ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE: ಮೋದಿ ಭಾಷಣ: ರಾಮಜನ್ಮಭೂಮಿ, ಸಿಎಎ ಸದ್ದು, ವಿಪಕ್ಷಕ್ಕೆ ಗುದ್ದು

|
Google Oneindia Kannada News

ನವದೆಹಲಿ, ಫೆಬ್ರವರಿ 06: ಲೋಕಸಭೆಯಲ್ಲಿ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಭಾಷಣ ಮಾಡಿದ್ದಾರೆ. ಮೋದಿ ಭಾಷಣದಲ್ಲಿ ಆರ್ಟಿಕಲ್ 370, ರಾಮಜನ್ಮಭೂಮಿ, ಕೃಷಿ ಯೋಜನೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಉಭಯ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಕೋವಿಂದ್ ಅವರು ಮಾಡಿದ ಭಾಷಣಕ್ಕೆ ಮೋದಿ ಧನ್ಯವಾದ ಸಲ್ಲಿಸಿದರು.

ಮೋದಿ ತಮ್ಮ ಭಾಷಣದಲ್ಲಿ ವಿಪಕ್ಷಕ್ಕೆ ಆರಂಭದಿಂದಲೇ ಗುದ್ದು ನೀಡಿದ್ದು, ನಿಮ್ಮಂತೆ ನಾವು ಕಾರ್ಯಭಾರ ಮಾಡಿದ್ದರೆ ಸ್ವಾತಂತ್ರ್ಯ ಬಂದ 70 ವರ್ಷ ನಂತರೂ ಸಂವಿಧಾನದ ಆರ್ಟಿಕಲ್ 370 ರದ್ದು ಮಾಡಲು ಸಾಧ್ಯವಾಗುತ್ತಿರಲಿಲ್ಲ. ರಾಮಜನ್ಮ ಭೂಮಿ ವಿವಾದ ಬಗೆಹರಿಯಲು ಸಾಧ್ಯವೇ ಇರಲಿಲ್ಲ. ನಮ್ಮ ಈ ಹಿಂದಿನ ಆಡಳಿತ ನೋಡಿದ ಜನತೆ ನಮಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ.

ಈಶಾನ್ಯ ರಾಜ್ಯಗಳ ಸಂಘಟನೆಗಳು ಇಂದು ಶಸ್ತ್ರಾಸ್ತ್ರ ಬದಿಗಿಟ್ಟು ಶರಣಾಗತರಾಗಿದ್ದಾರೆ. ಅಲ್ಲಿ ಶಾಂತಿ ನೆಲೆಸಿ, ಅಭಿವೃದ್ಧಿಯತ್ತ ರಾಜ್ಯಗಳು ಸಾಗಿವೆ ಎಂದರು.

Budget Session : PM Modi speech in Parliament

ವಿಪಕ್ಷ ನಾಯಕ ಅಧಿರ್ ರಂಜನ್ ಚೌಧರಿ ಜಿ ವೀರಾವೇಶದ ಭಾಷಣ ಮಾಡುವುದನ್ನು ನೋಡಿದರೆ ಜಿಮ್ ಗೆ ಹೋಗುತ್ತಾರೆ ಎಂದು ಕಾಣುತ್ತದೆ. ಫಿಟ್ ಇಂಡಿಯಾ ಅಭಿಯಾನವನ್ನು ಸಮರ್ಥವಾಗಿ ಜಾರಿಗೊಳಿಸಿದ ಕಿರಣ್ ರಿಜಿಜು ಜಿ ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದ ಮೋದಿ, ಅಭಿಯಾನಕ್ಕೆ ಪರೋಕ್ಷವಾಗಿ ವಿಪಕ್ಷ ನಾಯಕರು ಬೆಂಬಲಿಸುತ್ತಾರೆ ಎಂದಾಗ ಸದನ ನಗೆಗಡಲಲ್ಲಿ ಮುಳುಗಿತು.

