ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ತಿದ್ದುಪಡಿ ಮಸೂದೆ: ಮೋದಿಗೆ 'ಜೈ' ಎಂದ ಸಮೀಕ್ಷಾ ಫಲಿತಾಂಶ

|
Google Oneindia Kannada News

ದೇಶಾದ್ಯಂತ ಸದ್ಯ ಭಾರೀ ಅಶಾಂತಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಸಿ-ವೋಟರ್ ಜನಾಭಿಪ್ರಾಯ ಸಂಗ್ರಹಿಸಿದೆ.

ಪ್ರಮುಖವಾಗಿ ಉತ್ತರ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ, ಹಿಂಸಾಚಾರ ಮುಂದುವರಿದಿದೆ. ಎನ್ಡಿಎ ಮೈತ್ರಿಕೂಟದ ರಾಜ್ಯಗಳಲ್ಲೂ ಈ ಮಸೂದೆ ಜಾರಿಗೆ ಬರುವ ವಿಚಾರದಲ್ಲಿ ಗೊಂದಲ ಮುಂದುವರಿದಿದೆ.

ಪ್ರಚೋದನಕಾರಿ ಹೇಳಿಕೆ: ಯುಟಿ ಖಾದರ್ ವಿರುದ್ಧ ಎಫ್‌ಐಆರ್ ದಾಖಲುಪ್ರಚೋದನಕಾರಿ ಹೇಳಿಕೆ: ಯುಟಿ ಖಾದರ್ ವಿರುದ್ಧ ಎಫ್‌ಐಆರ್ ದಾಖಲು

ಮಸೂದೆಯ ವಿಚಾರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ದೇಶಾದ್ಯಂತ ಬೃಹತ್ ಅಭಿಯಾನ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲೂ ಭಾನುವಾರ (ಡಿ 22) ಮಸೂದೆ ಬೆಂಬಲಿಸಿ ಬೃಹತ್ ಜಾಥಾ ನಡೆಯಲಿದೆ.

NRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿNRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಸಾವಿರಕ್ಕೂ ಹೆಚ್ಚು ಚಿಂತಕರು, ಮೋದಿ ಸರಕಾರವನ್ನು ಬೆಂಬಲಿಸಿದ್ದಾರೆ. ಈ ನಡುವೆ, ಸಿ-ವೋಟರ್ ಜಂಟಿಯಾಗಿ ನಡೆಸಿದ ಜನಾಭಿಪ್ರಾಯವೂ ಮೋದಿ ಸರಕಾರದ ಪರವಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ

ಪೌರತ್ವ ತಿದ್ದುಪಡಿ ಕಾಯ್ದೆ

ಸಿವೋಟರ್ ಮತ್ತು ಐಎಎನ್ಎಸ್ ಜಂಟಿಯಾಗಿ ಸಮೀಕ್ಷೆ ನಡೆಸಲಾಗಿದ್ದು, ತಿದ್ದುಪಡಿ ಮಸೂದೆ ಸರಿಯೋ ತಪ್ಪೋ, ಮಸೂದೆಯ ವಿಚಾರದಲ್ಲಿ ಗೊಂದಲ ಮೂಡಲು ಕಾರಣವಾದ ಅಂಶಗಳು ಯಾವುದು.. ಹೀಗೆ ಹಲವು ವಿಚಾರಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆ.

ಜನರನ್ನು ಕನ್ಫ್ಯೂಸ್ ಮಾಡಿದ್ದು ಯಾರು

ಜನರನ್ನು ಕನ್ಫ್ಯೂಸ್ ಮಾಡಿದ್ದು ಯಾರು

ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಜನರನ್ನು ಕನ್ಫ್ಯೂಸ್ ಮಾಡಿದ್ದು ಯಾರು ಎನ್ನುವ ಪ್ರಶ್ನೆಗೆ, ಜನಾಭಿಪ್ರಾಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ ಫಲಿತಾಂಶ ಹೀಗಿದೆ:

ವಿರೋಧ ಪಕ್ಷಗಳು: ಶೇ. 29
ಮಾಧ್ಯಮಗಳು: ಶೇ.20
ಸರಕಾರ: ಶೇ. 37
ಯಾರೂ ಅಲ್ಲ: ಶೇ. 1
ಹೇಳಲು ಕಷ್ಟ: ಶೇ. 10
ಎಲ್ಲರೂ: ಶೇ.3

