ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್; ರೈಲ್ವೆ ಇಲಾಖೆಯಡಿಯ 6 ಸಂಸ್ಥೆಗಳ ವಿಲೀನ

|
Google Oneindia Kannada News

ನವದೆಹಲಿ, ಜನವರಿ 16; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2022-23ರ ಬಜೆಟ್ ಮಂಡನೆ ಮಾಡಲಿದ್ದಾರೆ. ರೈಲ್ವೆ ಬಜೆಟ್ ಸಹ ಈಗ ಸಾಮಾನ್ಯ ಬಜೆಟ್‌ನಲ್ಲಿ ಸೇರಿಕೊಂಡಿದೆ. ಈ ಬಾರಿಯ ಬಜೆಟ್‌ನಲ್ಲಿ 6 ಸಂಸ್ಥೆಗಳ ವಿಲೀನದ ಕುರಿತು ಘೋಷಣೆ ನಿರೀಕ್ಷೆ ಮಾಡಲಾಗಿದೆ.

ಈಗಾಗಲೇ ಬ್ಯಾಂಕ್‌ಗಳನ್ನು ವಿಲೀನ ಮಾಡಿರುವ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯಡಿ ಇರುವ 6 ಸಂಸ್ಥೆಗಳನ್ನು ವಿಲೀನಗೊಳಿಸುವ ಕುರಿತು ಅಧಿಕೃತ ಘೋಷಣೆ ಮಾಡಲಿದೆ. ಸಂಸ್ಥೆಗಳ ಪುನಾರಚನೆ ಮತ್ತು ವೆಚ್ಚ ಕಡಿತದ ಭಾಗವಾಗಿ ಈ ವಿಲೀನ ನಡೆಯಲಿದೆ.

ಬಜೆಟ್; ಅಪಾರ ನಿರೀಕ್ಷೆಯಲ್ಲಿ ಆಟೋಮೊಬೈಲ್ ಕ್ಷೇತ್ರ ಬಜೆಟ್; ಅಪಾರ ನಿರೀಕ್ಷೆಯಲ್ಲಿ ಆಟೋಮೊಬೈಲ್ ಕ್ಷೇತ್ರ

2021ರ ಆಗಸ್ಟ್‌ನಲ್ಲಿಯೇ ಹಣಕಾಸು ಸಚಿವಾಲಯಕ್ಕೆ ರೈಲ್ವೆ ಇಲಾಖೆ ಅಧೀನದ 6 ಸಂಸ್ಥೆಗಳನ್ನು ವಿಲೀನಗೊಳಿಸಬಹುದು ಎಂದು ಶಿಫಾರಸು ಮಾಡಲಾಗಿತ್ತು. ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ.

ಕೇಂದ್ರ ಬಜೆಟ್ 2022: ಉದ್ಯೋಗಿ ವಲಯದ 5 ನಿರೀಕ್ಷೆಗಳು ಕೇಂದ್ರ ಬಜೆಟ್ 2022: ಉದ್ಯೋಗಿ ವಲಯದ 5 ನಿರೀಕ್ಷೆಗಳು

Budget Merger Of Six Public Sector Undertakings Under Railway Ministry

ರೈಲ್ವೆ ವಿಕಾಸ್ ನಿಗಮ ನಿಯಮಿತ (ಆರ್‌ವಿಎನ್‌ಎಲ್‌) ಭಾರತೀಯ ರೈಲ್ವೇ ನಿರ್ಮಾಣ ಲಿಮಿಟೆಡ್‌ (ಐಆರ್‌ಸಿಒಎನ್‌) ಜೊತೆ ವಿಲೀನವಾಗಲಿದೆ. ರೈಲ್ ಟೆಲ್ ಕಾರ್ಪೊರೇಷನ್‌ ಐಆರ್‌ಸಿಟಿಸಿ ಜೊತೆ ವಿಲೀನವಾಗಲಿದೆ.

ಬಜೆಟ್ 2022; ಉದ್ಯೋಗ ಸೃಷ್ಟಿ ಜೊತೆಗೆ ಕೌಶಲ್ಯ ತರಬೇತಿಗೆ ಆದ್ಯತೆ ಬಜೆಟ್ 2022; ಉದ್ಯೋಗ ಸೃಷ್ಟಿ ಜೊತೆಗೆ ಕೌಶಲ್ಯ ತರಬೇತಿಗೆ ಆದ್ಯತೆ

ಇದರ ಜೊತೆಗ ಬ್ರಾತ್‌ ವೈಟ್‌ ಆಯಂಡ್‌ ಕಂಪೆನಿ ಲಿ. ಸಂಸ್ಥೆಯನ್ನು ರೈಲ್‌ ಇಂಡಿಯಾ ಆಯಂಡ್‌ ಎಕನಾಮಿಕ್‌ ಸರ್ವೀಸ್‌ (ರೈಟ್ಸ್‌) ಸಂಸ್ಥೆಯೊಡನೆ ವಿಲೀನ ಮಾಡಲಾಗುತ್ತದೆ. ಹಣಕಾಸು ಇಲಾಖೆಯ ಮುಖ್ಯ ಆರ್ಥಿಕ ಸಲಹೆಗಾರ ಸಂಜೀವ್‌ ಸನ್ಯಾಲ್‌ ಈ ವಿಲೀನದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ವಿಲೀನದಿಂದ ಉಪಯೋಗ; ಸರ್ಕಾರಕ್ಕೆ ಹೆಚ್ಚುತ್ತಿರುವ ವೆಚ್ಚಗಳನ್ನು ಕಡಿಮೆ ಮಾಡಲು ಈ ವಿಲೀನ ಪ್ರಕ್ರಿಯೆ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಕೆಲವು ಸಂಸ್ಥೆಗಳ ವಿಲೀನ ಈ ವರ್ಷವೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಉಳಿದ ಸಂಸ್ಥೆಗಳು ಮುಂದಿನ ವರ್ಷದ ಆರಂಭದಲ್ಲಿ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಲಿವೆ.

