ಸಿವೋಟರ್ ಸಮೀಕ್ಷೆ : ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ?

By: ಅನುಷಾ ರವಿ
Subscribe to Oneindia Kannada

ನವದೆಹಲಿ, ಮಾರ್ಚ್ 09 : ಚುನಾವಣೆ ಸಮೀಕ್ಷೆ ನಡೆಸುವ ಪ್ರಮುಖ ಸಂಸ್ಥೆಯಾದ ಸಿವೋಟರ್ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ 117 ಸ್ಥಾನಗಳಲ್ಲಿ 59ರಿಂದ 67 ಸ್ಥಾನ ಗಳಿಸಿ ಸರಳ ಬಹುಮತ ಪಡೆಯಲಿದೆ. ಕಾಂಗ್ರೆಸ್ ಪಕ್ಷ 41ರಿಂದ 49 ಸ್ಥಾನಗಳನ್ನು ಗಳಿಸಲಿದೆ ಎಂದು ಈ ಸಮೀಕ್ಷೆ ನುಡಿದಿದೆ.

ಶಿರೋಮಣಿ ಅಕಾಲಿ ದಳ ಮತ್ತು ಭಾರತೀಯ ಜನತಾ ಪಕ್ಷಗಳು ಒಟ್ಟಾಗಿ 5ರಿಂದ 13 ಗಳಿಸಲಿದ್ದರೆ ಉಳಿದವು ಇತರರ ಪಾಲಾಗಲಿವೆ. ಈ ಅದ್ಭುತ ಗೆಲುವನ್ನು ಆಮ್ ಆದ್ಮಿ ಪಕ್ಷ ಗಳಿಸಿದರೆ, ದೆಹಲಿ ಬಿಟ್ಟರೆ ಮತ್ತೊಂದು ರಾಜ್ಯದಲ್ಲಿ ಸರಕಾರ ರಚಿಸುವುದು ಗ್ಯಾರಂಟಿ ಮತ್ತು ಭಗವಂತ್ ಮನ್ ಮೀಸೆ ತಿರುವುದು ಕೂಡ ಗ್ಯಾರಂಟಿ.[ಸಮೀಕ್ಷೆ LIVE : ಉತ್ತರಪ್ರದೇಶದಲ್ಲಿ ಬಿಜೆಪಿ ಹೋಳಿಯ ರಂಗು]

ಉತ್ತರಾಖಂಡ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹಗ್ಗ ಜಗ್ಗಾಟ

ಉತ್ತರಾಖಂಡ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹಗ್ಗ ಜಗ್ಗಾಟ

ಸಿವೋಟರ್ ನಡೆಸಿರುವ ಸಮೀಕ್ಷೆ ನಿಜವೇ ಆದಲ್ಲಿ ಉತ್ತರಾಖಂಡ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದ್ದು, ಹಗ್ಗಜಗ್ಗಾಟ ಆಗುವುದು ಖಚಿತ. ಎರಡೂ ಪಕ್ಷಗಳು 29ರಿಂದ 35 ಸೀಟು ಗೆಲ್ಲುವುದಾಗಿ ಸಿವೋಟರ್ ನುಡಿದಿದೆ. ಉತ್ತರಾಖಂಡ್ ವಿಧಾನಸಭೆಯಲ್ಲಿರುವ ಒಟ್ಟು ಸ್ಥಾನಗಳು 70.[ಚಾಣಕ್ಯ ಭವಿಷ್ಯ: ಉತ್ತರಾಖಂಡ್ ನಲ್ಲಿ ಬಿಜೆಪಿಗೆ ಭರ್ಜರಿ ಜಯ]

ಗೋವಾದಲ್ಲಿ ಬಿಜೆಪಿಗೆ ತುರುಸಿನ ಸ್ಪರ್ಧೆ

ಗೋವಾದಲ್ಲಿ ಬಿಜೆಪಿಗೆ ತುರುಸಿನ ಸ್ಪರ್ಧೆ

ಗೋವಾದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದಾ? ಸಿವೋಟರ್ ಸಮೀಕ್ಷೆ ಪ್ರಕಾರ ಇದು ನಿಜವಾಗಲಿದೆ. ಆಮ್ ಆದ್ಮಿ ಪಕ್ಷ ತನ್ನ ಅಸ್ತಿತ್ವವನ್ನು ಸಾರಿದ್ದರೂ 40 ಸೀಟುಗಳಲ್ಲಿ ಬಿಜೆಪಿ 15ರಿಂದ 21 ಸೀಟುಗಳನ್ನು ಗಳಿಸಲಿದೆ ಎಂದಿದೆ ಸಿವೋಟರ್. ಆಪ್ ನಾಲ್ಕರವರೆಗೆ ಸೀಟು ಗಳಿಸಲಿದ್ದರೆ, ಕಾಂಗ್ರೆಸ್ 2ರಿಂದ 8 ಸ್ಥಾನಗಳನ್ನು ಪಡೆಯಲಿದೆ.[ಗೋವಾದಲ್ಲಿ ಅತಂತ್ರ ವಿಧಾನಸಭೆ - ಸಿ ವೋಟರ್]

