ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್; ಬೆಂಗಳೂರು-ಕಣ್ಣೂರು ರೈಲು ಕೋಜಿಕ್ಕೋಡ್ ತನಕ ವಿಸ್ತರಣೆ

|
Google Oneindia Kannada News

ಬೆಂಗಳೂರು, ಜನವರಿ 20; ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲನ್ನು ಕೋಜಿಕ್ಕೋಡ್ ತನಕ ವಿಸ್ತರಣೆ ಮಾಡಬೇಕು ಎಂಬ ಬಹುದಿನಗಳ ಬೇಡಿಕೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಕೆಲವೇ ದಿನಗಳಲ್ಲಿ ರೈಲು ಸೇವೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗುತ್ತದೆ.

ಪಾಲಕ್ಕಡ್ ವಿಭಾಗದ ಸಂಸದರ ಜೊತೆ ಸಭೆ ನಡೆಸಿದ ದಕ್ಷಿಣ ರೈಲ್ವೆ ವಲಯದ ಅಧಿಕಾರಿಗಳು ಹಲವಾರು ವರ್ಷಗಳ ಬೇಡಿಕೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಫೆಬ್ರವರಿ 1ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಈ ಕುರಿತು ಘೋಷಣೆಯಾಗಲಿದೆ.

ಮಂಗಳೂರಿಗೆ ಮೊದಲ ಮೆಮು ರೈಲು; ವೇಳಾಪಟ್ಟಿ ಮಂಗಳೂರಿಗೆ ಮೊದಲ ಮೆಮು ರೈಲು; ವೇಳಾಪಟ್ಟಿ

ನೈಋತ್ಯ ರೈಲ್ವೆ ಈಗಾಗಲೇ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲನ್ನು ಕೋಜಿಕ್ಕೋಡ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ಕೋಜಿಕ್ಕೋಡ್ ಸಂಸದ ಎಂ. ಕೆ. ರಾಘವನ್ ಬಜೆಟ್‌ನಲ್ಲಿ ಈ ಪ್ರಸ್ತಾವನೆ ಸೇರಿಸಲು ಹಿಂದೆಯೇ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು.

ಯಶವಂತಪುರ-ತುಮಕೂರು ನಡುವೆ ಮೆಮು ರೈಲು ಇಲ್ಲ ಯಶವಂತಪುರ-ತುಮಕೂರು ನಡುವೆ ಮೆಮು ರೈಲು ಇಲ್ಲ

Budget Bengaluru Kannur Express Train To Extend Till Kozhikode

ರೈಲು ಕೋಜಿಕ್ಕೋಡ್ ನಿಲ್ದಾಣಕ್ಕೆ ತಲುಪಲು ಸಾಕಷ್ಟು ಸಮಯ ಲಭ್ಯವಿದೆ. ರೈಲು ಸೇವೆ ವಿಸ್ತರಣೆ ಮಾಡಬಹುದು ಎಂದು ನೈಋತ್ಯ ರೈಲ್ವೆ ಹೇಳಿತ್ತು. ಆದರೆ ಇಲಾಖೆಯೇ ರೈಲು ನಿಲ್ದಾಣದಲ್ಲಿ ಪ್ಲಾಟ್‌ ಫಾರಂ ವ್ಯವಸ್ಥೆ ಸರಿ ಇಲ್ಲ ಎಂದು ಪ್ರಸ್ತಾವನೆ ವಿಳಂಬ ಮಾಡಿದೆ ಎಂಬ ಆರೋಪವಿದೆ.

ಬಜೆಟ್; ದೆಹಲಿ-ವಾರಣಾಸಿ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ? ಬಜೆಟ್; ದೆಹಲಿ-ವಾರಣಾಸಿ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ?

ವೇಳಾಪಟ್ಟಿ; ರೈಲು ನಂಬರ್ 16512 ಕಣ್ಣೂರಿನಿಂದ ಸಂಜೆ 4.50ಕ್ಕೆ ಹೊರಡಲಿದೆ. ಮಂಗಳೂರಿಗೆ 7.50ಕ್ಕೆ ತಲುಪಲಿದೆ. ಬೆಂಗಳೂರು ನಗರಕ್ಕೆ ಮರುದಿನ ಬೆಳಗ್ಗೆ 6.50ಕ್ಕೆ ತಲುಲಲಿದೆ. ಬೆಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 10.55ಕ್ಕೆ ಕಣ್ಣೂರು ತಲುಪಲಿದೆ.

