ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿ ಈಗ ಜಮ್ಮು ರಾಜ್ಯಪಾಲರ ಸಲಹೆಗಾರ

|
Google Oneindia Kannada News

ನವದೆಹಲಿ, ಜೂನ್ 21: ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ಧ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಐಪಿಎಲ್ ಅಧಿಕಾರಿ ಕೆ. ವಿಜಯ್ ಕುಮಾರ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್‌.ಎನ್. ವೋಹ್ರಾ ಅವರ ಸಲಹೆಗಾರರಾಗಿ ನೇಮಿಸಲಾಗಿದೆ.

ವಿಜಯ್ ಕುಮಾರ್ ಅವರು ಕೇಂದ್ರ ಗೃಹ ಸಚಿವಾಲಯದಲ್ಲಿ ಹಿರಿಯ ಭದ್ರತಾ ಸಲಹೆಗಾರರಾಗಿ ಕಳೆದ ವಾರವಷ್ಟೇ ನಿವೃತ್ತರಾಗಿದ್ದರು.

ಕಾಶ್ಮೀರದ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದ ಸಚಿವ ರಿಜಿಜುಗೆ ಅವಾಜುಕಾಶ್ಮೀರದ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದ ಸಚಿವ ರಿಜಿಜುಗೆ ಅವಾಜು

ವೀರಪ್ಪನ್‌ನನ್ನು ಹಿಡಿಯಲು ತಮಿಳುನಾಡಿನಲ್ಲಿ ರಚಿಸಲಾಗಿದ್ದ ವಿಶೇಷ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ವಿಜಯ್ ಕುಮಾರ್ ಅವರು 'ಆಪರೇಷನ್ ಕಕೂನ್ ಅನ್ನು ಆರಂಭಿಸಿದ್ದರು.

bvr subramanyam and vijaykumar appointed for jammu and kashmir

ವೀರಪ್ಪನ್ ಹತ್ಯೆಯೊಂದಿಗೆ ಯಶಸ್ವಿ ಕಾರ್ಯಾಚರಣೆ ಪೂರ್ಣಗೊಳಿಸಿದ್ದ ವಿಜಯ್‌ಕುಮಾರ್ಬ ಅವರು ಜನಪ್ರಿಯತೆ ಪಡೆದುಕೊಂಡಿದ್ದರು.

ಛತ್ತೀಸಗಡದಲ್ಲಿ ಹೆಚ್ಚುವರಿ ಗೃಹ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಬಿವಿಆರ್ ಸುಬ್ರಮಣ್ಯಂ ಅವರನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿಯನ್ನಾಗಿ ಕೇಂದ್ರ ಸರ್ಕಾರ ನೇಮಿಸಿದೆ.

ಜಮ್ಮು-ಕಾಶ್ಮೀರಕ್ಕೆ ಮಾತ್ರ ರಾಜ್ಯಪಾಲರ ಆಳ್ವಿಕೆ ಏಕೆ?ಜಮ್ಮು-ಕಾಶ್ಮೀರಕ್ಕೆ ಮಾತ್ರ ರಾಜ್ಯಪಾಲರ ಆಳ್ವಿಕೆ ಏಕೆ?

ಕಾರ್ಯಾವಧಿ ವಿಸ್ತರಣೆಯಲ್ಲಿ ಒಂದು ವರ್ಷ ಪೂರೈಸಿರುವ ಬಿ.ಬಿ.ವ್ಯಾಸ್ ಅವರ ಸ್ಥಾನವನ್ನು ಸುಬ್ರಮಣ್ಯಂ ಅವರು ತುಂಬಲಿದ್ದಾರೆ.

ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದಕ್ಕೆ ಪಡೆದುಕೊಂಡಿದ್ದರಿಂದ ಸರ್ಕಾರ ಪತನವಾಗಿದ್ದು, ರಾಜ್ಯಪಾಲರ ಆಳ್ವಿಕೆಯನ್ನು ಹೇರಲಾಗಿದೆ. ಈ ಸಂಬಂಧ ಅಲ್ಲಿ ಸುಬ್ರಮಣ್ಯಂ ಅವರನ್ನು ಸಲಹೆಗಾರರನ್ನಾಗಿ ನೇಮಿಸಲು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

ಸುಬ್ರಮಣ್ಯಂ ಅವರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿ. ಆಂತರಿಕ ಭದ್ರತೆ ವಿಚಾರದಲ್ಲಿ ಅವರು ಪರಿಣತರಾಗಿದ್ದಾರೆ. ಸರ್ಕಾರ ನಿಶ್ಚಿತ ಉದ್ದೇಶಗಳೊಂದಿಗೆ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸುತ್ತಿದೆ.

ರಾಜ್ಯದಲ್ಲಿನ ತನ್ನ ಕಠಿಣ ಮತ್ತು ಬಿಗಿಯಾದ ನೀತಿಗಳನ್ನು ಜಾರಿಗೊಳಿಸುವ ಸಲುವಾಗಿ ಸುಬ್ರಮಣ್ಯಂ ಅವರನ್ನು ನೇಮಿಸಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

English summary
Chhattisgharh additional home secretary BVR Subramanyam and Vijay Kumar who headed the operation against Veerappan, have been appointed as chief secretary and adviser respectively for Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X