ಮಣಿಪುರದಲ್ಲಿ ಬಿಜೆಪಿಗೆ ಗೆಲುವು ಖಚಿತ

ಮಣಿಪುರದಲ್ಲಿ ಬಿಜೆಪಿಗೆ ಗೆಲುವು ಖಚಿತ

ಸಿವೋಟರ್ ಸಮೀಕ್ಷೆಯಂತೆ ಮಣಿಪುರದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ 25ರಿಂದ 31 ಸೀಟುಗಳನ್ನು ಬುಟ್ಟಿಗೆ ಹಾಕಿಕೊಳ್ಳಲಿದೆ. ಕಾಂಗ್ರೆಸ್ 17ರಿಂದ 23 ಸ್ಥಾನ ಪಡೆದು ವಿರೋಧ ಪಕ್ಷದಲ್ಲಿ ಕೂಡಲಿದೆ. ಇರೋಮ್ ಶರ್ಮಿಳಾ ಅವರ ಪಿಆರ್‌ಜೆಎ ಪಕ್ಷ 9ರಿಂದ 15 ಸೀಟುಗಳನ್ನು ಪಡೆಯಲಿದೆ.[ಮಣಿಪುರದಲ್ಲಿ ಕಾಂಗ್ರೆಸ್ ಪಾರಮ್ಯ ಕೊನೆಯಾಗುತ್ತದೆಯೆ?]

ಮಣಿಪುರ ಸಾಕಷ್ಟು ಸಂಘರ್ಷಗಳನ್ನು ಎದುರಿಸುತ್ತಿದ್ದರೂ ಜನರು ಭಾರೀ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದ್ದರು. ಕಳೆದ ಚುನಾವಣೆಯಲ್ಲಿ 60 ಸೀಟುಗಳಲ್ಲಿ 50 ಸೀಟನ್ನು ಗಳಿಸಿ ಕಾಂಗ್ರೆಸ್ ಸರಕಾರ ರಚಿಸಿತ್ತು. ಸಿವೋಟರ್ ಸಮೀಕ್ಷೆ ನಿಜವಾದರೆ ಕಾಂಗ್ರೆಸ್ ಪಕ್ಷ ಮತ್ತೊಂದು ರಾಜ್ಯವನ್ನು ಕಳೆದುಕೊಳ್ಳುವುದು ಖಚಿತ.

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಸಂಕಷ್ಟ

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಸಂಕಷ್ಟ

ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಭಾರತೀಯ ಜನತಾ ಪಕ್ಷ ಅತೀದೊಡ್ಡ ಪಕ್ಷವಾಗಿ ಉತ್ತರಪ್ರದೇಶದಲ್ಲಿ ಹೊರಹೊಮ್ಮಿದರೂ ಏಕಾಂಗಿಯಾಗಿ ಅದಕ್ಕೆ ಸರಕಾರ ರಚಿಸಲು ಶಕ್ಯವಾಗುವುದಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸಿವೋಟರ್ ಪ್ರಕಾರ, ಬಿಜೆಪಿ 155ರಿಂದ 167 ಸೀಟುಗಳನ್ನು ಪಡೆಯಲಿದೆ.[ಉತ್ತರಪ್ರದೇಶದಲ್ಲಿ ಯಾವ ಎಕ್ಸಿಟ್ ಪೋಲ್ ಆಟ ನಡೆಯಲ್ಲ ಏಕೆ?]

403 ಸ್ಥಾನಗಳಿರುವ ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಬೇಕಿದ್ದರೆ ಕನಿಷ್ಠ 202 ಸೀಟುಗಳನ್ನು ಪಡೆದಿರಬೇಕು. ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ 135ರಿಂದ 147 ಸೀಟುಗಳನ್ನು ಮತ್ತು ಬಿಎಸ್ಪಿ 81ರಿಂದ 93 ಸ್ಥಾನಗಳನ್ನು ಪಡೆಯಲಿದೆ ಎಂದಿದೆ ಸಿವೋಟರ್.

ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಏನು ಮಾಡಬೇಕೋ ಅದನ್ನೆಲ್ಲ ಸಮಾಜವಾದಿ ಪಕ್ಷ ಖಂಡಿತ ಮಾಡಲಿದೆ. ಬಹುಮತಕ್ಕೆ ಕಡಿಮೆ ಸೀಟುಗಳು ಬಂದರೆ ಬಿಎಸ್ಪಿಯೊಡನೆ ಮೈತ್ರಿ ಮಾಡಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈಗಾಗಲೆ ಘೋಷಿಸಿದ್ದಾರೆ. ಏನಾಗುತ್ತೋ ಕಾದು ನೋಡೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
C-voter exit polls predicted a clear win for the Aam Aadmi party in Punjab with a comfortable 59 to 67 seats out of the 117 assembly seats in the state. AAP hold the clear win over vote share with Congress projected to win anywhere between 41 to 49 seats according to C-voter exit poll.
Please Wait while comments are loading...