ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ನಾರೈಗಳಿಗೆ ಪರೋಕ್ಷ ಮತದಾನದ ಹಕ್ಕು ನೀಡಿದ ಮೋದಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 03: ಅನಿವಾಸಿ ಭಾರತೀಯರಿಗೆ ಪರೋಕ್ಷವಾಗಿ ಮತದಾನ ಮಾಡುವ ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ದೇಶದ ಯಾವ ಲೋಕಸಭಾ ಕ್ಷೇತ್ರದಲ್ಲಿ ಎನ್ನಾರೈಗಳು ಹೆಸರು ನೋಂದಾಯಿಸುತ್ತಾರೋ, ಅದೇ ಕ್ಷೇತ್ರದಲ್ಲಿ ಪರೋಕ್ಷವಾಗಿ ಮತದಾನ ಮಾಡಬಹುದು. ಸದ್ಯ ಈ ರೀತಿಯ ಅವಕಾಶ ಸೇನಾ ಸಿಬ್ಬಂದಿಗೆ ಮಾತ್ರ ಇದೆ.

Proxy voting for overseas Indians has been cleared by the Union Cabinet. For overseas Indians, the Representation of the People Act needs to be amended to include proxy voting as other means to cast their votes.


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟದಲ್ಲಿ ಈ ಬಗ್ಗೆ ಒಪ್ಪಿಗೆ ಸಿಕ್ಕಿದೆ.

ಪರೋಕ್ಷ ಮತದಾನಕ್ಕೆ ಅನುವು ಮಾಡಿಕೊಡಲು ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. 2015ರಿಂದ ಈ ಬಗ್ಗೆ ಚರ್ಚೆ ಜಾರಿಯಲ್ಲಿದ್ದು ಚುನಾವಣಾ ಆಯೋಗದ ತಜ್ಞರ ಸಮಿತಿ, ಕಾನೂನು ಸಚಿವಾಲಯ, ಈ ಬಗ್ಗೆ ರೂಪುರೇಷೆ ಹೊರ ತರಲಿದೆ.

ಅನಿವಾಸಿ ಭಾರತೀಯರಿಗೆ ಭಾರತದ ಚುನಾವಣೆಗಳಲ್ಲಿ ಮತದಾನದ ಹಕ್ಕು ನೀಡುವ ಬಗ್ಗೆ ಯುಪಿಎ ಸರ್ಕಾರ 2010ರಲ್ಲಿ ಮೊದಲಿಗೆ ಘೋಷಿಸಿತ್ತು.

ಸಾರ್ವಜನಿಕ ಪ್ರಾತಿನಿಧಿಕ ಕಾಯ್ದೆ 1950ಗೆ ತಿದ್ದುಪಡಿ ತಂದು ಅನಿವಾಸಿ ಭಾರತೀಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ, ಕಾರ್ಯರೂಪಕ್ಕೆ ಬಂದಿರಲಿಲ್ಲ.

ಪ್ರವಾಸಿ ಭಾರತೀಯ ದಿವಸ್ ಅಂಗವಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ, ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆಯಲ್ಲಿ ಈ ಬಗ್ಗೆ ಮತ್ತೊಮ್ಮೆ ಪ್ರಸ್ತಾಪ ಬಂದಿತ್ತು. ಈಗ ಎನ್ ಡಿಎ ಸರ್ಕಾರ ಈ ಬೇಡಿಕೆ ಈಡೇರಿಸಲು ಮುಂದಾಗಿದೆ.

English summary
Proxy voting for overseas Indians has been cleared by the Union Cabinet. For overseas Indians, the Representation of the People Act needs to be amended to include proxy voting as other means to cast their votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X