ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಎಲ್ಲ ಹಳ್ಳಿಗಳಲ್ಲೂ ಮುಂದಿನ ವರ್ಷದ ಹೊತ್ತಿಗೆ ವಿದ್ಯುತ್ ಸಂಪರ್ಕ: ಮೋದಿ

ದೇಶದ ಆರ್ಥಿಕತೆ, ಗ್ರಾಮೀಣ ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ವಿಚಾರಗಳ ಗುಜರಾತ್ ನ ಗಾಂಧೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ

|
Google Oneindia Kannada News

ಗಾಂಧೀನಗರ, ಮೇ 23: ಮುಂದಿನ ವರ್ಷದ ವೇಳೆಗೆ ಭಾರತದ ಎಲ್ಲ ಹಳ್ಳಿಗಳಲ್ಲೂ ವಿದ್ಯುತ್ ಸಂಪರ್ಕ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ ನ ಗಾಂಧೀನಗರದಲ್ಲಿ ಆಫ್ರಿಕನ್ ಡೆವಲಪ್ ಮೆಂಟ್ ಬ್ಯಾಂಕ್ ನ ವಾರ್ಷಿಕ ಸಭೆಯಲ್ಲಿ ಅವರು ಮಂಗಳವಾರ ಮಾತನಾಡಿದರು.

ಮೂಲಸೌಕರ್ಯ, ರೈಲ್ವೆ, ಹೆದ್ದಾರಿ, ವಿದ್ಯುತ್ ಹಾಗೂ ಗ್ಯಾಸ್ ಪೈಪ್ ಲೈನ್ ಗಾಗಿ ನಾವು ಅಪಾರ ಪ್ರಮಾಣದ ಬಂಡವಾಳ ಹೂಡಿದ್ದೇವೆ. ನಮ್ಮ ಮುಂದಿರುವ ಸವಾಲೆಂದರೆ ಗ್ರಾಮೀಣ ಜನರು ಸಹ ಆರ್ಥಿಕ ಹಾಗೂ ಮೂಲ ಸೌಕರ್ಯ ನಿರ್ಮಾಣದ ಲಾಭ ಪಡೆಯುವಂತೆ ಮಾಡುವುದರಲ್ಲಿದೆ ಎಂದು ಅವರು ಹೇಳಿದರು.[ಗ್ರಾಮೀಣ ವಿದ್ಯುತ್ ಸಂಪರ್ಕದಲ್ಲಿ ಮೋದಿ ಸರಕಾರದ ತ್ರಿವಿಕ್ರಮ ಹೆಜ್ಜೆ]

By next year, no village in India will be without electricity: Prime Minister Narendra Modi

ದೇಶದ ರೈತರ ಏಳ್ಗೆ, ಮಹಿಳಾ ಸಬಲೀಕರಣ ಮಾಡುವುದ ಸಹ ನಮಗೆ ಸವಾಲಿನ ಕೆಲಸ. ಕಳೆದ ಮೂರು ವರ್ಷಗಳಲ್ಲಿ ಅಭಿವೃದ್ಧಿ ವಿಚಾರದಲ್ಲಿ ಎದ್ದು ಕಾಣುವಂಥ ಕೆಲಸ ಮಾಡಿದ್ದೇವೆ ಎಂದು ಮೋದಿ ಮಾತನಾಡಿದರು. ಮುಂದುವರಿದು, ಆಫ್ರಿಕಾ-ಭಾರತದ ಮಧ್ಯೆ ಕಳೆದ ಹದಿನೈದು ವರ್ಷಗಳಲ್ಲಿ ವ್ಯಾಪಾರದ ಪ್ರಮಾಣ ದ್ವಿಗುಣವಾಗಿದೆ ಎಂದರು.[ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62]

ಶೈಕ್ಷಣಿಕ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಆಫ್ರಿಕಾ ಮಧ್ಯೆ ನಂಟು ಇದೆ. ಹಲವು ದಶಕಗಳಿಂದ ನಮ್ಮ ಮಧ್ಯೆ ಬಾಂಧವ್ಯ ಗಟ್ಟಿಯಾಗಿದೆ. ನಾನು ಅಧಿಕಾರ ವಹಿಸಿಕೊಂಡ ನಂತರ ಭಾರತದ ವಿದೇಶಾಂಗ ಹಾಘೂ ಆರ್ಥಿಕ ನೀತಿಯಲ್ಲಿ ಆಫ್ರಿಕಾಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದೇನೆ ಎಂದು ಹೇಳಿದರು.

English summary
By next year, no village in India will be without electricity, said by Prime Minister Narendra Modi in African development bank annual meet at Gandhinagar, Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X