದಾರೆ. ರಾಜಸ್ತಾನದ ಬನ್ ಸ್ವಾರದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಗುರುವಾರ ಭಾಗವಹಿಸಿದ್ದ ವೇಳೆ ಹೀಗೆ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೇಮಾಮಾಲಿನಿ ದಿನಾ ಕುಡೀತಾರೆ, ಹಾಗಂತ... : ವಿವಾದಾತ್ಮಕ ಹೇಳಿಕೆಹೇಮಾಮಾಲಿನಿ ದಿನಾ ಕುಡೀತಾರೆ, ಹಾಗಂತ... : ವಿವಾದಾತ್ಮಕ ಹೇಳಿಕೆ

69 ವರ್ಷದ ಹೇಮಾಮಾಲಿನಿಗೆ ಆ ಸ್ಥಾನದ ಬಗ್ಗೆ ಅಂಥ ಆಸಕ್ತಿ ಇಲ್ಲವಂತೆ. ಅದಕ್ಕೆ ನೀಡಿರುವ ಕಾರಣ ಏನು ಗೊತ್ತಾ? ನನಗೆ ಕಟ್ಟಿ ಹಾಕಿದ ಹಾಗೆ ಬದುಕಲು ಆಗಲ್ಲ. ತುಂಬ ಸ್ವಚ್ಛಂದವಾಗಿ ಅಡ್ಡಾಡುತ್ತಾ ಇರುವುದು ನನಗೆ ಇಷ್ಟ. ಆದ್ದರಿಂದ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೂ ಬೇಡ ಅಂದಿದ್ದಾರೆ.

Hema Malini

ಹೇಮಾ ಮಾಲಿನಿ ಮೊದಲ ಬಾರಿಗೆ ರಾಜ್ಯಸಭೆಗೆ 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರ ಇದ್ದ ಅವಧಿಯಲ್ಲಿ ನಾಮ ನಿರ್ದೇಶನಗೊಂಡಿದ್ದರು. ಅದಕ್ಕೂ ಮುನ್ನ ಆಕೆ ಬಿಜೆಪಿ ಪರ ಚುನಾವಣೆ ಪ್ರಚಾರಗಳನ್ನು ಕೈಗೊಂಡಿದ್ದರು. ಆದರೆ 2004ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. 2010ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದರು. 2011ರಲ್ಲಿ ಕಡಿಮೆ ಅವಧಿಗೆ ರಾಜ್ಯಸಬೆಗೆ ಆಯ್ಕೆಯಾದರು.

2014ರಲ್ಲಿ ಚುನಾವಣೆ ರಾಜಕಾರಣಕ್ಕೆ ಇಳಿದ ಅವರು, ರಾಷ್ಟ್ರೀಯ ಲೋಕ ದಳದ ಜಯಂತ್ ಚೌಧರಿ ವಿರುದ್ಧ ಗೆದ್ದರು. ಆದರೂ ಹೇಮಾಮಾಲಿನಿ ಬಾಲಿವುಡ್ ನ 'ಡ್ರೀಮ್ ಗರ್ಲ್' ಅಂತಲೇ ಪ್ರಸಿದ್ಧಿ ಪಡೆದವರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರತ ಹಾಗೂ ವಿದೇಶಗಳಲ್ಲಿ 1000ಕ್ಕೂ ಹೆಚ್ಚು ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ.

English summary
"If I want to, I can become that (chief minister) in a minute," the actor, who switched to politics more than a decade back, told reporters in Rajasthan's Banswara, according to news agency PTI. She was in the city to perform at a religious function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X