ರೈಲ್ವೇ ಮೂಲಸೌಕರ್ಯಗಳ ವರ್ಧನೆಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಆರ್‌ವಿಎನ್‌ಎಲ್ ಮಾಡುತ್ತದೆ. ಐಆರ್‌ಸಿಓಎನ್ ಸಹ ವಿಶೇಷವಾದ ಮೂಲಸೌಕರ್ಯ ನಿರ್ಮಾಣ ಸಂಸ್ಥೆಯಾಗಿದೆ. ಆದ್ದರಿಂದ ಎರಡೂ ಸಂಸ್ಥೆಗಳನ್ನು ವಿಲೀನಗೊಳಿಸಲಾಗುತ್ತದೆ.

ಇವುಗಳ ಮಾತ್ರವಲ್ಲದೇ ಈ ಬಾರಿಯ ಬಜೆಟ್‌ನಲ್ಲಿ ರೈಲ್ವೇ ಇಲಾಖೆಯ ಸಿಬ್ಬಂದಿಯ ಮಕ್ಕಳಿಗಾಗಿ ರೈಲ್ವೇ ಇಲಾಖೆ ನಡೆಸುತ್ತಿರುವ ದೇಶದ ಒಟ್ಟು 94 ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯಗಳ ವ್ಯಾಪ್ತಿಗೆ ತರುವುದು, 125 ರೈಲ್ವೇ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಅವುಗಳ ಸೇವೆಯನ್ನು ಜನಸಾಮಾನ್ಯರಿಗೂ ಸಿಗುವಂತೆ ಮಾಡುವುದು, ಖಾಸಗಿ ಸಹಭಾಗಿತ್ವದೊಂದಿಗೆ ಆಸ್ಪತ್ರೆ ನಿರ್ಮಾಣ ಸೇರಿದಂತೆ ಹಲವು ಘೋಷಣೆಗಳು ಆಗುವ ನಿರೀಕ್ಷೆ ಇದೆ.

2016ರಲ್ಲಿ ಸಾಮಾನ್ಯ ಬಜೆಟ್ ಮತ್ತು ರೈಲ್ವೆ ಬಜೆಟ್ ವಿಲೀನಗೊಳಿಸುವ ತೀರ್ಮಾನಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಫೆಬ್ರವರಿ ಅಂತ್ಯದ ಮೊದಲು ಫೆಬ್ರವರಿ ಮೊದಲ ವಾರದಲ್ಲಿಯೇ ಸಾಮಾನ್ಯ ಬಜೆಟ್ ಮಂಡನೆ ಮಾಡಲು ಸಹ ಅನುಮೋದನೆ ನೀಡಿತ್ತು.

ಫೆಬ್ರವರಿ ಅಂತ್ಯದಲ್ಲಿ ಸಾಮಾನ್ಯ ಬಜೆಟ್ ಮಂಡನೆ ಮಾಡುವ ಬಳಿಕ ರೈಲ್ವೆಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಪದ್ಧತಿಯನ್ನು ಬ್ರಿಟಿಷರು 1924ರಲ್ಲಿ ಜಾರಿಗೆ ತಂದಿದ್ದರು. ಸಾಮಾನ್ಯ ಬಜೆಟ್ ಗಾತ್ರಕ್ಕೆ ಹೋಲಿಕೆ ಮಾಡಿದರೆ ರೈಲ್ವೆ ಬಜೆಟ್ ಗಾತ್ರ ಚಿಕ್ಕದಾಗಿದೆ. ರೈಲ್ವೆ ಬಜೆಟ್ ಪ್ರತ್ಯೇಕವಾಗಿ ಮಂಡನೆ ಮಾಡುವುದು ಒಂದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ ಎಂದು ನೀತಿ ಆಯೋಗ ಹೇಳಿತ್ತು.

ಸಾಮಾನ್ಯ ಬಜೆಟ್‌ನ ಒಟ್ಟಾರೆ ಹಣಕಾಸಿನ ವ್ಯವಹಾರದಲ್ಲಿ ರೈಲ್ವೆ ಬಜೆಟ್ ಸಹ ಒಂದಾಗಿರಬೇಕು ಎಂದು ನೀತಿ ಆಯೋಗದ ಸದಸ್ಯ ವಿವೇಕ್ ದೇಬ್‌ರಾಯ್ ನೇತೃತ್ವದ ಸಮಿತಿ ಹೇಳಿತ್ತು. ವಿಲೀನಗೊಂಡ ಬಳಿಕ ರೈಲ್ವೆಯ ಎಲ್ಲಾ ಘೋಷಣೆಗಳನ್ನು ಸಾಮಾನ್ಯ ಬಜೆಟ್‌ನಲ್ಲಿಯೇ ಮಾಡಲಾಗುತ್ತಿದೆ.

English summary
In a union budget 2022-23 government may announce merger of six public sector undertakings (PSUs) under the ministry of railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X