ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಯ್ ಹೊಸ ಕೇಬಲ್ ನೀತಿಗೆ ಬದಲಾಗಲು ಮಾರ್ಚ್ 31ರ ತನಕ ಗಡುವು ವಿಸ್ತರಣೆ

|
Google Oneindia Kannada News

ಹೊಸ ನಿಯಮದ ಪ್ರಕಾರ ಟೀವಿ ಚಾನೆಲ್ ಗಳನ್ನು ಆರಿಸಿಕೊಳ್ಳಲು ಮಾರ್ಚ್ 31ರ ತನಕ ಗಡುವು ವಿಸ್ತರಿಸಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮಂಗಳವಾರದಂದು ಆದೇಶ ನೀಡಿದೆ. ಇದೀಗ ಕೇಬಲ್ ಟೀವಿ ಗ್ರಾಹಕರಿಗೆ ಹೊಸ ನಿಯಮಕ್ಕೆ ಬದಲಾಗಲು ಮಾರ್ಚ್ 31ರ ತನಕ ಅವಕಾಶ ಸಿಕ್ಕಂತಾಗಿದೆ.

ಟ್ರಾಯ್ ಮೂಲದ ಪ್ರಕಾರ, 65% ನಷ್ಟು ಗ್ರಾಹಕರು ಕೇಬಲ್ ಸೇವೆಯನ್ನು ಹಾಗೂ 35% ಡಿಟಿಎಚ್ ಸೇವೆಯನ್ನು ಪಡೆಯುತ್ತಿದ್ದಾರೆ. ಕೇಬಲ್ ಸೇವೆ ನೀಡುತ್ತಿರುವ 10 ಕೋಟಿಗೂ ಹೆಚ್ಚು ಮನೆಗಳು ಹಾಗೂ ಡಿಟಿಎಚ್ ಸೇವೆ ಪಡೆಯುತ್ತಿರುವ 6.7 ಕೋಟಿಗೂ ಹೆಚ್ಚು ಮನೆಗಳಿವೆ.

TRAI

ದೇಶದಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಿರುವ ತಮಗೆ ಬೇಕಾದ ಟೀವಿ ಚಾನಲ್ ಆಯ್ಕೆ ಮಾಡಿಕೊಳ್ಳಬಹುದಾದ ವಿಧಾನವು ಕೆಲವು ಗ್ರಾಹಕರಿಗೆ ಸಮಸ್ಯೆಯಾಗಿದೆ ಎಂದು ಟ್ರಾಯ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನೂ ಕೆಲ ಪ್ರಕರಣಗಳಲ್ಲಿ ಸ್ಥಳೀಯ ಕೇಬಲ್ ಆಪರೇಟರ್ ಗಳಿಗೆ ಗ್ರಾಹಕರನ್ನು ತಲುಪಲು ಸಾಧ್ಯವಾಗಿಲ್ಲ.

ಟ್ರಾಯ್ ನಿಂದ 100 ಕೇಬಲ್ ಚಾನೆಲ್ ಗಳ ಗರಿಷ್ಠ ದರ ನಿಗದಿಟ್ರಾಯ್ ನಿಂದ 100 ಕೇಬಲ್ ಚಾನೆಲ್ ಗಳ ಗರಿಷ್ಠ ದರ ನಿಗದಿ

ಇನ್ನೂ ಕೆಲವರಿಗೆ ಹತ್ತಿರದ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವ ಅನಿವಾರ್ಯ ಇದೆ. ಏಕೆಂದರೆ ಐಟಿ ಸೇವೆಗಳ ಬಗ್ಗೆ ಜ್ಞಾನದ ಕೊರತೆ ಅಥವಾ ಬಳಕೆ ರೂಢಿಯಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ. ಈವರೆಗೆ ಯಾರು ತಮ್ಮ ಅಯ್ಕೆ ಮಾಡಿಕೊಂಡಿಲ್ಲವೋ ಅಂಥವರಿಗಾಗಿಯೇ ‌'ಬೆಸ್ಟ್ ಫಿಟ್ ಪ್ಲಾನ್' ರೂಪಿಸಲು ಟ್ರಾಯ್ ನಿಂದ ಎಲ್ಲ ವಿತರಣಾ ಜಾಲದವರಿಗೂ ಸೂಚಿಸಲಾಗಿದೆ.

ಈ 'ಬೆಸ್ಟ್ ಫಿಟ್ ಪ್ಲಾನ್' ಅಡಿಯಲ್ಲಿ ಈ ಹಿಂದೆ ನೋಡುತ್ತಿದ್ದ ಚಾನಲ್ ಗಳಿಗೆ, ಈ ಹಿಂದೆ ‌ಮಾಡುತ್ತಿದ್ದ ಪಾವತಿಗಿಂತ ಹೆಚ್ಚಾಗಬಾರದು ಎಂಬುದನ್ನು ಖಾತ್ರಿ ಪಡಿಸಲು ಸೂಚಿಸಲಾಗಿದೆ. ಈಗ ಹೊಸ ಪ್ಲಾನ್ ಗೆ ಬದಲಾಗದವರಿಗೆ ಮಾರ್ಚ್ ಮೂವತ್ತೊಂದರ ತನಕ ಅವಕಾಶ ಇದೆ.

English summary
Telecom Regulatory Authority of India (TRAI) on Tuesday extended the deadline for customers to select TV channels under the new tariff regime for the broadcasting sector.Subscribers now have time till March 31 for exercising the option.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X