ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ: ಒಬ್ಬ ಶಂಕಿತನ ಬಂಧನ

|
Google Oneindia Kannada News

ಶ್ರೀನಗರ, ಜೂನ್ 15: ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ.

ಶಂಕಿತ ಆರೋಪಿಯನ್ನು ಜುಬೈರ್ ಖದ್ರಿ ಎಂದು ಗುರುತಿಸಲಾಗಿದೆ. ಬುಖಾರಿ ಅವರೊಂದಿಗೆ ಹತ್ಯೆಗೆ ಒಳಗಾದ ಪೊಲೀಸ್ ಅಧಿಕಾರಿಯಿಂದ ಪಿಸ್ತೂಲ್‌ಅನ್ನು ಖದ್ರ ಕಸಿದುಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿತ್ತು ಎಂದು ಇನ್‌ಸ್ಪೆಕ್ಟರ್ ಜನರಲ್ ಸ್ವಯಂ ಪ್ರಕಾಶ್ ಪಾಣಿ ತಿಳಿಸಿದ್ದಾರೆ.

ಕಾಶ್ಮೀರ ಪತ್ರಕರ್ತನ ಹತ್ಯೆ: ಸಿಸಿಟಿವಿಯಲ್ಲಿದೆ ಶಂಕಿತ ಆರೋಪಿಗಳ ಚಿತ್ರ!ಕಾಶ್ಮೀರ ಪತ್ರಕರ್ತನ ಹತ್ಯೆ: ಸಿಸಿಟಿವಿಯಲ್ಲಿದೆ ಶಂಕಿತ ಆರೋಪಿಗಳ ಚಿತ್ರ!

ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದ್ದು, ಅಪರಾಧ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಶಂಕಿತನ ಹಾಜರಾತಿಯ ಬಗ್ಗೆ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದುವರೆಗೂ ಆತ ಯಾವುದೇ ತೃಪ್ತಿಕರವಾದ ಉತ್ತರ ನೀಡಿಲ್ಲ ಎಂದು ಅವರು ವಿವರಿಸಿದ್ದಾರೆ.

bukhari murder: police arrested one suspect

ಪತ್ರಕರ್ತನ ಹತ್ಯೆಯು ಭಯೋತ್ಪಾದನಾ ದಾಳಿ ಎಂದು ಅವರು ಹೇಳಿದರು.

ನಾಲ್ಕನೆ ಶಂಕಿತ:
ನಾಲ್ಕನೆಯ ಶಂಕಿತ ಆರೋಪಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಮುಂದಿನ ವಿಚಾರಣೆಗೆ ಪೂರಕವಾಗಿ ಶಂಕಿತ ಆರೋಪಿಯ ಗುರುತು ಪತ್ತೆ ಹಚ್ಚಲು ಪೊಲೀಸರು ಜನಸಾಮಾನ್ಯರ ನೆರವು ಬಯಸಿದ್ದಾರೆ.

ಪತ್ರಕರ್ತ ಶುಜಾತ್ ಬುಖಾರಿ ಯಾರು? ಅವರನ್ನು ಕೊಂದಿದ್ದೇಕೆ?ಪತ್ರಕರ್ತ ಶುಜಾತ್ ಬುಖಾರಿ ಯಾರು? ಅವರನ್ನು ಕೊಂದಿದ್ದೇಕೆ?

ಶಂಕಿತ ಆರೋಪಿಯ ಕುರಿತು ಯಾವುದೇ ಮಾಹಿತಿ ನೀಡುವ ವ್ಯಕ್ತಿಯ ಹೆಸರು ಮತ್ತು ವಿವರಗಳನ್ನು ರಹಸ್ಯವಾಗಿ ಇರಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರನ್ನು ಶ್ರೀನಗರದ ಪ್ರೆಸ್ ಕಾಲೋನಿಯಲ್ಲಿ ಗುರುವಾರ ಉಗ್ರರು ಗುಂಡಿಕ್ಕಿ ಕೊಂದಿದ್ದರು.

ಇದಕ್ಕೂ ಮುನ್ನ ಶುಕ್ರವಾರ ಪೊಲೀಸರು ಇತರೆ ಮೂವರು ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಮುಖವನ್ನು ಮುಚ್ಚಿಕೊಂಡಿರುವ ಚಿತ್ರ ಸೆರೆಯಾಗಿತ್ತು.

ಈ ಹಿಂದೆ ಬುಖಾರಿ ಅವರ ಮೇಲೆ ಮೂರು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿದ್ದವು. ಹೀಗಾಗಿ 2000ನೇ ಇಸವಿಯಿಂದ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಬಾರಾಮುಲ್ಲಾದಲ್ಲಿ ಬುಖಾರಿ ಅವರ ಅಂತ್ಯಸಂಸ್ಕಾರ ಶುಕ್ರವಾರ ನಡೆಯಿತು.

English summary
Police have arrested a suspect in the case regarding veteran journalist Shujaat Bukhari's murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X