ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ರಫ್ತುದಾರರಿಗೆ ದೀಪಾವಳಿಯಲ್ಲಿ 50 ಸಾವಿರ ಕೋಟಿ ರೂ. ನಷ್ಟ

|
Google Oneindia Kannada News

ನವದೆಹಲಿ, ಅಕ್ಟೋಬರ್ 30: ದೀಪಾವಳಿ ವೇಳೆ ಚೀನಾದ ವ್ಯಾಪಾರಿಗಳು 50 ಸಾವಿರ ಕೋಟಿ ರೂ. ನಷ್ಟವನ್ನು ಅನುಭವಿಸುತ್ತಾರೆ ಎಂದು ಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಹೇಳಿದೆ.

ದೀಪಾವಳಿ ವಸ್ತುಗಳ ಆಮದಿನ ವಿಚಾರವಾಗಿ ಸುಮಾರು 20 ವಿತರಣಾ ನಗರಗಳಲ್ಲಿ ಸಂಶೋದನಾ ವಿಭಾಗವು ಸಮೀಕ್ಷೆ ನಡೆಸಿತ್ತು. ದೀಪಾವಳಿ ಸರಕುಗಳು, ಪಟಾಕಿಗಳು ಅಥವಾ ಇತರ ವಸ್ತುಗಳನ್ನು ಚೀನಾಗೆ ಭಾರತೀಯ ವ್ಯಾಪಾರಿಗಳು ಅಥವಾ ಆಮದುದಾರರು ನೀಡಿಲ್ಲ ಎಂದು ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.

"ಮೇಡ್‌ ಇನ್ ಚೀನಾ" ವಸ್ತುಗಳ ಮಾರುಕಟ್ಟೆ ಈಗ ಭಾರತದಲ್ಲಿ ಹೇಗಿದೆ?

ನವದೆಹಲಿ, ಅಹಮದಾಬಾದ್, ಮುಂಬೈ, ನಾಗ್ಪುರ, ಜೈಪುರ, ಲಖನೌ, ಚಂಡೀಗಢ, ರಾಯ್‌ಪುರ, ಭುವನೇಶ್ವರ, ಕೋಲ್ಕತ್ತಾ, ರಾಂಚಿ, ಗುವಾಹಟಿ, ಪಾಟ್ನಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಮಧುರೈ, ಪುದುಚೇರಿ, ಭೋಪಾಲ್ ಮತ್ತು ಜಮ್ಮುವಿನಲ್ಲಿ ಸಮೀಕ್ಷೆ ನಡೆಸಲಾಗಿತ್ತು.

CAIT Pegs Rs 50,000 cr Losses To Chinese Exporters This Deepavali

ದೀಪಾವಳಿ ಹಬ್ಬದ ಮಾರಾಟದ ಅವಧಿಯಲ್ಲಿ ಗ್ರಾಹಕರು ಸುಮಾರು 2 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬಹುದು ಎಂದು ಸಿಎಐಟಿ ನಿರೀಕ್ಷಿಸಿದೆ. ಕಳೆದ ವರ್ಷದಂತೆ ಈ ವರ್ಷವೂ ಸಿಎಐಟಿ ಚೀನಿ ಸರಕುಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದು, ಭಾರತೀಯ ವ್ಯಾಪಾರಿಗಳಿಂದ ಚೀನಾದ ಸರಕುಗಳ ಆಮದು ನಿಲ್ಲಿಸುವ ವಿಷಯದಲ್ಲಿ ಚೀನಾ ಸುಮಾರು 50,000 ಕೋಟಿ ರೂ. ವ್ಯಾಪಾರ ನಷ್ಟವನ್ನು ಅನುಭವಿಸಲಿದೆ ಎಂಬುದು ಖಚಿತವಾಗಿದೆ.

ಲಡಾಖ್‌ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಮಾರಾಮಾರಿಯ ಬಳಿಕವೂ ಭಾರತ ಮತ್ತು ಚೀನಾದ ನಡುವಿನ ವಹಿವಾಟಿಗೆ ಮಾತ್ರ ಯಾವುದೇ ಧಕ್ಕೆಯಾಗಿರಲಿಲ್ಲ.

