ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನ ಬಜೆಟ್ ಅಧಿವೇಶನ ಆರಂಭ: ಏನೇನು ಚರ್ಚೆ ನಿರೀಕ್ಷೆಯಿದೆ?

|
Google Oneindia Kannada News

ನವದೆಹಲಿ, ಜನವರಿ 31: ಸಂಸತ್ತಿನ ಬಜೆಟ್ ಅಧಿವೇಶನ ಇಂದು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣದೊಂದಿಗೆ ಆರಂಭವಾಗಲಿದ್ದು, ಏಪ್ರಿಲ್ 8ರಂದು ಮುಕ್ತಾಯಗೊಳ್ಳಲಿದೆ. ಇಂದು ಆರ್ಥಿಕ ಸಮೀಕ್ಷೆ ಮಂಡನೆ, ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಅಧಿವೇಶನದ ಮೊದಲ ಭಾಗವು ಫೆಬ್ರವರಿ 11 ರಂದು ಮುಕ್ತಾಯಗೊಳ್ಳಲಿದೆ. ಒಂದು ತಿಂಗಳ ಅವಧಿಯ ವಿರಾಮದ ನಂತರ ಅಧಿವೇಶನದ ಭಾಗ ಎರಡು ಮಾರ್ಚ್ 14 ರಿಂದ ಪ್ರಾರಂಭವಾಗಿ ಏಪ್ರಿಲ್ 8 ರಂದು ಮುಕ್ತಾಯಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ವಿರಾಮವು ಇಲಾಖೆ-ಸಂಬಂಧಿತ ಸಂಸದೀಯ ಸಮಿತಿಗಳು ತಮ್ಮ ಸಚಿವಾಲಯಗಳಿಗೆ ಮಾಡಿದ ಬಜೆಟ್ ಹಂಚಿಕೆಗಳನ್ನು ಪರಿಶೀಲಿಸಲು ಅನುಮತಿಸುತ್ತದೆ.

ಅಧಿವೇಶನದ ಮೊದಲ ಭಾಗದ ಸಮಯದಲ್ಲಿ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರಕ್ಕೆ ಪೂರ್ಣ ನಿಷೇಧ ಹೇರಲಾಗಿದೆ. ಉತ್ತರಪ್ರದೇಶದಲ್ಲಿ ಫೆಬ್ರವರಿ 10 ರಂದು ಮತದಾನ ನಡೆಯಲಿದೆ. ಮಾರ್ಚ್ 14 ರಂದು ವಿರಾಮದ ನಂತರ ಉಭಯ ಸದನಗಳು ಸಭೆ ಸೇರಿದಾಗ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬೀಳಲಿವೆ. ಎಲ್ಲಾ ಐದು ರಾಜ್ಯಗಳಿಗೆ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

 ಆರ್ಥಿಕ ಸಮೀಕ್ಷೆ 2022: ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ ಆರ್ಥಿಕ ಸಮೀಕ್ಷೆ 2022: ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ

ಬಜೆಟ್ ಅಧಿವೇಶನಲ್ಲಿ ಪೆಗಾಸಸ್ ವಿರುದ್ಧ ಧ್ವನಿ

ಬಜೆಟ್ ಅಧಿವೇಶನಲ್ಲಿ ಪೆಗಾಸಸ್ ವಿರುದ್ಧ ಧ್ವನಿ

ಇನ್ನೂ ಬಜೆಟ್ ಅಧಿವೇಶನದಲ್ಲಿ ಪೆಗಾಸಸ್ ಸಮಸ್ಯೆಯನ್ನು ಎತ್ತುವ ಸಾಧ್ಯತೆಯಿದೆ. ಇಂದಿನಿಂದ (ಜನವರಿ 31) ಪ್ರಾರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದ ಮೇಲೆ ಪೆಗಾಸಸ್ ನೆರಳು ಬೀಳುವ ಸಾಧ್ಯತೆಯಿದೆ. ವಿರೋಧ ಪಕ್ಷಗಳು ಉಭಯ ಸದನಗಳಲ್ಲಿ ಈ ಬಗ್ಗೆ ಧ್ವನಿ ಎತ್ತಲು ಸಜ್ಜಾಗಿವೆ. ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಪೆಗಾಸಸ್ ವಿಚಾರದಲ್ಲಿ ಸಂಸತ್ತಿನ ಕೆಳಮನೆಯನ್ನು ದಾರಿ ತಪ್ಪಿಸಿದ ಆರೋಪದ ಮೇಲೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ವಿಶೇಷ ಹಕ್ಕು ಮಂಡಿಸಬೇಕು ಎಂದು ಒತ್ತಾಯಿಸಿದರು.