* ರೈತರಿಗಾಗಿ 99 ಯೋಜನೆಗಳನ್ನು ರೂಪಿಸಿದ್ದೇವೆ. ಸುಮಾರು 1 ಲಕ್ಷ ಕೋಟಿ ರು ಮೀಸಲಿಡಲಾಗಿದೆ. ಉದ್ಯೋಗ, ಮೂಲ ಸೌಕರ್ಯ, ಹೂಡಿಕೆ ಸರ್ಕಾರದ ಅದ್ಯತೆಯಾಗಿದೆ ಎಂದರು.

* ದಿನ ನಿತ್ಯ ನಿಂದನೆಗಳನ್ನು ಸಹಿಸಿಕೊಂಡು ಬಂದಿದ್ದೇನೆ. ನನ್ನಲ್ಲಿ ಆ ಕ್ಷಮತೆ ಇದೆ. ಕಳೆದ 20 ವರ್ಷಗಳಿಂದ ನಿಂದಿಸುತ್ತಾ ಬಂದಿದ್ದಾರೆ. ಇದರಿಂದ ನನ್ನ ಪ್ರತಿರೋಧಕ ಶಕ್ತಿ ಅಧಿಕವಾಗಿದೆ ಎಂದು ಮೋದಿ ವಿಪಕ್ಷ ನಾಯಕರಿಗೆ ಚುಚ್ಚಿದರು.

* ಕಳೆದ 40 ನಿಮಿಷದಿಂದ ಮಾತನಾಡುತ್ತಿದ್ದೇನೆ. ಕಾಂಗ್ರೆಸ್ ನಾಯಕರಿಗೆ(ರಾಹುಲ್ ಗಾಂಧಿ) ತಡವಾಗಿ ''ಕರೆಂಟ್'' ತಗುಲಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

* ನೀರಾವರಿಯಿಂದ ಕೈಗಾರಿಕೆ ತನಕ ಮೂಲ ಸೌಕರ್ಯ ಅಭಿವೃದ್ಧಿ ಮಹತ್ವವಾಗಿದ್ದು, ಸಮಾಜದ ಆರ್ಥಿಕ ಸುಧಾರಣೆಗೆ ಮೂಲ ಸೌಕರ್ಯ ಅಗತ್ಯವಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.

* ಸಂವಿಧಾನ ಉಳಿಸಿ ಎಂದು ಮತ್ತೆ ಮತ್ತೆ ಕೂಗುತ್ತಿರುವವರು ತಮ್ಮ ಸರ್ಕಾರ ಇದ್ದ ಅವಧಿಯಲ್ಲಿ ನಡೆದುಕೊಂಡ ರೀತಿಯನ್ನು ಒಮ್ಮೆ ಅವಲೋಕಿಸುವುದು ಉತ್ತಮ. ರಿಮೋಟ್ ಕಂಟ್ರೋಲ್ ಸರ್ಕಾರ, ರಾಜ್ಯಗಳ ಸರ್ಕಾರ ಬೀಳಿಸುವವರಿಗೆ ಸಂವಿಧಾನದ ಬಗ್ಗೆ ಪಾಠ ಹೇಳಬೇಕಿದೆ.

* ಆರು ತಿಂಗಳಿನಲ್ಲಿ ಪ್ರಧಾನಿಗೆ ಜನತೆ ದೊಣ್ಣೆ ತೆಗೆದುಕೊಂಡು ಹೊಡೆಯುವಂಥ ಪರಿಸ್ಥಿತಿ ಎದುರಾಗಲಿದೆ ಎಂದಿದ್ದ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಉತ್ತರಿಸಿದ ಮೋದಿ, ಯುವಜನತೆ ಮೋದಿಯನ್ನು 6 ತಿಂಗಳಲ್ಲಿ ಹೊಡೆಯುತ್ತಾರೆ ಎಂದಿದ್ದಾರೆ. ನಾನು ನನ್ನ ಸೂರ್ಯ ನಮಸ್ಕಾರ ಅವಧಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತೇನೆ, ಇದರಿಂದ ನನ್ನ ಬೆನ್ನು ಇನ್ನಷ್ಟು ಗಟ್ಟಿಗೊಳ್ಳಲಿದ್ದು ಎಲ್ಲಾ ರೀತಿಯ ಪೆಟ್ಟುಗಳನ್ನು ತಿನ್ನಲು ಸಮರ್ಥವಾಗಿರುತ್ತೇನೆ ಎಂದರು.

