ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶದಲ್ಲಿ ಭಸ್ಮವಾದ 500, 1000 ನೋಟುಗಳು ಯಾರದ್ದು?

By Mahesh
|
Google Oneindia Kannada News

ಲಕ್ನೋ, ನವೆಂಬರ್ 9: ಹಳೆಯ 500, 1,000 ರೂಪಾಯಿ ನೋಟುಗಳನ್ನು ಸರ್ಕಾರ ಹಿಂಪಡೆದು ಅದಕ್ಕೆ ಅಂತಿಮ ಸಂಸ್ಕಾರ ನೆರವೇರಿಸುವ ಮೊದಲೇ ಉತ್ತರಪ್ರದೇಶದ ಬರೇಲಿ ಅರಣ್ಯದಲ್ಲಿ 500 ಮತ್ತು 1000 ರೂ.ಗಳ ರಾಶಿ ರಾಶಿ ನೋಟುಗಳ ಕಂತೆಗೆ ಬೆಂಕಿ ಹಚ್ಚಿರುವ ಪ್ರಕರಣ ಬೆಳಕಿಗೆ ಬಂದಿದೆ.

ಖೋಟಾನೋಟು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ 500, 1,000 ರು ಮುಖಬೆಲೆಯ ನೋಟುಗಳ ಮಾನ್ಯತೆಯನ್ನು ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಆದೇಶ ಹೊರಡಿಸಿದ್ದರು.

Burnt currency notes found in UP town

ಈ ರೀತಿ ರದ್ದಾಗಿ ರದ್ದಿ ಕಾಗದಂತಾಗಿರುವ ಅಧಿಕ ಮೌಲ್ಯದ ಹಣವನ್ನು ಗೋಣಿಚೀಲಗಳಲ್ಲಿ ತುಂಬಿ ನಂತರ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ. ಎಷ್ಟು ಮೊತ್ತದ ಹಣ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಭಾರಿ ಪ್ರಮಾಣದಲ್ಲಿ ಸುಟ್ಟು ಕರಕ
ಲಾಗಿದ್ದು, ಆ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಬರೇಲಿಯ ಪರ್ಸಾ ಖೇಡ ರಸ್ತೆಯ ಸಿಬಿ ಗಂಜ್ಎಂಬಲ್ಲಿ ಘಟನೆ ನಡೆದಿದ್ದು, ಮೊದಲಿಗೆ ನೋಟುಗಳನ್ನು ಹರಿದು ಹಾಕಿ ನಂತರ ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈಗ ಅರ್ಧ ಸುಟ್ಟಿರುವ ನೋಟುಗಳು ಅಸಲಿಯೋ ಅಥವಾ ನಕಲಿಯೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬರೇಲಿಯ ಎಸ್‍ಪಿ ಜೋಗಿಂದರ್ ಸಿಂಗ್ ಹೇಳಿದ್ದಾರೆ.

ನೋಟುಗಳ ವಿನಿಮಯದ ವೇಳೆ ಘೋಷಿತ ಆದಾಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಣ ವಿನಿಮಯ ಮಾಡಿದ್ದು ಕಂಡು ಬಂದರೆ ಶೇ.200 ರಷ್ಟು ದಂಡ ವಿಧಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿರುವುದು ಕಾಳಧನಿಕರಿಗೆ ನಡುಕ ಹುಟ್ಟಿಸಿರಬಹುದು.(ಐಎಎನ್ಎಸ್)

English summary
The burnt remnants of Rs 500 and Rs 1,000 currency notes were found at a place in Bareilly on Wednesday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X