ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರಕ್ಷತೆ ಇಲ್ಲದಿದ್ದರೆ ಕೇಬಲ್ ಟಿವಿ ಪರವಾನಗಿ ರದ್ದು: ಸುಪ್ರಿಂ

|
Google Oneindia Kannada News

ನವದೆಹಲಿ, ಜನವರಿ 12: ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಕೇಬಲ್ ನೆಟ್‌ವರ್ಕ್ ಪರವಾನಗಿಯನ್ನು ರದ್ದು ಮಾಡಬಹುದು ಎಂದು ಸುಪ್ರಿಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಸುರಕ್ಷತೆ ಇಲ್ಲದ ಕೇಬಲ್ ನೆಟ್‌ವರ್ಕ್‌ಗಳಿಗೆ ನೋಟೀಸ್ ಸಹ ನೀಡದೇ ಪರವಾನಗಿ ನೀಡಬಹುದು ಎಂದು ಸುಪ್ರಿಂ ತನ್ನ ತೀರ್ಪಿನಲ್ಲಿ ಹೇಳಿದೆ. ಈ ವಿಷಯದಲ್ಲಿ ವಿಚಾರಣೆ ಸಹ ಅವಶ್ಯಕತೆ ಇಲ್ಲದೆ ಪರವಾನಗಿ ರದ್ದು ಮಾಡಬಹುದು, ವಿಚಾರಣೆಗೆ ನಂತರ ಅವಕಾಶ ನೀಡಲಾಗುವುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

 Cable networks should got security clearance by the MIB department: Supreme

ತಿದ್ದುಪಡಿ ಆಗಿರುವ ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ ಕಾಯ್ದೆ ಪ್ರಕಾರ 2012 ರ ರೂಲ್‌ 11 ಸಿ ನಿಬಂಧನೆಗಳ ಪ್ರಕಾರ ಸುರಕ್ಷತೆ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಮನೋಹರ್ ಸಪ್ರೆ ಮತ್ತು ಇಂದು ಮಲ್ಹೋತ್ರಾ ಅವರಿದ್ದ ಪೀಠವು ಹೇಳಿದೆ.

ಡಿ.29ರ ಬದಲಿಗೆ ಜನವರಿ 31ಕ್ಕೆ ಕೇಬಲ್ ಟಿವಿ ನಿಯಮ ಜಾರಿಡಿ.29ರ ಬದಲಿಗೆ ಜನವರಿ 31ಕ್ಕೆ ಕೇಬಲ್ ಟಿವಿ ನಿಯಮ ಜಾರಿ

ಕೇಬಲ್ ಟಿವಿ ಸುರಕ್ಷತೆ ಅನುಮೋದನೆ ನೀಡುವುದು ಸಂಬಂಧಪಟ್ಟ ಇಲಾಖೆ ಮತ್ತು ಪ್ರಾಧಿಕಾರದ ಅಧೀನದಲ್ಲಿರುತ್ತದೆ. ಪರವಾನಗಿ ನೀಡುವುದು ರದ್ದು ಮಾಡುವುದು ಸಹ ಅದೇ ಪ್ರಾಧಿಕಾರದ ಅಧಿಕಾರದಲ್ಲಿ ಇರುತ್ತದೆ ಎಂದು ಪೀಠ ಹೇಳಿದೆ.

ಹೊಸ ಕೇಬಲ್ ನೀತಿ ಜಾರಿ, 100 ಚಾನೆಲ್ ಗೆ ಎಷ್ಟು ರೇಟಾಗುತ್ತೆ?ಹೊಸ ಕೇಬಲ್ ನೀತಿ ಜಾರಿ, 100 ಚಾನೆಲ್ ಗೆ ಎಷ್ಟು ರೇಟಾಗುತ್ತೆ?

2015 ರ ಸೆಪ್ಟೆಂಬರ್‌ನಲ್ಲಿ ಬಾಂಬೆ ಹೈಕೋರ್ಟ್‌ ಇದೇ ವಿಷಯವಾಗಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಡಿಜಿ ಕೇಬಲ್ ನೆಟ್‌ವರ್ಕ್‌ ಮತ್ತು ಇತರರು ಸುಪ್ರಿಂಕೋರ್ಟ್‌ ಮೆಟ್ಟಿಲೇರಿದ್ದರು. ಇಲ್ಲಿಯೂ ಅವರಿಗೆ ಸೋಲಾಗಿದೆ.

ಮಲ್ಟಿ ಸಿಸ್ಟಂ ಕಾರ್ಯಾಚರಣೆ ವ್ಯವಸ್ಥೆಯನ್ನು ಗೃಹ ಸಚಿವಾಲಯವು 2014ರಲ್ಲಿ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಡಿಜಿ ಕೇಬಲ್‌ ಬಾಂಬೆ ಹೈಕೋರ್ಟ್‌ ಮೆಟ್ಟಲಿರಿತ್ತು. ಆದರೆ ಅಲ್ಲಿ ಅವರ ಅರ್ಜಿಗೆ ಸೋಲಾಗಿತ್ತು. ಹಾಗಾಗಿ ಸುಪ್ರಿಂಗೆ ಅರ್ಜಿ ಸಲ್ಲಿಸಿದ್ದರು ಆದರೆ ಇಲ್ಲಿಯೂ ಸೋಲಾಗಿದೆ.

English summary
Supreme court today gave verdict that Ministry of information and broadcast can cancel cable tv network's lenience if they did not have security clearance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X