ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಕ್ಕೆ ಕಾರಣವಾಯ್ತು ಕುಂಭಮೇಳದ ಕುರಿತ ಹರ್ಷ್ ಗೋಯೆಂಕಾ ಟ್ವೀಟ್

|
Google Oneindia Kannada News

ನವದೆಹಲಿ, ಏಪ್ರಿಲ್ 15: ವಿಶ್ವದ ಪ್ರಸಿದ್ಧ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಕುಂಭಮೇಳ ಈ ಬಾರಿ ಹರಿದ್ವಾರದಲ್ಲಿ ನಡೆಯುತ್ತಿದ್ದು, ಕುಂಭಮೇಳದ ಕುರಿತು ಉದ್ಯಮಿ, ಆರ್‌ಪಿಜಿ ಎಂಟರ್‌ಪ್ರೈಸಸ್ ಸಂಸ್ಥೆ ಅಧ್ಯಕ್ಷ ಹರ್ಷ್ ಗೋಯೆಂಕಾ ಮಾಡಿರುವ ಟ್ವೀಟ್ ವೈರಲ್ ಆಗಿದೆ.

ಸಿಯೆಟ್ ತ್ರೈಮಾಸಿಕ ವರದಿ: ಲಾಭದ ಪ್ರಮಾಣ 128 ಕೋಟಿ ರೂಪಾಯಿಗೆ ಏರಿಕೆಸಿಯೆಟ್ ತ್ರೈಮಾಸಿಕ ವರದಿ: ಲಾಭದ ಪ್ರಮಾಣ 128 ಕೋಟಿ ರೂಪಾಯಿಗೆ ಏರಿಕೆ

ಕುಂಭಮೇಳದ ಫೋಟೊವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅವರು, "ಕುಂಭಮೇಳದಲ್ಲಿ ಮಾಸ್ಕ್ ಅನ್ನು ಎಷ್ಟು ಕೆಳಗೆ ಧರಿಸುತ್ತೇವೆ ಎಂಬುದನ್ನು ನೋಡಿ ಅಂತರರಾಷ್ಟ್ರೀಯ ಪತ್ರಿಕೆಗಳು ದಿಗಿಲುಗೊಳ್ಳಬಹುದು" ಎಂದು ವ್ಯಂಗ್ಯದ ಧಾಟಿಯಲ್ಲಿ ಬರೆದುಕೊಂಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ದೇವರ ಬಗ್ಗೆಯೂ ಗೋಯೆಂಕಾ ಹಾಸ್ಯವೊಂದನ್ನು ಪೋಸ್ಟ್‌ ಮಾಡಿರುವುದು ವಿರೋಧಕ್ಕೆ ಎಡೆಮಾಡಿಕೊಟ್ಟಿದೆ. ಗೋಯೆಂಕಾ ವಿರುದ್ಧ ಟ್ವಿಟ್ಟರ್‌ನಲ್ಲಿ #boycottceat ಎಂಬ ಹ್ಯಾಷ್ ಟ್ಯಾಗ್ ಸೃಷ್ಟಿಸಲಾಗಿದೆ. ಮುಂದೆ ಓದಿ...

 ಕುಂಭಮೇಳದ ಬಗ್ಗೆ ಗೋಯೆಂಕಾ ಟ್ವೀಟ್

ಕುಂಭಮೇಳದ ಬಗ್ಗೆ ಗೋಯೆಂಕಾ ಟ್ವೀಟ್

ಕುಂಭಮೇಳದ ಫೋಟೊವೊಂದನ್ನು ಹಂಚಿಕೊಂಡಿರುವ ಗೋಯೆಂಕಾ, ಕೆಲವು ಸಾಲುಗಳನ್ನು ಬರೆದಿದ್ದಾರೆ. "ಕುಂಭಮೇಳದಲ್ಲಿ ಮಾಸ್ಕ್ ಅನ್ನು ಎಷ್ಟು ಕೆಳಗೆ ಧರಿಸುತ್ತೇವೆ ಎಂಬುದನ್ನು ನೋಡಿ ಅಂತರರಾಷ್ಟ್ರೀಯ ಪತ್ರಿಕೆಗಳು ದಿಗಿಲುಗೊಳ್ಳಬಹುದು" ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಶಿವ ಭೂಲೋಕಕ್ಕೆ ಬಂದು ಮದ್ಯ ಸೇವಿಸುವ ಕುರಿತು ಟ್ವಿಟ್ಟರ್‌ನಲ್ಲಿ ಹಾಸ್ಯವೊಂದನ್ನು ಹಂಚಿಕೊಂಡಿರುವುದು ಆಕ್ರೋಶ ಹುಟ್ಟುಹಾಕಿದೆ.