* ಸಂವಿಧಾನದ ಬಗ್ಗೆ ನಿಮಗೆ(ಕಾಂಗ್ರೆಸ್) ಅಷ್ಟು ಕಾಳಜಿ ಇದಿದ್ದರೆ ಸಂವಿಧಾನ ನೀಡಿದ ಅಧಿಕಾರವನ್ನು ಚಲಾಯಿಸಲು ನಿಮ್ಮನ್ನು ಇಷ್ಟುವರ್ಷ ತಡೆದವರು ಯಾರು? ಕಶ್ಮೀರ ಭಾರತದ ಮುಕುಟ ಮಣಿಯಾಗಿದ್ದು, 1990ರ ಜನವರಿ 19ರ ಘಟನೆಯನ್ನು ಸ್ಮರಿಸಿದ ಮೋದಿ, ಕಾಶ್ಮೀರದ ಹೆಗ್ಗುರುತು ಎಂದರೆ ಯಾರು ಎಂಬುದನ್ನು ಸಂಸತ್ತಿನಲ್ಲಿ ಉಲ್ಲೇಖಿಸಿದರು.

* ಆರ್ಟಿಕಲ್ 370ರದ್ದುಗೊಳಿಸಿದರೆ ಬೆಂಕಿ ಬೀಳಲಿದೆ, ಭೂಕಂಪವಾಗಲಿದೆ, ಭಾರತದಿಂದ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕಗೊಳ್ಳಲಿದೆ ಎಂದು ಒಮರ್ ಅಬ್ದುಲ್ಲಾ ಹೇಳಿದರು. ಇಂಥ ಮಾತುಗಳಿಂದ ಭಾರತದ ಸಂವಿಧಾನ ಉಳಿಸಲು ಸಾಧ್ಯವೇ? ನಾವು ಕಾಶ್ಮೀರದ ಜನತೆ ಮೇಲೆ ಭರವಸೆ ಇಟ್ಟು ಸಂವಿಧಾನದ ಗೌರವ ಕಾಪಾಡಿದ್ದೇವೆ. ಈಗ ತ್ವರಿತಗತಿಯಿಂದ ಪ್ರಗತಿ ಸಾಧ್ಯವಾಗುತ್ತಿದೆ.

* ಸಿಕ್ಕಿಂ ಸಾವಯವ ರಾಜ್ಯವಾಗಿ ಮಿಕ್ಕ ರಾಜ್ಯಗಳಿಗೆ ಪ್ರೇರಣೆಯಾಗಿದೆ. ಕಾರ್ಬನ್ ನ್ಯೂಟ್ರಲ್ ಕಂಟ್ರಿ ಎನಿಸಿರುವ ಭೂತನ್ ಮಾದರಿಯಲ್ಲಿ ಲಡಾಖ್ ರೂಪಿಸಲಾಗುತ್ತಿದ್ದು, ದೇಶಕ್ಕೆ ಮಾದರಿಯಾಗಲಿದೆ.

* ಸಿಎಎ ತರುವ ಅಗತ್ಯವೇನಿತ್ತು? ಹಿಂದೂ ಮುಸ್ಲಿಂ ನಡುವೆ ಭೇದ ಭಾವ ಉಂಟು ಮಾಡುತ್ತಿದ್ದೀರಿ? ದೇಶ ವಿಭಜನೆಗೆ ನಾಂದಿ ಹಾಡುತ್ತಿದ್ದೀರಿ? ಎಂದು ನಮ್ಮ ಮೇಲೆ ಆರೋಪಿಸುತ್ತಾ ಬಂದಿದ್ದಾರೆ. ಭಾರತದ ಮುಸ್ಲಿಮರನ್ನು ಪ್ರಚೋದಿಸುವ ವಿಷಯದಲ್ಲಿ ಪಾಕಿಸ್ತಾನ ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿ ವಿಫಲವಾಗಿದೆ. ಈಗ ನಮ್ಮ ದೇಶ ವಿಪಕ್ಷವೂ ಪಾಕಿಸ್ತಾನ ಭಾಷೆಯಲ್ಲಿ ಮಾತನಾಡುತ್ತಿದೆ.

