ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತ ಬಿ.ವಿ ಶ್ರೀನಿವಾಸ್ ಮತ್ತು ತಂಡ

|
Google Oneindia Kannada News

ಬೆಂಗಳೂರು, ಮೇ 10: ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ೨ನೇ ಅಲೆ ಭಾರತದಲ್ಲಿ ಹಾಸಿಗೆಗಳು, ಆಮ್ಲಜನಕ ಮತ್ತು ಔಷಧಿಗಳ ಕೊರತೆಯನ್ನು ಕಾಣಬಹುದಾಗಿದೆ.

ಭಾರತೀಯ ಯುವ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಅವರ ಸ್ವಯಂಸೇವಕರ ತಂಡವು ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ದೊರೆಯುವಂತೆ ಸಹಾಯ ಮಾಡುತ್ತಿದೆ.

2019ರ ಲೋಕಸಭಾ ಚುನಾವಣೆಯ ನಂತರ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀನಿವಾಸ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೂ, ಅವರು ದೇಶಾದ್ಯಂತ ಜನರಿಗೆ ಸಹಾಯ ಮಾಡಿದ್ದಾರೆ.

BV Srinivas And Team Stand By To Help People In Covid Crisis

ಬಿ.ವಿ ಶ್ರೀನಿವಾಸ್ ನ್ಯೂಜಿಲೆಂಡ್ ಮತ್ತು ಫಿಲಿಪೈನ್ಸ್ ರಾಯಭಾರ ಕಚೇರಿಗಳಿಗೆ ಆಮ್ಲಜನಕ ಪೂರೈಕೆಯನ್ನು ವ್ಯವಸ್ಥೆಗೊಳಿಸಿದರು, ಆದರೆ ಅದು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸರಿಯಾಗಿ ಕಾರ್ಯರೂಪವಾಗಲಿಲ್ಲ.

ಇದೇ ವೇಳೆ ಕೋವಿಡ್ ರೋಗಿಗಳಿಗೆ ನೀವು ಯಾವಾಗ ಸಹಾಯ ಮಾಡಲು ಪ್ರಾರಂಭಿಸಿದ್ದೀರಿ? ನೀವು ಯಾವ ರೀತಿಯ ಬೆಂಬಲವನ್ನು ನೀಡುತ್ತೀರಿ? ಎಂದು ಪ್ರಶ್ನೆ ಕೇಳಿದಾಗ, ""ನಾವು ಕಳೆದ ಒಂದು ತಿಂಗಳಿನಿಂದ ಜನರಿಗೆ ಸಹಾಯ ಮಾಡುತ್ತಿದ್ದೇವೆ. ಹಾಸಿಗೆಗಳು, ಆಮ್ಲಜನಕ ಮತ್ತು ಔಷಧಿಗಳು ಎಲ್ಲಿ ಲಭ್ಯವಿದೆ ಎಂಬುದನ್ನು ಗುರುತಿಸಲು ನಾವು ಅವರಿಗೆ ಸಹಾಯ ಮಾಡುತ್ತೇವೆ'' ಎಂದು ಹೇಳಿದರು.

ನಾವು ಪ್ಲಾಸ್ಮಾ ದಾನಿಗಳನ್ನು ತಲುಪುತ್ತೇವೆ ಮತ್ತು ರೋಗಿಗಳಿಗೆ ವೈದ್ಯರನ್ನು ಸಂಪರ್ಕಿಸುವಂತೆ ಮಡುತ್ತೇವೆ. ಪರೀಕ್ಷೆ, ಪ್ರತ್ಯೇಕತೆ, ರಕ್ತದಾನ, ಡಯಾಲಿಸಿಸ್ ಮತ್ತು ಲಸಿಕೆ ನೋಂದಣಿಯಂತಹ ಸೇವೆಗಳಿಗೆ ನಾವು ಜನರಿಗೆ ಸಹಾಯ ಮಾಡಿದ್ದೇವೆ ಎಂದರು.

