ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್‌ನಲ್ಲಿನ ಭಾರತ ಸರ್ಕಾರದ ಆಸ್ತಿ ಮುಟ್ಟುಗೋಲಿಗೆ ಮುಂದಾದ ಕೇರ್ನ್‌ ಎನರ್ಜಿ

|
Google Oneindia Kannada News

ನವದೆಹಲಿ, ಜುಲೈ 08: ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಬ್ರಿಟನ್ ಮೂಲದ ಕೇರ್ನ್ ಎನರ್ಜಿ ಸಂಸ್ಥೆ ಪ್ಯಾರಿಸ್‌ನಲ್ಲಿ ಭಾರತ ಸರ್ಕಾರಕ್ಕೆ ಸೇರಿದ ಸುಮಾರು 20 ಆಸ್ತಿ ವಶಪಡಿಸಿಕೊಳ್ಳಲು ಫ್ರೆಂಚ್ ನ್ಯಾಯಾಲಯದ ಆದೇಶ ಪಡೆದುಕೊಂಡಿದೆ.

ಕೇರ್ನ್‌ ಅರ್ಜಿಯನ್ನು ಪರಿಗಣಿಸಿದ್ದ ಫ್ರೆಂಚ್ ನ್ಯಾಯಾಲಯ, ಜೂನ್ 11ರಂದು, ಪ್ಯಾರಿಸ್‌ನಲ್ಲಿ ಭಾರತಕ್ಕೆ ಸೇರಿದ ಆಸ್ತಿಗೆ ಮುಟ್ಟುಗೋಲು ಹಾಕಲು ಅನುಮತಿ ನೀಡಿತ್ತು. ಬುಧವಾರ ಸಂಜೆಗೆ ಎಲ್ಲಾ ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದೆ.

ವೇದಾಂತ-ಕೇರ್ನ್ ಡೀಲ್ ಗೆ ಸರ್ಕಾರ ಅಡ್ಡಗಾಲು?ವೇದಾಂತ-ಕೇರ್ನ್ ಡೀಲ್ ಗೆ ಸರ್ಕಾರ ಅಡ್ಡಗಾಲು?

ಕೇರ್ನ್ ಎನರ್ಜಿ ಕಂಪನಿಗೆ ಅನಗತ್ಯವಾಗಿ ತೆರಿಗೆ ವಿಧಿಸುವ ಮೂಲಕ ಭಾರತ ಸರ್ಕಾರ 2014ರ ಭಾರತ- ಬ್ರಿಟನ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಕ್ರೇರ್ನ್ ಅಂತರರಾಷ್ಟ್ರೀಯ ನ್ಯಾಯಮಂಡಳಿ ಮೊರೆಹೋಗಿತ್ತು. ಭಾರತೀಯ ನ್ಯಾಯಮೂರ್ತಿಯೊಬ್ಬರನ್ನು ಒಳಗೊಂಡಿದ್ದ ಅಂತರರಾಷ್ಟ್ರೀಯ ನ್ಯಾಯಮಂಡಳಿ ಕಳೆದ ಡಿಸೆಂಬರ್‌ನಲ್ಲಿ ತೀರ್ಪು ನೀಡಿತ್ತು.

Cairn Energy To Seize 20 Indian Governtment Properties In Paris

ಕೇರ್ನ್ ಸಂಸ್ಥೆಗೆ 1.2 ಬಿಲಿಯನ್ ಡಾಲರ್ ಹಾಗೂ ಬಡ್ಡಿ ಸೇರಿಸಿ ಕೊಡುವಂತೆ ಭಾರತ ಸರ್ಕಾರಕ್ಕೆ ನ್ಯಾಯಮಂಡಳಿ ಸೂಚಿಸಿತ್ತು. ಆದರೆ ಈ ಆದೇಶ ಬಂದ ನಂತರವೂ ಭಾರತ ಹಣ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಕೇರ್ನ್‌ ವಿವಿಧ ದೇಶಗಳಲ್ಲಿರುವ ಭಾರತ ಸರ್ಕಾರದ ಆಸ್ತಿಯನ್ನು ವಶಕ್ಕೆ ಪಡೆಯಲು ಮುಂದಾಗಿದೆ.

ಅಮೆರಿಕ, ಬ್ರಿಟನ್, ನೆದರ್ಲೆಂಡ್‌, ಕೆನಡಾ, ಫ್ರಾನ್ಸ್, ಸಿಂಗಪುರ, ಜಪಾನ್, ಕೇಮನ್ ಐಲೆಂಡ್ಸ್‌ ದೇಶಗಳಲ್ಲಿ ಕೇರ್ನ್‌ ನ್ಯಾಯಾಲಯಗಳ ಮೊರೆ ಹೋಗಿದೆ. ವಿದೇಶಗಳಲ್ಲಿ ಭಾರತ ಸರ್ಕಾರಕ್ಕೆ ಸೇರಿದ 70 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲು ಮುಂದಾಗಿದೆ.

ಇದಕ್ಕೆ ಪ್ರಸ್ತುತ ಫ್ರೆಂಚ್ ನ್ಯಾಯಾಲಯದಲ್ಲಿ ಅನುಮತಿ ದೊರೆತಿದ್ದು, ಪ್ಯಾರಿಸ್‌ನಲ್ಲಿ ಭಾರತಕ್ಕೆ ಸೇರಿದ 20 ಆಸ್ತಿಗಳನ್ನು ಕೇರ್ನ್ ಗುರುತಿಸಿ ವಶಕ್ಕೆ ಪಡೆಯಲು ಮುಂದಾಗಿದೆ.

English summary
Britain's Cairn Energy Plc has secured a French court order to seize some 20 government properties in Paris to recover a part of the USD 1.7 billion due from india,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X