2020ರ ಜನವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಭಾರತವು ಚೀನಾದಿಂದ ಅತೀ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿತ್ತು. ಈ ಅವಧಿಯಲ್ಲಿ ಭಾರತವು 4.26 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಚೀನಾ, ಅಮೆರಿಕ, ಯುಎಇ, ಸೌದಿ ಅರೇಬಿಯಾ ಮತ್ತು ಇರಾಕ್‌ ಕ್ರಮವಾಗಿ ಭಾರತ ಅತೀ ಹೆಚ್ಚಿನ ಆಮದು ಮಾಡಿಕೊಂಡ ದೇಶಗಳಾಗಿವೆ.

ಚೀನಾದಿಂದ ಭಾರತ 58,71 ಬಿಲಿಯನ್‌ ಡಾಲರ್‌ ( 4.26 ಲಕ್ಷ ಕೋಟಿ ರೂ.) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದರೆ, ಅಮೆರಿಕದಿಂದ 26.89 ಬಿಲಿಯನ್‌ ಡಾಲರ್‌, ಯುಎಇಯಿಂದ 23.96 ಬಿಲಿಯನ್‌ ಡಾಲರ್‌, ಸೌದಿ ಅರೇಬಿಯಾದಿಂದ 17.73 ಬಿಲಿಯನ್‌ ಡಾಲರ್‌ ಹಾಗೂ ಇರಾಕ್‌ನಿಂದ 16.26 ಬಿಲಿಯನ್‌ ಡಾಲರ್‌ ಮೌಲ್ಯದ ವಸ್ತುಗಳನ್ನು ಭಾರತ ಆಮದು ಮಾಡಿಕೊಂಡಿದೆ.

ಕೇವಲ ಈ ಐದು ದೇಶಗಳಿಂದಲೇ ಭಾರತ 143.55 ಬಿಲಿಯನ್‌ ಡಾಲರ್‌ ಅಂದರೆ 10.41 ಲಕ್ಷ ಕೋಟಿ ರೂ. ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಒಟ್ಟಾರೆ ಭಾರತ 2020ರಲ್ಲಿ 371.98 ಬಿಲಿಯನ್‌ ಡಾಲರ್‌ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದು, ಇದರಲ್ಲಿ ಈ ಐದು ದೇಶಗಳ ಪಾಲೇ ಶೇ. 38.59 ರಷ್ಟಿದೆ. ಆದರೆ ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಚೀನಾವು 50 ಸಾವಿರ ಕೋಟಿಯಷ್ಟು ನಷ್ಟ ಅನುಭವಿಸಲಿದೆ.

ಗಡಿಭಾಗದಲ್ಲಿ ತಂಟೆ ಮಾಡುತ್ತಿರುವ ಚೀನಾಗೆ ಪಾಠ ಕಲಿಸುವ ಉದ್ದೇಶದಿಂದ ಒಂದು ವರ್ಗದ ಜನರಿಂದ 'ಬಾಯ್ಕಾಟ್ ಚೀನಾ' ಆಂದೋಲನ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೂಡ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಸುಂಕ ದರ ಹೆಚ್ಚಿಸಿದೆ.

ಚೀನಾದ ವಸ್ತುಗಳಿಗೆ ಆಮದು ಸುಂಕ ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದ ಭಾರತೀಯ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಚೀನಾದ ವಸ್ತುಗಳು ವಾಹನ ತಯಾರಿಕೆಗೆ ಅಗತ್ಯವಿವೆ.

