ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಸುಪ್ರೀಂ ಅಂಗಳದಲ್ಲಿ ಚೆಂಡು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 22 : ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಲಿಂಗ್ ಮಾಡಬೇಕು ಎಂಬ ಆರ್‌ಬಿಐ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಮುಂದಿನ ವಾರ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಕಲ್ಯಾಣಿ ಮೆನನ್ ಸೇನ್ ಎಂಬುವವರು ಸುಪ್ರೀಂಕೋರ್ಟ್‌ಗೆ ಆರ್‌ಬಿಐ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳ ಅಡಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಆರ್‌ಬಿಐ ಹೇಳಿತ್ತು.

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಆರ್ ಬಿಐಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಆರ್ ಬಿಐ

Can Aadhaar be linked with bank accounts? SC to decide

2017ರ ಅಕ್ರಮ ಗಣ ವರ್ಗಾವಣೆ ತಡೆ 2ನೇ ತಿದ್ದುಪಡಿ ನಿಯಮದ ಪ್ರಕಾರ ಆಧಾರ್ ಸಂಖ್ಯೆಯನ್ನು ಬ್ಯಾಂಕ್‌ ಖಾತೆಯೊಂದಿಗೆ ಜೋಡಣೆ ಮಾಡಬೇಕು ಎಂದು ಆರ್‌ಬಿಐ ಹೇಳಿತ್ತು. ಇದರ ಸಂವಿಧಾನಿದ ಅಗತ್ಯವೇನು? ಎಂದು ಕಲ್ಯಾಣಿ ಮೆನನ್ ಸೇನ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಬೆಂಗಳೂರಲ್ಲಿ ವಿಮಾನವೇರಲು ಆಧಾರ್ ಕಡ್ಡಾಯ !ಬೆಂಗಳೂರಲ್ಲಿ ವಿಮಾನವೇರಲು ಆಧಾರ್ ಕಡ್ಡಾಯ !

ಬ್ಯಾಂಕ್ ಖಾತೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಈಗಾಗಲೇ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಜೂನ್‌ನಿಂದಲೇ ಈ ನಿಯಮ ಜಾರಿಗೆ ಬಂದಿದೆ. ಆದರೆ, ಈಗ ಬರುವ ಖಾತೆಗೂ ಆಧಾರ್ ನಂಬರ್ ಜೋಡಣೆ ಮಾಡಬೇಕು ಎಂದು ಆರ್‌ಬಿಐ ಆದೇಶ ನೀಡಿದೆ.

ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ

2017ರ ಅಕ್ರಮ ಗಣ ವರ್ಗಾವಣೆ ತಡೆ 2ನೇ ತಿದ್ದುಪಡಿ ನಿಯಮದಂತೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಈ ಕುರಿತು 2017ರ ಜೂನ್ 1ರಂದು ಗೆಜೆಟ್ ಆದೇಶ ಪ್ರಕಟವಾಗಿದೆ. ಇದರ ಅನ್ವಯ ಬ್ಯಾಂಕ್‌ಗಳು ಖಾತೆಗೆ ಆಧಾರ್ ನಂಬರ್ ಜೋಡಣೆ ಮಾಡಬೇಕಿದೆ.

English summary
The Reserve Bank of India’s decision to make linking of Aadhaar with bank accounts has come up before the Supreme Court. The petitioner has challenged the constitutional validity of this decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X