ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೂ ಕಾಲಿಟ್ಟ ಬುಲ್‌ಬುಲ್: 4 ರಾಜ್ಯಗಳಿಗೆ ಹೈ ಅಲರ್ಟ್

|
Google Oneindia Kannada News

Recommended Video

Bulbul and Maha Cyclone tag team have resulted high alert in 4 states | Oneindia Kannada

ಬೆಂಗಳೂರು, ನವೆಂಬರ್ 8: ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಅಪ್ಪಳಿಸಿರುವ ಮಹಾ ಮತ್ತು ಬುಲ್‌ಬುಲ್ ಚಂಡಮಾರುತದಿಂದ ನಾಲ್ಕು ರಾಜ್ಯಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಮಹಾ ಹೆಸರಿನ ಚಂಡಮಾರುತ ಸಕ್ರಿಯವಾಗಿದೆ. ಇನ್ನೊಂದೆಡೆ ಬಂಗಾಳಕೊಲ್ಲಿಯಲ್ಲಿ ಬುಲ್‍ಬುಲ್ ಹೆಸರಿನ ಸಮುದ್ರ ಸುಂಟರಗಾಳಿ(ಸೈಕ್ಲೋನ್) ತೀವ್ರ ಸ್ವರೂಪ ಪಡೆಯುತ್ತಿದೆ. ಈ ಎರಡೂ ಚಂಡಮಾರುತಗಳಿಂದ ಪಶ್ಚಿಮ ಮತ್ತು ಪೂರ್ವ ಕರಾವಳಿಯ ತಲಾ ಎರಡೆರಡು ರಾಜ್ಯಗಳಲ್ಲಿ ಭಾರೀ ಬಿರುಗಾಳಿಯಿಂದ ಕೂಡಿದ ಧಾರಾಕಾರ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಬುಲ್‌ಬುಲ್ ಪ್ರಭಾವ, ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭಬುಲ್‌ಬುಲ್ ಪ್ರಭಾವ, ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭ

ಎರಡು ಸಮುದ್ರದಲ್ಲಿ ಏಕಕಾಲದಲ್ಲಿ ಎರಡು ಚಂಡಮಾರುತಗಳು ಕಾಣಿಸಿಕೊಂಡಿರುವುದು ಅಪರೂಪದ ವಿದ್ಯಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಕರ್ನಾಟಕಟಲ್ಲಿ ಅಲರ್ಟ್ ಘೋಷಿಸಲಾಗಿದೆ.

ಮಹಾ ಚಂಡಮಾರುತ ಇನ್ನೂ ಸಕ್ರಿಯ

ಮಹಾ ಚಂಡಮಾರುತ ಇನ್ನೂ ಸಕ್ರಿಯ

ಅರಬ್ಬಿ ಸಮುದ್ರದಲ್ಲಿ ಮಹಾ ಹೆಸರಿನ ಚಂಡಮಾರುತ ಸಕ್ರಿಯವಾಗಿದೆ. ಇನ್ನೊಂದೆಡೆ ಬಂಗಾಳಕೊಲ್ಲಿಯಲ್ಲಿ ಬುಲ್‍ಬುಲ್ ಹೆಸರಿನ ಸಮುದ್ರ ಸುಂಟರಗಾಳಿ(ಸೈಕ್ಲೋನ್) ತೀವ್ರ ಸ್ವರೂಪ ಪಡೆಯುತ್ತಿದೆ. ಈ ಎರಡೂ ಚಂಡಮಾರುತಗಳಿಂದ ಪಶ್ಚಿಮ ಮತ್ತು ಪೂರ್ವ ಕರಾವಳಿಯ ತಲಾ ಎರಡೆರಡು ರಾಜ್ಯಗಳಲ್ಲಿ ಭಾರೀ ಬಿರುಗಾಳಿಯಿಂದ ಕೂಡಿದ ಧಾರಾಕಾರ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಯಾವ್ಯಾವ ರಾಜ್ಯಗಳಲ್ಲಿ ಹೈ ಅಲರ್ಟ್

ಯಾವ್ಯಾವ ರಾಜ್ಯಗಳಲ್ಲಿ ಹೈ ಅಲರ್ಟ್

ಇದಕ್ಕೆ ಮುನ್ಸೂಚನೆಯಾಗಿ ಗುಜರಾತ್ ಮತ್ತು ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಇಂದು ಸಂಜೆ ವೇಳೆಗೆ ಸೈಕ್ಲೋನ್ ತೀವ್ರ ಸ್ವರೂಪ ಪಡೆಯಲಿದೆ. ಚಂಡಮಾರುತದ ರೌದ್ರಾವತಾರದ ಪರಿಣಾಮಗಳನ್ನು ಹೆದರಿಸಲು ಈ ನಾಲ್ಕೂ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕದಲ್ಲೂ ಮಳೆಯಾಗುವ ಎಲ್ಲಾ ಮುನ್ಸೂಚನೆಗಳಿವೆ.

ಒಡಿಶಾದ 16 ಜಿಲ್ಲೆಗಳಿಗೆ ರೆಡ್ ಅಲರ್ಟ್

ಒಡಿಶಾದ 16 ಜಿಲ್ಲೆಗಳಿಗೆ ರೆಡ್ ಅಲರ್ಟ್

ಒಡಿಶಾದ 16 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈಗಾಘಲೇ ಒಡಿಶಾ ಸೇರಿದಂತೆ ಹಲವೆಡೆ ಮಳೆ ಆರಂಭವಾಗಿದೆ. ಇನ್ನೂ ನಾಲ್ಕೈದು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲೂ ಮಳೆ ಸಾಧ್ಯತೆ

ಕರ್ನಾಟಕದಲ್ಲೂ ಮಳೆ ಸಾಧ್ಯತೆ

ಕರ್ನಾಟಕದ ಕೊಡಗು, ಉತ್ತರ ಕರ್ನಾಟಕ, ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಿದೆ. ಬೆಂಗಳೂರಲ್ಲಿ ಬೆಳಗಿನ ಜಾವದಿಂದಲೇ ಮಳೆ ಆರಂಭವಾಗಿದೆ. ಅರಬ್ಬಿ ಸಮುದ್ರದಲ್ಲಿ ಉದ್ಭವವಾದ ಕ್ಯಾರ್ ಹಾಗೂ ಮಹಾ ಚಂಡಮಾರುತದಿಂದ ಸಾಕಷ್ಟು ಅಪಾಯವಿದೆ. ಆದರೆ ಬುಲ್ ಬುಲ್ ಚಂಡ ಮಾರುತ ಅತಿ ಹೆಚ್ಚು ಅನಾಹುತವನ್ನು ಸೃಷ್ಟಿಸಲಾರದು ಎಂದು ಹೇಳಲಾಗಿದೆ. ಆದರೆ ಗಾಳಿಯ ಒತ್ತಡ ಎಷ್ಟಿರುತ್ತದೆ ಎನ್ನುವುದರ ಮೇಲೆ ನಿರ್ಧರಿತವಾಗಿರುತ್ತದೆ.

English summary
The High Alert has been announced for four states following the Maha and Bulbul Cyclone that simultaneously struck the Arabian Sea and Bengal Bay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X