ಮಂಗಳೂರು-ಕೋಜಿಕ್ಕೋಡ್ ಮೆಮು ರೈಲು ಪಾಲಕ್ಕಾಡ್ ತನಕ ವಿಸ್ತರಣೆ ಮಾಡಬೇಕು ಎನ್ನುವ ಬೇಡಿಕೆಯೂ ಇದೆ. ಇದರಿಂದಾಗಿ ಮಲಬಾರ್ ಭಾಗದಲ್ಲಿನ ಪ್ರಯಾಣಿಕರಿಗೆ ಸಹ ಅನುಕೂಲವಾಗಲಿದೆ ಎಂದು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.

ಭಾರತೀಯ ರೈಲ್ವೆ ತಿರುವನಂತಪುರಂ-ಮಧುರೈ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಪಾಲಕ್ಕಾಡ್ ಮೂಲಕ ರಾಮೇಶ್ವರಂ ತನಕ ವಿಸ್ತರಣೆ ಮಾಡುವ ಪಸ್ತಾವನೆಯನ್ನು ಹೊಂದಿದೆ. ಈ ಎಲ್ಲಾ ಪ್ರಸ್ತಾವನೆಗಳು ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.

ಮೆಮು ರೈಲು ಸಂಚಾರ; ಜನವರಿ 26ರಿಂದ ಅನ್ವಯವಾಗುವಂತೆ ಮಂಗಳೂರು ಸೆಂಟ್ರಲ್-ಕಣ್ಣೂರು-ಮಂಗಳೂರು ಸೆಂಟ್ರಲ್ ರೈಲು ಮೆಮು ರೈಲಾಗಿ ಸಂಚಾರ ನಡೆಸಲಿದೆ. ಈ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ರೈಲು ನಂಬರ್ 06478/ 06477 ಮಂಗಳೂರು ಸೆಂಟ್ರಲ್- ಕಣ್ಣೂರು- ಮಂಗಳೂರು ಸೆಂಟ್ರಲ್ ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಮೆಮು (Mainline Electric Multiple Unit) ರೈಲಾಗಿ ಪರಿವರ್ತನೆ ಮಾಡಲಿದೆ. ಮಂಗಳೂರು ನಗರಕ್ಕೆ ಮೊದಲ ಮೆಮು ರೈಲು ಸಂಚಾರ ಆರಂಭವಾಗಲಿದೆ.

ಸಾಮಾನ್ಯ ರೈಲುಗಳಿಗಿಂತ ಮೆಮು ರೈಲುಗಳಲ್ಲಿ ಹೆಚ್ಚು ಜನರು ಸಂಚಾರ ನಡೆಸಬಹುದಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲು ಸಂಚಾರದ ಅವಧಿ ಕೂಡ ಕಡಿತವಾಗಲಿದೆ. ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ತಯಾರು ಮಾಡಲಾದ ವಿಶೇಷ ಬೋಗಿಗಳನ್ನು ಮೆಮು ರೈಲು ಒಳಗೊಂಡಿದೆ.

ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್‌ನಲ್ಲಿ ವಿಲೀನವಾಗಿದೆ. ಆದ್ದರಿಂದ ರೈಲ್ವೆ ಯೋಜನೆಗಳು, ಹೊಸ ರೈಲುಗಳ ಘೋಷಣೆ ಸಾಮಾನ್ಯ ಬಜೆಟ್‌ನಲ್ಲಿಯೇ ನಡೆಯಲಿದೆ.

ವೇಳಾಪಟ್ಟಿ ಬದಲು; ನೈಋತ್ಯ ರೈಲ್ವೆ ಜನವರಿ 23ರಿಂದ ಜಾರಿಗೆ ಬರುವಂತೆ ಹಾನಸ-ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸಮಯ ಪರಿಷ್ಕರಣೆ ಮಾಡಿದೆ.

ಹಾಸನದಿಂದ ಹೊರಡುವ ರೈಲು ಸಂಖ್ಯೆ 22680 ಬೆಳಗ್ಗೆ 6.10ರ ಬದಲು 7 ಗಂಟೆಗೆ ಹೊರಡಲಿದೆ. ಯಶವಂತಪುರಕ್ಕೆ 9.20ಕ್ಕೆ ತಲುಪುತ್ತಿದ್ದ ರೈಲು 10.10ಕ್ಕೆ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹಾಸನದಿಂದ ಹೊರಡುವ ರೈಲು ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಹಿರಿಸಾವೆ, ಬಿ.ಜಿ. ನಗರ, ಯಡಿಯೂರು, ಕುಣಿಗಲ್, ನೆಲಮಂಗಲ, ಚಿಕ್ಕಬಣಾವರ ಮೂಲಕ ಯಶವಂತಪುರಕ್ಕೆ ಆಗಮಿಸಲಿದೆ.

English summary
Bengaluru-Kannur express train to extend till Kozhikode. Proposal was under the active consideration of the railway before the presentation of the union dudget on February 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X