ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭತ್ತಕ್ಕೆ 200 ರೂ. ಕನಿಷ್ಠ ಬೆಂಬಲ ಬೆಲೆ: ಕೇಂದ್ರ ಸಂಪುಟ ಅನುಮೋದನೆ

|
Google Oneindia Kannada News

ನವದೆಹಲಿ, ಜುಲೈ 4: ಭತ್ತಕ್ಕೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಕ್ವಿಂಟಲ್‌ಗೆ 200 ರೂ.ನಷ್ಟು ಹೆಚ್ಚಿಸಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಈ ನಿರ್ಧಾರ ಕೈಗೊಂಡಿದೆ.

ರೈತರಿಗೆ ತಮ್ಮ ಉತ್ಪಾದನೆಯ ವೆಚ್ಚಕ್ಕಿಂತ ಶೇ 50ಕ್ಕಿಂತ ಹೆಚ್ಚು ದರ ನೀಡುವ ಚುನಾವಣಾ ಪೂರ್ವ ಭರವಸೆಯನ್ನು ಈಗ ಈಡೇರಿಸುವತ್ತ ಕೇಂದ್ರ ಸರ್ಕಾರ ಮುಂದಾಗಿದೆ.

ತೆಲಂಗಾಣದ ಪಟಾಕಿ ಕಾರ್ಖಾನೆಗೆ ಬೆಂಕಿ: 10 ಮಂದಿ ದುರ್ಮರಣತೆಲಂಗಾಣದ ಪಟಾಕಿ ಕಾರ್ಖಾನೆಗೆ ಬೆಂಕಿ: 10 ಮಂದಿ ದುರ್ಮರಣ

ರೈತರ ಕೃಷಿ ಉತ್ಪನ್ನಗಳಿಗೆ ಅದಕ್ಕೆ ತಗಲುವ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಿನ ದರವನ್ನು ನೀಡುವುದಾಗಿ 2014ರಲ್ಲಿ ಬಿಜೆಪಿ ಭರವಸೆ ನೀಡಿತ್ತು.

cabinet approves hike 200 Rs in msp for paddy

ಈ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು ಈ ವರ್ಷದ ಫೆಬ್ರುವರಿ 1ರಂದು ಮಂಡಿಸಿದ ಕೊನೆಯ ವಾರ್ಷಿಕ ಬಜೆಟ್‌ನಲ್ಲಿ ಚಾಲನೆ ನೀಡುವ ಪ್ರಯತ್ನಕ್ಕೆ ಮುಂದಾಗಿತ್ತು.

ಭತ್ತ ಸೇರಿದಂತೆ 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸುವ ಕುರಿತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸಾಮಾನ್ಯ ದರ್ಜೆಯ ಭತ್ತದ ದರವು 200 ರೂ.ನಷ್ಟು ಹೆಚ್ಚಳವಾಗಿದ್ದು, ಕ್ವಿಂಟಲ್‌ಗೆ 1,750 ಲಭ್ಯವಾಗಲಿದೆ. ಹಾಗೆಯೇ 'ಎ' ದರ್ಜೆಯ ಭತ್ತದ ಕನಿಷ್ಠ ಬೆಲೆಯನ್ನು 160 ರೂ.ಗೆ ಏರಿಸಲಾಗಿದ್ದು, ರೈತರಿಗೆ ಕ್ವಿಂಟಲ್‌ಗೆ 1,750 ರೂ. ಸಿಗಲಿದೆ.

ಮುಸ್ಲಿಮರಿಂದ ಅಲ್ಪಸಂಖ್ಯಾತ ಸ್ಥಾನಮಾನ ಹಿಂಪಡೆಯಿರಿ: ತೊಗಾಡಿಯಾಮುಸ್ಲಿಮರಿಂದ ಅಲ್ಪಸಂಖ್ಯಾತ ಸ್ಥಾನಮಾನ ಹಿಂಪಡೆಯಿರಿ: ತೊಗಾಡಿಯಾ

ಮಧ್ಯಮ ಗಾತ್ರದ ಹತ್ತಿಯ ಕನಿಷ್ಠ ಬೆಂಬಲ ಬೆಲೆಯು ಕ್ವಿಂಟಲ್‌ಗೆ 4,020 ರೂ.ನಿಂದ 5,150 ರೂ.ಗೆ ಹೆಚ್ಚಳವಾಗಿದೆ. ಉದ್ದದ ಗಾತ್ರದ ಹತ್ತಿಯ ಎಂಎಸ್‌ಪಿ 4,320 ರೂ.ನಿಂದ 5,450 ರೂ.ಗೆ ಏರಿಕೆಯಾಗಿದೆ.

ಧಾನ್ಯಗಳ ಎಂಎಸ್‌ಪಿಯಲ್ಲಿಯೂ ಹೆಚ್ಚಳ ಮಾಡಲಾಗಿದೆ. ತೊಗರಿಬೇಳೆಯು ಕ್ವಿಂಟಲ್‌ಗೆ 5,450 ರೂ. ನಿಂದ 5,675 ರೂಪಾಯಿಗೆ ಹೆಚ್ಚಳವಾಗಿದೆ. ಕನಿಷ್ಠ ಬೆಂಬಲ ಬೆಲೆಯ ನೆರವಿನಿಂದ ಹೆಸರು ಬೇಳೆ ಕ್ವಿಂಟಲ್‌ಗೆ 5,757 ರೂಪಾಯಿಯಿಂದ 6,975ಗೆ ಏರಿಕೆಯಾಗಿದೆ. ಕ್ವಿಂಟಲ್‌ಗೆ 5,400 ರೂ.ನಷ್ಟಿದ್ದ ಉದ್ದಿನ ಬೇಳೆ ದರ 5600 ರೂ.ಗೆ ತಲುಪಲಿದೆ.

English summary
Union Cabinet headed by Prime Minister Narendra Modi approved for the hike of minimum support price of 200 Rs. per quintal for paddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X