ಲೋಕಲ್ ಸರ್ಕಲ್ ಸಮೀಕ್ಷೆ ಪ್ರಕಾರ, ಪ್ರಸ್ತುತ 43% ಭಾರತೀಯರು ಚೀನಾ ತಯಾರಿತ ವಸ್ತುಗಳ ಖರೀದಿ ನಿಲ್ಲಿಸಿದ್ದಾರೆ. ಕಳೆದ 12 ತಿಂಗಳುಗಳಲ್ಲಿ ಚೀನಾದಲ್ಲಿ ತಯಾರಿಸಿದ ವಸ್ತುಗಳ ಬಳಕೆ ಮಾಡುವುದನ್ನು ಭಾರತೀಯರು ಕ್ರಮೇಣ ಕಡಿಮೆ ಮಾಡುತ್ತಿದ್ದಾರೆ.

"ಮೇಡ್ ಇನ್ ಚೀನಾ" ವಸ್ತುಗಳನ್ನು ಖರೀದಿಸುವುದು ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಆದರೆ ಈ ಅವಧಿಯಲ್ಲಿ ಕೊಂಡುಕೊಂಡ ವಸ್ತುಗಳ ಸಂಖ್ಯೆ ತೀರಾ ಕಡಿಮೆಯಿದ್ದು, 60% ಮಂದಿ 1 ಅಥವಾ 2 ವಸ್ತುಗಳನ್ನು ಮಾತ್ರ ಕೊಂಡುಕೊಂಡಿರುವುದು ಸಮೀಕ್ಷೆಯಿಂದ ಕಂಡುಬಂದಿದೆ.

ಭಾರತದಲ್ಲಿ ಇದೇ ಸಂದರ್ಭ "ದೇಶಿ ವಸ್ತು"ಗಳಿಗೆ ಆದ್ಯತೆ ಹೆಚ್ಚಾಯಿತು. ಇದರೊಟ್ಟಿಗೆ ಟಿಕ್‌ಟಾಕ್, ಅಲಿ ಎಕ್ಸ್‌ಪ್ರೆಸ್ ಇನ್ನಿತರ ಚೀನಾ ಆ್ಪ್‌ಗಳ ಮೇಲೆ ನಿರ್ಬಂಧ ಚೀನಾ ವಸ್ತುಗಳ ಖರೀದಿ ತಗ್ಗಲು ಬಹುಮುಖ್ಯ ಕಾರಣವಾಯಿತು. ನವೆಂಬರ್ 2020ರ ಹಬ್ಬದ ಸೀಸನ್‌ನಲ್ಲಿ ಲೋಕಲ್ ಸರ್ಕಲ್ ಈ ಸಮೀಕ್ಷೆ ಕೈಗೊಂಡಿತ್ತು. ಆ ಸಮಯದಲ್ಲಿ 71% ಭಾರತೀಯರು "ಮೇಡ್ ಇನ್ ಚೀನಾ" ವಸ್ತುಗಳ ಖರೀದಿ ನಿಲ್ಲಿಸಿದ್ದಾರೆ ಎಂಬ ಅಂಶ ತಿಳಿದುಬಂದಿತ್ತು.

ಭಾರತದ 281 ಜಿಲ್ಲೆಗಳ ಸುಮಾರು 18,000 ಮಂದಿಯ ಪ್ರತಿಕ್ರಿಯೆಯನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಚೀನಾ ವಸ್ತುಗಳ ಬೆಲೆ ಕಡಿಮೆ ಇದ್ದದ್ದು ಅವುಗಳನ್ನು ಖರೀದಿಸಲು ಬಹು ಮುಖ್ಯ ಕಾರಣವಾಗಿದೆ. ಬೆಲೆ ಕಡಿಮೆ ಎಂಬ ಕಾರಣಕ್ಕೆ ಚೀನಾ ವಸ್ತುಗಳನ್ನು ಖರೀದಿಸಿದ್ದಾಗಿ 70% ಮಂದಿ ಪ್ರತಿಕ್ರಿಯೆ ನೀಡಿದ್ದರು.

Recommended Video

ಅಪ್ಪು ನೋಡೋದಕ್ಕೆ ಬಂದ ರಮ್ಯಾ ಹೇಳಿದ್ದೇನು? | Oneindia Kannada

English summary
Trader's body CAIT on Friday said it estimates Chinese exporters to suffer business losses worth Rs 50,000 crore this Diwali season due to its boycott call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X