ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಜೆಟ್ ಆಫ್‌ಸೆಟ್ ತಂತ್ರಜ್ಞಾನ ಹಸ್ತಾಂತರಿಸದ ಡಸಾಲ್ಟ್: ಸಿಎಜಿ ವರದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳನ್ನು ಒದಗಿಸುವುದರ ಬಗ್ಗೆ ಒಪ್ಪಂದ ಮಾಡಿಕೊಂಡಿರುವ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ, ಅದರ ಬಿಡಿಭಾಗಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಇನ್ನೂ ಭಾರತಕ್ಕೆ ಹಸ್ತಾಂತರಿಸಿಲ್ಲ.

ರಫೇಲ್‌ನ ಐದು ಯುದ್ಧ ವಿಮಾನಗಳನ್ನು ಭಾರತಕ್ಕೆ ಈಗಾಗಲೇ ಹಸ್ತಾಂತರ ಮಾಡಲಾಗಿದೆ. ಆದರೆ ತಂತ್ರಜ್ಞಾನ ಹಸ್ತಾಂತರದ ಬಗ್ಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ನೀಡಿರುವ ಭರವಸೆಯನ್ನು ಇನ್ನೂ ಈಡೇರಿಸಿಲ್ಲ ಎಂದು ಸಂಸತ್‌ನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.

ರಫೇಲ್ ಯುದ್ಧ ವಿಮಾನ ಹಾರಿಸಲಿದ್ದಾರೆ ಮೊದಲ ಮಹಿಳಾ ಪೈಲಟ್ ಶಿವಾಂಗಿರಫೇಲ್ ಯುದ್ಧ ವಿಮಾನ ಹಾರಿಸಲಿದ್ದಾರೆ ಮೊದಲ ಮಹಿಳಾ ಪೈಲಟ್ ಶಿವಾಂಗಿ

'36 ಮಧ್ಯಮ ಬಹು ಕಾರ್ಯದ ಯುದ್ಧ ವಿಮಾನಗಳಿಗೆ (ಎಂಎಂಆರ್‌ಸಿಎ) ಸಂಬಂಧಿಸಿದ ಆಫ್‌ಸೆಟ್ ಒಪ್ಪಂದದಂತೆ ಡಸಾಲ್ಟ್ ಏವಿಯೇಷನ್ ಮತ್ತು ಎಂಬಿಡಿಎಗಳು ಸೆ 2015ರಂದು ಡಿಆರ್‌ಡಿಒಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಶೇ 30ರಷ್ಟು ಆಫ್‌ಸೆಟ್ ನೆರವುಗಳನ್ನು ಒದಗಿಸುವುದಾಗಿ ತಿಳಿಸಿದ್ದವು. ಹಗುರ ಯುದ್ಧ ವಿಮಾನಗಳಿಗೆ ಸ್ವದೇಶಿ ನಿರ್ಮಿತ ಎಂಜಿನ್ (ಕಾವೇರಿ) ಅಭಿವೃದ್ಧಿಪಡಿಸಲು ಈ ತಾಂತ್ರಿಕ ನೆರವನ್ನು ಪಡೆಯಲು ಡಿಆರ್‌ಡಿಒ ಬಯಸಿತ್ತು. ಇದುವರೆಗೂ ಉತ್ಪಾದಕ ಸಂಸ್ಥೆಯು ಈ ತಂತ್ರಜ್ಞಾನವನ್ನು ವರ್ಗಾಯಿಸುವ ಬಗ್ಗೆ ಖಾತರಿ ನೀಡಿಲ್ಲ' ಎಂದು ವರದಿಯಲ್ಲಿ ಸಿಎಜಿ ಹೇಳಿದ್ದಾರೆ.

CAG Report Says Rafale Makers Yet To Transfer Offset Technology To DRDO

ಅನಿಲ್ ಅಂಬಾನಿ ಅವರ ರಿಲಯನ್ಸ್ ಸಂಸ್ಥೆಯನ್ನು ಒಳಗೊಂಡ ಶೇ 50ರಷ್ಟು ಆಪ್‌ಸೆಟ್ ತಯಾರಿಕೆಯ ಒಪ್ಪಂದವು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ವಿವಾದದ ಸಂಗತಿಯಾಗಿತ್ತು. ಆದರೆ ಇದರ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖವಿಲ್ಲ.

ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್

2005ರಿಂದ 2018ರ ಮಾರ್ಚ್‌ವರೆಗೂ ವಿದೇಶಿ ಕಂಪೆನಿಗಳ ಜತೆ 66,427 ಕೋಟಿ ವೆಚ್ಚದಲ್ಲಿ 46 ಆಫ್‌ಸೆಟ್ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಸಿಎಜಿ ತಿಳಿಸಿದ್ದಾರೆ.

English summary
CAG report said, French manufacturer Dassault Aviaion of Rafale fighter jets has not delivered on its promises regarding transfer of offset technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X