 #boycott ceat ಎಂಬ ಹ್ಯಾಷ್ ಟ್ಯಾಗ್ ಸೃಷ್ಟಿಸಿ ಆಕ್ರೋಶ

#boycott ceat ಎಂಬ ಹ್ಯಾಷ್ ಟ್ಯಾಗ್ ಸೃಷ್ಟಿಸಿ ಆಕ್ರೋಶ

ಇದು ಹಿಂದೂ ವಿರೋಧಿ ನಡೆ. ಗೋಯೆಂಕಾ ಟ್ವೀಟ್‌ಗಳು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ನೂರಾರು ಮಂದಿ ಆರೋಪ ಮಾಡಿ ಟ್ವೀಟ್ ಮಾಡಿದ್ದಾರೆ. ಅವರು ಹಿಂದೂಗಳ ಕ್ಷಮೆ ಕೇಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಭಾರತದ ಜನರಿಂದಲೇ ನಿಮ್ಮ ಕಂಪನಿ ನಡೆಯುತ್ತಿರುವುದು ಎಂಬುದನ್ನು ಮರೆಯಬೇಡಿ. ನಾವು ಅವಕಾಶ ನೀಡದೇ ಇದ್ದರೆ ನೀವು ಬೀದಿಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಹಿಂದೂ ವಿರೋಧಿ ನಡೆ ಇದು ಎಂದು ಖಂಡಿಸಿ #boycott ceat ಎಂಬ ಹ್ಯಾಷ್ ಟ್ಯಾಗ್ ಸೃಷ್ಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಅಳಿಸಿ ಹಾಕಿದ ಗೋಯೆಂಕಾ

ತಮ್ಮ ಟ್ವೀಟ್‌ಗಳಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಬುಧವಾರ ಗೋಯೆಂಕಾ ಟ್ವೀಟ್‌ಗಳನ್ನು ಅಳಿಸಿ ಹಾಕಿದ್ದಾರೆ. ಋಣಾತ್ಮಕ ಜನರಿಗೆ ಎಷ್ಟು ಕಡಿಮೆ ಪ್ರತಿಕ್ರಿಯಿಸುತ್ತೀರೋ (ಟ್ವಿಟ್ಟರ್ ಒಳಗೊಂಡಂತೆ) ನಿಮ್ಮ ಜೀವನ ಅಷ್ಟೇ ಶಾಂತಿಯುತವಾಗಿರುತ್ತದೆ ಎಂದು ಕೊನೆಯದಾಗಿ ಬರೆದುಕೊಂಡಿದ್ದಾರೆ.

 ಇದು ಈಗಿನ ಕುಂಭಮೇಳದ ಚಿತ್ರವಲ್ಲ

ಇದು ಈಗಿನ ಕುಂಭಮೇಳದ ಚಿತ್ರವಲ್ಲ

ಉದ್ಯಮಿ ಹರ್ಷ್ ಗೋಯೆಂಕಾ ಹಂಚಿಕೊಂಡಿರುವ ಚಿತ್ರದ ಕುರಿತು ಆಕ್ಷೇಪ ವ್ಯಕ್ತವಾಗಿದೆ. ಈ ಚಿತ್ರ ಹಳೆಯದ್ದಾಗಿದ್ದು, ಉತ್ತರ ಪ್ರದೇಶದಲ್ಲಿ 2013ರಲ್ಲಿ ನಡೆದ ಕುಂಭಮೇಳದ ಚಿತ್ರವಾಗಿದೆ ಎಂದು ಟ್ವೀಟ್‌ಗಳು ಹರಿದಾಡುತ್ತಿವೆ. ಕೊರೊನಾ ನಡುವೆ ಕುಂಭಮೇಳ ಆಯೋಜನೆ ಕುರಿತು ಆಕ್ಷೇಪ ಕೇಳಿಬಂದಿದ್ದು, ಇದಕ್ಕೆ ಭಿನ್ನ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಗೋಯೆಂಕಾ ಅವರು ಹಳೆಯ ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಜನರ ಭಾವನೆಗಳೊಂದಿಗೆ ವ್ಯಂಗ್ಯ ಮಾಡಿದ್ದಾರೆ ಎಂದು ಕೆಲವರು ದೂರಿದ್ದಾರೆ. ನಮಗೆ ಸಿಯೆಟ್ ಕಂಪನಿ ಟೈರ್‌ಗಳ ಹೊರತಾಗಿ ಬೇರೆ ಆಯ್ಕೆಗಳು ಸಾಕಷ್ಟಿವೆ. ನಿಮ್ಮ ಕಂಪನಿ ಟೈರ್‌ಗಳನ್ನು ಬಹಿಷ್ಕರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Business man, RPG Enterprises president Harsh Goenka tweet on kumbh mela triggers controversy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X