* ಖಾನ್ ಅಬ್ದುಲ್ ಗಫೂರ್ ಖಾನ್(ಗಡಿನಾಡಿನ ಗಾಂಧಿ) ಚರಣ ಸ್ಪರ್ಶಿಸಿದ ಪುಣ್ಯ ನನ್ನಲಿದೆ, ಎಪಿಜೆ ಅಬ್ದುಲ್ ಕಲಾಂ ಇರಬಹುದು, ಪಟ್ಟಿ ದೊಡ್ಡದಿದೆ. ಎಲ್ಲರೂ ನಮ್ಮ ದೃಷ್ಟಿಯಲ್ಲಿ ಭಾರತೀಯರು.
* ಪ್ರಧಾನಿ ಹುದ್ದೆಗಾಗಿ ದೇಶದ ನಡುವೆ ಗಡಿ ಏರ್ಪಟ್ಟು, ಹಿಂದೂ ಮುಸ್ಲಿಮರು ಕಷ್ಟ ಅನುಭವಿಸಬೇಕಾಯಿತು. ಭೂಪೇಂದ್ರ ಕುಮಾರ್ ದತ್ ಅವರ ಹೆಸರನ್ನು ಕಾಂಗ್ರೆಸ್ಸಿಗರು ಕೇಳಿದ್ದೀರಾ? ಎಐಸಿಸಿ ಸದಸ್ಯರಾಗಿದ್ದ ಇವರು ಅನೇಕ ವರ್ಷ ಜೈಲುವಾಸ ಅನುಭವಿಸಿದರು. ಪಾಕಿಸ್ತಾನದ ಸಂವಿಧಾನ ರಚನೆ ಬಗ್ಗೆ ಅಂದು ಅವರು ನೀಡಿದ ಹೇಳಿಕೆ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿಕೆಯನ್ನು ಮೋದಿ ಉಲ್ಲೇಖಿಸಿದರು.

* ಪಾಕಿಸ್ತಾನದ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ತೋರಿದ್ದರು. ಪಾಕಿಸ್ತಾನಕ್ಕೆ ಸರಿ ಮಾರ್ಗ ತೋರಲು ಮುಂದಾದ ಬಿಕ್ ದತ್ ಮುಂದೆ ಅನಿವಾರ್ಯವಾಗಿ ತಮ್ಮ ಕೊನೆ ದಿನಗಳನ್ನು ಭಾರತದಲ್ಲಿ ಕಳೆಯಬೇಕಾಯಿತು.

* ಜೋಗಿಂದ್ರನಾಥ್ ಮಂಡಲ್ ಬಗ್ಗೆ ಉಲ್ಲೇಖಿಸಿದ ಮೋದಿ, ಬಿಕೆ ದತ್ ರಂತೆ ಪಾಕಿಸ್ತಾನದಿಂದ ಭಾರತಕ್ಕೆ ಹಿಂತಿರುಗಬೇಕಾಯಿತು. ಅಲ್ಪಸಂಖ್ಯಾತರ ಬಗ್ಗೆ ಪಾಕಿಸ್ತಾನ ಹೊಂದಿರುವ ನಿಲುವು ಖಂಡನೀಯ ಎಂದರು.

* 1950ರಲ್ಲಿ ಅಲ್ಪಸಂಖ್ಯಾತರ ರಕ್ಷಣೆಗಾಗಿ ಒಪ್ಪಂದ ಮಾಡಿಕೊಳ್ಳಲಾಯಿತು. ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ನೆಹರೂ ಅವರು ಲಿಯಾಖತ್ ಅಲಿ ಖಾನ್ ಅವರು ಮಾಡಿಕೊಂಡ ಒಪ್ಪಂದದಲ್ಲಿ ಇದ್ದ ಹುಳುಕು ಏನು ಎಂಬುದನ್ನು ಕಾಂಗ್ರೆಸ್ ಹೇಳುವುದಿಲ್ಲ.