BV Srinivas And Team Stand By To Help People In Covid Crisis

ಮಾರ್ಚ್ 7, 2021 ರಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ, ಯುವ ಕಾಂಗ್ರೆಸ್ ದೆಹಲಿಯಲ್ಲಿ ಸಭೆ ನಡೆಸಿತು. ಯುವ ಕಾಂಗ್ರೆಸ್ಸಿನ ಎಲ್ಲಾ ರಾಜ್ಯ ಅಧ್ಯಕ್ಷರು ಅಲ್ಲಿದ್ದರು. ಕೋವಿಡ್ ಬಿಕ್ಕಟ್ಟು ವೇಳೆ ನಾವು ಏನು ಮಾಡಬೇಕೆಂದು ಚರ್ಚಿಸಿ, ಅಂತಿಮಗೊಳಿಸಲಾಯಿತು. ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ನಾವು ಜನರಿಗೆ ಸಹಾಯ ಮಾಡಲು ಸಿದ್ಧರಾಗಿರಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆಂದು ತಿಳಿಸಿದರು.

ನಿಮ್ಮೆಲ್ಲಾ ಸ್ವಯಂಸೇವಕರು ಯುವ ಕಾಂಗ್ರೆಸ್ ಸದಸ್ಯರೇ ಅಥವಾ ಸಾಮಾನ್ಯ ಜನರೂ ಇದ್ದಾರೆಯೇ? ಎಂಬ ಪ್ರಶ್ನೆಗೆ 1,000 ಸ್ವಯಂಸೇವಕರು ಇದ್ದಾರೆ, ಇವರೆಲ್ಲರೂ ಯುವ ಕಾಂಗ್ರೆಸ್‌ಗೆ ಸೇರಿದವರಾಗಿದ್ದಾರೆ ಎಂದರು.

ಈ ಪ್ರಯತ್ನಕ್ಕೆ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ? ನಿಮಗೆ ಹೇಗೆ ಹಣ ನೀಡಲಾಗುತ್ತದೆ? ಎಂಬುದಕ್ಕೆ ಸಾರ್ವಜನಿಕರು ನಮಗೆ ಹಣ ಸಹಾಯ ಮಾಡಿದ್ದಾರೆ. ನಮ್ಮ ಸ್ವಯಂಸೇವಕರೂ ತಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ಉತ್ತರಿಸಿದರು.

BV Srinivas And Team Stand By To Help People In Covid Crisis

ನಮ್ಮ ಸ್ವಯಂಸೇವಕರು ಸ್ಥಳೀಯ ಸಮಸ್ಯೆಗಳೊಂದಿಗೆ ವ್ಯವಹರಿಸುತ್ತಿದ್ದಾರೆ ಮತ್ತು ಸ್ಥಳೀಯ ಜನರು ಖರ್ಚು ಮಾಡುತ್ತಾರೆ. ನಾವು ಅದರ ಬಗ್ಗೆ ನಿಗಾ ಇಡುವುದಿಲ್ಲ. ಇದು ಮೂಲತಃ ಸಮನ್ವಯ ಮತ್ತು ಜನರಿಗೆ ಅಗತ್ಯವಿರುವಾಗ ಅವರಿಗೆ ಸಹಾಯ ಮಾಡಲು ಇರುವುದು ಎಂದು ಹೇಳಿದರು.

Recommended Video

Covid 19 ಪರಿಸ್ಥಿತಿಯಲ್ಲು Tax ಬರೇ ಎಳಿತಿರೋ Nirmala Sitharaman | Oneindia Kannada

ಜನರು ನಿಮ್ಮೊಂದಿಗೆ ಹೇಗೆ ಸಂಪರ್ಕ ಹೊಂದುತ್ತಾರೆ? ಎಂದು ಕೇಳಿದಾಗ, ಫೋನ್ ಕರೆಗಳು, ವಾಟ್ಸಾಪ್ ಗುಂಪುಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರು ನಮ್ಮೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎಂದು ಬಿ.ವಿ ಶ್ರೀನಿವಾಸ ತಿಳಿಸಿದರು.

English summary
Indian Youth National Congress President BV Srinivas and his team of volunteers are assisting Covid-Patients with access to hospital beds, oxygen cylinders and medical supplies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X