ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 23ಕ್ಕೆ ಮೂರು ಲೋಕಸಭೆ, 7 ವಿಧಾನಸಭೆ ಸ್ಥಾನಕ್ಕೆ ಚುನಾವಣೆ

|
Google Oneindia Kannada News

ನವದೆಹಲಿ, ಮೇ 25: ವಿವಿಧ ರಾಜ್ಯಗಳ ಮೂರು ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಏಳು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗವು ಬುಧವಾರ (ಮೇ 25)ದಂದು ಪ್ರಕಟಣೆ ಹೊರಡಿಸಿ ಜೂನ್ 23ರಂದು ಚುನಾವಣಾ ದಿನಾಂಕ ನಿಗದಪಡಿಸಿದೆ.

ಉತ್ತರ ಪ್ರದೇಶದ ಅಜಂಗಢ ಮತ್ತು ರಾಂಪುರದ ಮೂರು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು ಮೊಹಮ್ಮದ್ ಅಜಮ್ ಖಾನ್ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಈ ಕ್ಷೇತ್ರಗಳನ್ನು ತೆರವು ಮಾಡಿದರು- ಮತ್ತು ಪಂಜಾಬ್‌ನ ರಾಜ್ಯದ ಮುಖ್ಯಮಂತ್ರಿಯಾದ ಭಗವಂತ್ ಮಾನ್ ಅವರಿಂದ ತೆರವಾದ ಸಂಗ್ರೂರ್ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿ, ಮೊದಲ ಬಾರಿಗೆ ಪಂಜಾಬ್ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಿದೆ.

 Bypolls to three Lok Sabha, 7 assembly seats on June 23

ಉಪಚುನಾವಣೆ ನಡೆಯುವ ಏಳು ವಿಧಾನಸಭಾ ಸ್ಥಾನಗಳ ಪೈಕಿ ಒಂದು ದೆಹಲಿಯ ರಾಜಿಂದರ್ ನಗರ, ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿದ್ದ ಎಎಪಿಯ ರಾಘವ್ ಚಡ್ಡಾ ಅವರಿಂದ ತೆರವಾಗಿದೆ.

ಜಾರ್ಖಂಡ್‌ನ ಮಂದರ್, ಆಂಧ್ರಪ್ರದೇಶದ ಆತ್ಮಕೂರ್ ಮತ್ತು ತ್ರಿಪುರಾದ ಅಗರ್ತಲಾ, ಟೌನ್ ಬೋರ್ಡೋವಾಲಿ, ಸುರ್ಮಾ ಮತ್ತು ಜುಬಾರಾಜ್‌ನಗರದಲ್ಲಿ ಉಪಚುನಾವಣೆ ನಡೆಯಲಿರುವ ಉಳಿದ ವಿಧಾನಸಭಾ ಕ್ಷೇತ್ರಗಳಾಗಿವೆ.

ಜೂನ್ 26 ರಂದು ಮತ ಎಣಿಕೆ ನಡೆಯಲಿದ್ದು, ಮೇ 30 ರಂದು ಉಪಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ. ಉಪಚುನಾವಣೆಗಳು ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಚುನಾವಣಾ ಕೊಲಾಜ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಚುನಾವಣಾ ಸಮಿತಿಗೆ ನೆರವಾಗಲಿದೆ ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಬಹುದು. ಹೀಗಾಗಿ, ಈ ಉಪ ಚುನಾವಣೆಗಳು ಮಹತ್ವ ಪಡೆದುಕೊಂಡಿವೆ.

English summary
The by-election to three Lok Sabha and seven assembly seats across six states will be held on June 23, the Election Commission said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X