ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇತನ ಪಾವತಿಗೆ ಆನ್ ಲೈನ್, ಚೆಕ್: ಕೇಂದ್ರದಿಂದ ಸುಗ್ರೀವಾಜ್ಞೆ

ಸರಕಾರಿ ನೌಕರರಿಗೆ, ದಿನಗೂಲಿ ನೌಕರರಿಗೆ ಚೆಕ್ ಅಥವಾ ಎಲೆಕ್ಟ್ರಾನಿಕ್ ಟ್ರಾನ್ಸ್ ಫರ್ ಮೂಲಕ ವೇತನ ಪಾವತಿಸಬೇಕು ಎಂದು ಕೇಂದ್ರ ಸಂಪುಟ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ ನಗದು ಮೂಲಕ ವೇತನ ಪಾವತಿಸುವುದಕ್ಕೆ ಸಂಪೂರ್ಣ ನಿಷೇಧ ಮಾಡಿಲ್ಲ.

|
Google Oneindia Kannada News

ನವದೆಹಲಿ, ಡಿಸೆಂಬರ್ 21: ಇನ್ನು ಮುಂದೆ ಸರಕಾರಿ ನೌಕರರಿಗೆ ಹಾಗೂ ದಿನಗೂಲಿ ನೌಕರರಿಗೆ ವೇತನವನ್ನು ಚೆಕ್ ಅಥವಾ ಎಲೆಕ್ಟ್ರಾನಿಕ್ ಟ್ರಾನ್ಸ್ ಫರ್ ಮೂಲಕ ಪಾವತಿಸಬೇಕು ಎಂದು ಕೇಂದ್ರ ಸಂಪುಟವು ಬುಧವಾರ ಸುಗ್ರೀವಾಜ್ಞೆ ಹೊರಡಿಸಿದೆ. ವೇತನ ಪಾವತಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಉದ್ಯೋಗದಾತರು ಇನ್ನು ಮುಂದೆ ವೇತನವನ್ನು ಆನ್ ಲೈನ್ ಅಥವಾ ಚೆಕ್ ಮೂಲಕ ಪಾವತಿಸಬಹುದಾಗಿದೆ. ಆದರೆ ನಗದು ಮೂಲಕ ವೇತನ ಪಾವತಿಸುವುದಕ್ಕೆ ಸರಕಾರವೇನೂ ಸಂಪೂರ್ಣ ನಿಷೇಧ ಮಾಡಿಲ್ಲ. ನಗದು ರೂಪದಲ್ಲಿ ವೇತನ ಪಾವತಿಸುವ ಆಯ್ಕೆಯೂ ಮುಂದುವರಿಯುತ್ತದೆ ಎಂದು ಮೂಲಗಳು ತಿಳಿಸಿವೆ.[ನೋಟು ನಿಷೇಧ ನಂತರದ 9 ಮಹತ್ವದ ಬದಲಾವಣೆಗಳು!]

Cabinet passes Ordinance to make cashless salary

ನೌಕರರ ಮೇಲಿನ ಶೋಷಣೆ ತಡೆಯುವ ಕಾರಣಕ್ಕಾಗಿ ಈ ರೀತಿ ಕ್ರಮಕ್ಕೆ ಮುಂದಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧದ ಘೋಷಣೆ ಮಾಡಿದ್ದರು. ಆನ್ ಲೈನ್ ಹಾಗೂ ಕ್ರೆಡಿಟ್, ಡೆಬಿಟ್ ಕಾರ್ಡ್ ಗಳನ್ನು ವ್ಯವಹಾರಗಳಿಗೆ ಹೆಚ್ಚಾಗಿ ಬಳಸುವಂತೆ ಮನವಿ ಮಾಡಿದ್ದರು.[ಅಪನಗದೀಕರಣದ ಲಾಭ ಎಲ್ಲರಿಗೂ ಸಲ್ಲುತ್ತದೆ : ಪಿಯೂಶ್ ಗೋಯೆಲ್]

ಇದೀಗ ಸುಗ್ರೀವಾಜ್ಞೆಯನ್ನೇ ಹೊರಡಿಸುವ ಮೂಲಕ ಖಾಸಗಿ ವಲಯಕ್ಕೆ ಸಂದೇಶ ರವಾನಿಸಿದಂತಾಗಿದೆ. ಸರಕಾರದ ಜೊತೆಗೆ ಕೈ ಜೋಡಿಸಿ ನಗದುರಹಿತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಒಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ.

English summary
Cabinet passed an ordinance to disburse salary to government employees and daily wage labourers through electronic mode or cheques. The ordinance has been approved after an amendment to the Payment Of Wages Act which empowers employers to pay salaries through online mode and cheques
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X