ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಳ ಸಂಗಾತಿ, ಆದಾಯದ ಲೆಕ್ಕ ಕೊಡಬೇಕು ಪಕ್ಕಾ

|
Google Oneindia Kannada News

ನವದೆಹಲಿ, ಫೆ. 8: ಹೆಂಡತಿಯರಿಗೆ ಕೇಂದ್ರ ಮಾಹಿತಿ ಹಕ್ಕು ಆಯೋಗ ಹೊಸ ಅಸ್ತ್ರವೊಂದನ್ನು ನೀಡಿದೆ. ಗಂಡನ ವೇತನ, ಹೂಡಿಕೆ ವಿವರಗಳನ್ನು 48 ಗಂಟೆಯೊಳಗೆ ಪಡೆಯಲು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಮುಂದೆ ಮಾಹಿತಿ ಹಕ್ಕು ಕಾಯ್ದೆಗೆ ವ್ಯಾಪ್ತಿಗೆ ನಿಮ್ಮ ಬಾಳ ಸಂಗಾತಿಯೂ ಬರುತ್ತಾರೆ. ಬಾಳ ಸಂಗಾತಿಯ ಆದಾಯ ಎಷ್ಟಿದೆ ಎಂಬುದನ್ನು ಮಾಹಿತಿ ಹಕ್ಕಿನ ಆಧಾರದಲ್ಲಿ ಕೇಳಿ ತಿಳಿದುಕೊಳ್ಳಬಹುದು.[ಸಚಿವರ ನಿವಾಸ ನವೀಕರಣಕ್ಕೆ ಕೋಟಿ-ಕೋಟಿ ಖರ್ಚು]

rti

ಗಂಡನಿಂದ ದೂರವಾಗಿ ವಾಸಿಸುತ್ತಿರುವ ಮಹಿಳೆತಯೊಬ್ಬರ ಅರ್ಜಿ ವಿಚಾರಣೆ ನಡೆಸಿದ ಆಯೋಗ ಈ ತೀರ್ಮಾನ ನೀಡಿದೆ. ಬಾಳ ಸಂಗಾತಿ ತನ್ನ ಎಲ್ಲ ಆಸ್ತಿ ವಿವರವನ್ನು ಹೆಂಡತಿ ಕೇಳಿದ 48 ಗಂಟೆ ಒಳಗೆ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.

ಅರ್ಜಿ ವಿಚಾರಣೆ ನಡೆಸಿದ ಮಾಹಿತಿ ಹಕ್ಕು ಆಯೋಗದ ಆಯುಕ್ತ ಎಂ.ಶ್ರೀಧರ್ ಆಚಾರ್ಯಲು, ಇದು ಸಾರ್ವಜನಿಕ ಹಿತಾಸಕ್ತಿ ಒಳಗೊಂಡ ಸಂಗತಿಯಾಗಿದೆ. ಸಂಗಾತಿಗೆ ಗೌರವಾನ್ವಿತ ಜೀವನ ಕಲ್ಪಿಸುವುದು ಜವಾಬ್ದಾರಿ. ಹೆಂಡತಿ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವುದು ಗಂಡನ ಕರ್ತವ್ಯ ಎಂದು ಹೇಳಿದ್ದಾರೆ.

English summary
Your property details, investments and assets can be accessed by your spouse under the Right to Information Act (RTI). Central Information Commission (CIC) passed the judgment on Friday while dealing with the case of an applicant - an estranged wife and an alleged victim of domestic violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X