* ಅಸ್ಸಾಂನ ಮುಖ್ಯಮಂತ್ರಿ ಗೋಪಿನಾಥ್ ಅವರಿಗೆ ನೆಹರೂ ಬರೆದ ಪತ್ರದಲ್ಲಿ ಹಿಂದೂ ಶರಣಾರ್ಥಿ ಹಾಗೂ ಮುಸ್ಲಿಂ ವಲಸಿಗರ ನಡುವೆ ವಿಂಗಡಣೆ ಅಗತ್ಯವಿದೆ ಎಂದಿದ್ದಾರೆ. ಇದಾದ ಬಳಿಕವೇ ಲಿಯಾಖತ್ ಖಾನ್ ಜೊತೆ ಒಪ್ಪಂದದಲ್ಲಿ ನೆಹರೂ ಅವರು ಅಲ್ಪಸಂಖ್ಯಾತರು ಎಂದು ಪದ ಪ್ರಯೋಗಿಸಿದ್ದಾರೆ.

ಈ ಬಗ್ಗೆ ಸದನದಲ್ಲಿ 1963ರಲ್ಲಿ ಮಾತನಾಡಿದ ನೆಹರೂ, ವಲಸೆ ಬಂದವರನ್ನು ಸಂರಕ್ಷಿಸುವ ಸಲುವಾಗಿ ಕಾನೂನಿನ ತಿದ್ದುಪಡಿ ತರಬೇಕಾದರೆ ಅಗತ್ಯವಾಗಿ ತರಲಾಗುವುದು ಎಂದು ಹೇಳಿದ್ದರು. ಸ್ಥಾನಿಕ ಸಮಿತಿ ವರದಿ, ಗಾಂಧಿ ನಿಲುವು, ನೆಹರೂ ಪತ್ರ ಹೀಗೆ ಎಲ್ಲವೂ ಕಾಂಗ್ರೆಸ್ ಮುಂದಿದೆ. ನೆಹರೂ ಅವರು ಪಾಕಿಸ್ತಾನದ ಅಲ್ಪಸಂಖ್ಯಾತರ ರಕ್ಷಣೆಗೆ ನಿಂತಿದ್ದರು ಎಂಬುದು ಸ್ಪಷ್ಟ. ನಾವು ಇದೇ ಮಾರ್ಗದಲ್ಲಿ ಇದ್ದೇವೆ. ನಾನು ದೇಶವನ್ನು ವಿಭಜನೆ ಮಾಡುವವರಲ್ಲ. ಇಂದಿನ ಕಾಂಗ್ರೆಸ್ಸಿಗರಿಗೆ ಈ ಬಗ್ಗೆ ತಮ್ಮ ಅರಿವು ಮೂಡಿದರೆ ಒಳ್ಳೆಯದು ಎಂದರು.

* ಸಿಖ್ ದಂಗೆ ಆರೋಪಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದೀರಿ ಎಂದು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದರು.
* 5 ಟ್ರಿಲಿಯನ್ ಆರ್ಥಿಕತೆ ಗುರಿ ಸಾಧಿಸುವತ್ತ ಮುನ್ನಡೆಯೋಣ, ಎಲ್ಲಾ ಪಂಚಾಯಿತಿಯನ್ನು ಬ್ರ್ಯಾಡ್ ಬಾಂಡ್ ರೂಪಿಸುವತ್ತ ಮುನ್ನಡೆಯೋಣ..ಎಂದು ಹೇಳುತ್ತಾ ಭಾಷಣ ಮುಗಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.

English summary
"If we worked in the same way as you (Opposition) did, the even after 70 years of Independence, Article 370 wouldn't have gone," PM Modi said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X