ಈಶಾನ್ಯ ರಾಜ್ಯಗಳು ಮತ್ತು ಮುಸ್ಲಿಂ ಸಮುದಾಯದ ತಲಾ ಐನೂರು ಜನ

ಈಶಾನ್ಯ ರಾಜ್ಯಗಳು ಮತ್ತು ಮುಸ್ಲಿಂ ಸಮುದಾಯದ ತಲಾ ಐನೂರು ಜನ

ಡಿಸೆಂಬರ್ 17-19ರ ಅವಧಿಯಲ್ಲಿ, ಸುಮಾರು ಮೂರು ಸಾವಿರ ಜನರ ಅಭಿಪ್ರಾಯವನ್ನು ಕ್ರೋಢಿಕರಿಸಿ ಈ ಸರ್ವೇಯನ್ನು ಸಿದ್ದಪಡಿಸಲಾಗಿದೆ. ಅಸ್ಸಾಂ. ಈಶಾನ್ಯ ರಾಜ್ಯಗಳು ಮತ್ತು ಮುಸ್ಲಿಂ ಸಮುದಾಯದ ತಲಾ ಐನೂರು ಜನ ಅಭಿಪ್ರಾಯವನ್ನೂ ಈ ಸಮೀಕ್ಷೆಯಲ್ಲಿ ಸೇರಿಸಲಾಗಿದೆ (ಇದೇ ಅವಧಿಯಲ್ಲಿ ತೆಗೆದುಕೊಂಡ ಅಭಿಪ್ರಾಯ).

ಮಸೂದೆ, ಮುಸ್ಲಿಂ ಸಮುದಾಯದ ವಿರುದ್ದವೇ ಎನ್ನುವ ಪ್ರಶ್ನೆ

ಮಸೂದೆ, ಮುಸ್ಲಿಂ ಸಮುದಾಯದ ವಿರುದ್ದವೇ ಎನ್ನುವ ಪ್ರಶ್ನೆ

ಸಮೀಕ್ಷೆಯ ಪ್ರಕಾರ ಹೊರಬಿದ್ದ ಇನ್ನೊಂದು ಫಲಿತಾಂಶದ ಪ್ರಕಾರ, ಈ ತಿದ್ದುಪಡಿ ಮಸೂದೆ, ಮುಸ್ಲಿಂ ಸಮುದಾಯದ ವಿರುದ್ದವೇ ಎನ್ನುವ ಪ್ರಶ್ನೆಗೆ ಒಟ್ಟಾರೆಯಾಗಿ ಇಲ್ಲ ಎನ್ನುವ ಉತ್ತರ ಬಂದಿದೆ. ಈ ಸಮೀಕ್ಷೆಗೆ ಬಂದ ಉತ್ತರ ಹೀಗಿದೆ:

ಮುಸ್ಲಿಂ ವಿರುದ್ದವಾಗಿ ಅಲ್ಲ: ಶೇ. 56
ಮುಸ್ಲಿಮರ ವಿರುದ್ದ: ಶೇ. 32
ಮಾಹಿತಿಯಿಲ್ಲ: ಶೇ. 8
ಎಲ್ಲರ ವಿರುದ್ದ: ಶೇ. 4

ಮೋದಿ ಸರಕಾರ

ಮೋದಿ ಸರಕಾರ

ಮೋದಿ ಸರಕಾರದ ಈ ತಿದ್ದುಪಡಿ ಮಸೂದೆಯಕ್ಕೆ ನಿಮ್ಮ ಬೆಂಬಲವಿದೆಯೇ ಎನ್ನುವ ಪ್ರಶ್ನೆಗೆ ಬಂದ ಉತ್ತರ ಹೀಗಿದೆ:

ಸರಕಾರದ ನಿರ್ಧಾರಕ್ಕೆ ಬೆಂಬಲವಿದೆಯೇ, ಹೌದು: ಶೇ. 65
ಸರಕಾರದ ನಿರ್ಧಾರಕ್ಕೆ ಬೆಂಬಲವಿದೆಯೇ, ಹೌದು: ಶೇ. 28
ಸರಕಾರದ ನಿರ್ಧಾರಕ್ಕೆ ಬೆಂಬಲವಿದೆಯೇ, ಪ್ರತಿಕ್ರಿಯಿಸುವುದಿಲ್ಲ: ಶೇ. 7

English summary
ABP-C Voter Survey On Citizenship Act: 62% Indians Support CAA, 65% Want Pan-India NRC Too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X