ರೈತರ ಸಂಕಷ್ಟಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ

ರೈತರ ಸಂಕಷ್ಟಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ

ಬಜೆಟ್ ಅಧಿವೇಶನದಲ್ಲಿ ರೈತರ ಸಂಕಷ್ಟ, ಚೀನಾ-ಭಾರತ ಗಡಿ ಸಾಲು, ಕೋವಿಡ್-19 ಪರಿಹಾರ, ಏರ್ ಇಂಡಿಯಾ ಮಾರಾಟ ಇತ್ಯಾದಿ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸಿದ್ಧವಾಗಿದೆ. ಐದು ರಾಜ್ಯಗಳಲ್ಲಿ ಚುನಾವಣೆಗಳು ಇರುವುದರಿಂದ, ಚುನಾವಣಾ ಪೈಪೋಟಿ ಜೋರಾಗಿದ್ದು ಹೆಚ್ಚಿನ ಜನರ ಮನಸ್ಸಿನಲ್ಲಿ ಚುನಾವಣೆ ಅಗ್ರಸ್ಥಾನದಲ್ಲಿದೆ. ಇದು ಸಂಸತ್ತಿನ ಕಲಾಪಗಳ ಮೇಲೂ ಪರಿಣಾಮ ಬೀರಬಹುದು.

ಅಧಿವೇಶನದ ವ್ಯವಸ್ಥೆಗಳ ಪರಿಶೀಲನೆ

ಅಧಿವೇಶನದ ವ್ಯವಸ್ಥೆಗಳ ಪರಿಶೀಲನೆ

ಭಾನುವಾರ ಸಂಜೆ ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಬಜೆಟ್ ಅಧಿವೇಶನದ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಉಪಾಧ್ಯಕ್ಷರ ನಿವಾಸದಲ್ಲಿ ಭೇಟಿಯಾದ ಇಬ್ಬರೂ ಸುಮಾರು 40 ನಿಮಿಷಗಳ ಕಾಲ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ರಾಜ್ಯಸಭೆಗೆ ಒಟ್ಟು 135 ಗಂಟೆಗಳ ಕಾಲಾವಧಿ

ರಾಜ್ಯಸಭೆಗೆ ಒಟ್ಟು 135 ಗಂಟೆಗಳ ಕಾಲಾವಧಿ

ಬಜೆಟ್ ಅಧಿವೇಶನ ಫೆಬ್ರವರಿ 2 ರಿಂದ ಏಪ್ರಿಲ್ 8 ರವರೆಗೆ ನಿಗದಿಪಡಿಸಲಾದ 27 ಅಧಿವೇಶನಗಳಲ್ಲಿ ದಿನಕ್ಕೆ ಐದು ಗಂಟೆಗಳಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲು ರಾಜ್ಯಸಭೆಗೆ ಒಟ್ಟು 135 ಗಂಟೆಗಳ ಕಾಲಾವಧಿ ಲಭ್ಯವಿದೆ. 2020ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ ಬಜೆಟ್ ಅಧಿವೇಶನವು ಆರನೆಯದು. 2020 ರ ಬಜೆಟ್ ಅಧಿವೇಶನವನ್ನು ಎಂಟು ಅಧಿವೇಶನಗಳಿಂದ ಮೊಟಕುಗೊಳಿಸಿದರೆ, 2021 ರ ಬಜೆಟ್ ಅಧಿವೇಶನವನ್ನು ಹತ್ತು ಅಧಿವೇಶನಗಳಿಂದ ಮೊಟಕುಗೊಳಿಸಲಾಯಿತು.

Recommended Video

IPLನಲ್ಲಿ ಈ ಬಾರಿ ಮಾರಾಟವಾಗದೆ ಉಳಿಯಬಹುದಾದ ಆಟಗಾರರು | Oneindia Kannada

English summary
The Budget Session of Parliament is set to begin today with the address of the president to both the Houses, and conclude on April 8, followed by the Economic Survey. The Union Budget will be presented on February 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X