ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?

|
Google Oneindia Kannada News

ನವದೆಹಲಿ,ಮಾರ್ಚ್, 04: " ಮಾನ್ಯ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರೇ ನಾವು ನಿಮ್ಮ ಮಕ್ಕಳಲ್ಲ, ಜೆಎನ್ ಯು ವಿದ್ಯಾರ್ಥಿಗಳು, ದಯವಿಟ್ಟು ನಮ್ಮ ಮೇಲೆ ಹೊರಿಸುತ್ತಿರುವ ದೇಶ ದ್ರೋಹದ ಆರೋಪ ನಿಲ್ಲಿಸಿ" ಇದು ಕನ್ಹಯ್ಯಾ ಕುಮಾರ್ ನೇರ ಮಾತುಗಳು.

ದೇಶ ದ್ರೋಹದ ಆರೋಪದ ಮೇಲೆ ಬಂಧಿತನಾಗಿ ಆರು ತಿಂಗಳ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿ ಜವಾಹರಲಾಲ್ ನೆಹರು ವಿವಿ ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯಾ ಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗುರುವಾರ ರಾತ್ರಿ ಮಾತನಾಡಿದ್ದಾರೆ.[ಕನ್ಹಯ್ಯಾ ಕುಮಾರ್ ಘೋಷಣೆ ಕೂಗಿದ 2 ವಿಡಿಯೋ ನಕಲಿ!]

ದೆಹಲಿಯಲ್ಲಿ ಕುಮಾರ್ ಭಾಷಣ ಕೇಳಲು 2,500 ವಿದ್ಯಾರ್ಥಿಗಳು ಸೇರಿದ್ದರು. ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರೇ ಹೈದರಾಬಾದ್ ನ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಅವರ ಮಾತಿನಲ್ಲಿ ವ್ಯಂಗ್ಯ, ಆಕ್ರೋಶ, ದೇಶದ ಬಗ್ಗೆ ಅವರಿಗಿರುವ ಭಾವನೆ ಎಲ್ಲವೂ ವ್ಯಕ್ತವಾಗುತ್ತಿತ್ತು.[ಬಿಗಿ ಭದ್ರತೆಯಲ್ಲಿ ಕನ್ಹಯ್ಯಾ ಕುಮಾರ್ ಬಿಡುಗಡೆ]

ಜೆಎನ್ ಯು ಮರೆಯುವುದು ಕಷ್ಟ

ಜೆಎನ್ ಯು ಮರೆಯುವುದು ಕಷ್ಟ

ಜೆಎನ್ ಯುವಿನಲ್ಲಿ ಪ್ರವೇಶ ಪಡೆಯುವುದು ಎಷ್ಟು ಕಷ್ಟವೋ, ಜೆಎನ್ ಯುನಲ್ಲಿರುವವರನ್ನು ಮರೆಯುವುದೂ ಅಷ್ಟೆ ಕಷ್ಟ.

 ಎಲ್ಲರಿಗೂ ಧನ್ಯವಾದ!

ಎಲ್ಲರಿಗೂ ಧನ್ಯವಾದ!

ಸಂಸತ್ತಿನಲ್ಲಿ ಕುಳಿತು ಯಾವುದು ಸರಿ ಹಾಗೂ ಯಾವುದು ತಪ್ಪು ಎಂದು ನಿರ್ಧಾರ ಮಾಡಿದವರಿಗೆಲ್ಲರಿಗೂ ಧನ್ಯವಾದಗಳು.

ಎಬಿವಿಪಿ ಬಗ್ಗೆ ದ್ವೇಷ ಇಲ್ಲ

ಎಬಿವಿಪಿ ಬಗ್ಗೆ ದ್ವೇಷ ಇಲ್ಲ

ಎಬಿವಿಪಿ ಬಗ್ಗೆ ನನಗೆ ಯಾವುದೆ ದ್ವೇಷ ಇಲ್ಲ. ಮುಂದೆ ದ್ವೇಷ ಸಾಧಿಸುವ ಕೆಲಸವನ್ನು ಮಾಡುವುದಿಲ್ಲ.

ರೈತರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?

ರೈತರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?

ಹುತಾತ್ಮ ಸೈನಿಕರ ಬಗ್ಗೆ ಮಾತನಾಡುವವರು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಬಗ್ಗೆ ಏಕೆ ಮಾತನಾಡುವುದಿಲ್ಲ.

ಮೋದಿಯರೇ ಹಿಟ್ಲರ್ ಬಗ್ಗೆ ಮಾತನಾಡಿ

ಮೋದಿಯರೇ ಹಿಟ್ಲರ್ ಬಗ್ಗೆ ಮಾತನಾಡಿ

ಮೋದಿಯವರೇ ಸ್ಟಾಲಿನ್ ಬಗ್ಗೆ ಮಾತನಾಡುವ ನೀವು ಹಿಟ್ಲರ್ ಮತ್ತು ಮುಸಲೋನಿ ಬಗ್ಗೆಯೂ ಮಾತನಾಡಿ.

ನಾನು ಸತ್ಯವನ್ನೇ ನಂಬಿದ್ದೇನೆ

ನಾನು ಸತ್ಯವನ್ನೇ ನಂಬಿದ್ದೇನೆ

ಪ್ರಧಾನಿಯವರು 'ಸತ್ಯಮೇವ ಜಯತೇ' ಎಂದು ಟ್ವೀಟ್ ಮಾಡಿದ್ದರು. ನಾನು ಸಹ ಸತ್ಯವನ್ನೇ ನಂಬಿದ್ದೇನೆ.

ಭಾರತಕ್ಕೆ ಸ್ವಾತಂತ್ರ್ಯವಿಲ್ಲ

ಭಾರತಕ್ಕೆ ಸ್ವಾತಂತ್ರ್ಯವಿಲ್ಲ

ನಾವು ಭಾರತದಲ್ಲಿ ಸ್ವಾತಂತ್ರ್ಯ ಕೇಳುತ್ತಿಲ್ಲ... ಭಾರತಕ್ಕೆ ಸ್ವಾತಂತ್ರ್ಯ ಕೇಳುತ್ತಿದ್ದೇವೆ.

English summary
Over 2,500 students and teachers gathered at the admin block of Jawaharlal Nehru University on Thursday to welcome JNU students union president Kanhaiya Kumar. Kanhaiya, who has been accused of sedition, was granted a six-month interim bail by the Delhi High Court on Wednesday. While addressing the gathering, Kanhaiya demanded that HRD minister Smriti Irani should grant their fellowships and make honest efforts to apprehend those who are responsible for 26-year-old Rohith Vemula's death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X