ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2023: ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಸಾಮಾನ್ಯ ಜನರು ಏನನ್ನು ನಿರೀಕ್ಷಿಸುತ್ತಾರೆ?

ಬಜೆಟ್ 2023: ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಸಾಮಾನ್ಯ ಜನರು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರೈಲು ಪ್ರಯಾಣಿಕರು, ವಿದ್ಯಾರ್ಥಿಗಳು, ಗೃಹಿಣಿಯರು ಈ ಬಾರಿ ಬಜೆಟ್‌ನಿಂದ ಏನನ್ನು ನಿರೀಕ್ಷಿಸುತ್ತಾರೆ ಎಂದು ತಿಳಿಯಿರಿ.

|
Google Oneindia Kannada News

2023-24ನೇ ಸಾಲಿನ ಕೇಂದ್ರ ಬಜೆಟ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಿಟ್ಟಿನಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಜನರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವರು ಬುಧವಾರ ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷವೂ ಕಾಗದರಹಿತ ರೂಪದಲ್ಲಿ ಬಜೆಟ್ ಮಂಡಿಸಲಿದ್ದಾರೆ. 2023-24ರ ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಸಾಮಾನ್ಯ ಜನರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಬಜೆಟ್‌ನಲ್ಲಿ ರೈಲ್ವೆ ಪ್ರಯಾಣ ದರ ಏರಿಕೆಯಾಗದಂತೆ ನೋಡಿಕೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಏರುತ್ತಿರುವ ಪ್ರಯಾಣ ದರವನ್ನು ನಿಯಂತ್ರಿಸಬೇಕು. ನಾವು ಅದನ್ನು ಕಡಿಮೆ ಮಾಡಬೇಕೆಂದು ಬಯಸುತ್ತೇವೆ ಎಂದು ಪಾಟ್ನಾ ಜಂಕ್ಷನ್‌ನಲ್ಲಿ ಪ್ರಯಾಣಿಕ ಎಂಡಿ ಸಂಜಯ್ ತಿಳಿಸಿದರು. ಈ ಬಾರಿ ಬಜೆಟ್‌ನಲ್ಲಿ ಮಹಿಳೆಯರು, ವಿದ್ಯಾರ್ಥಿಗಳು, ಗೃಹಿಣಿಯರು, ಪ್ರಯಾಣಿಕರು ಏನನ್ನು ನಿರೀಕ್ಷಿಸುತ್ತಾರೆ ಎಂದು ನೋಡುವುದಾದರೆ-

ರೈಲು ಪ್ರಯಾಣಿಕರ ನಿರೀಕ್ಷೆಗಳೇನು?

ರೈಲು ಪ್ರಯಾಣಿಕರ ನಿರೀಕ್ಷೆಗಳೇನು?

ವಂದೇ ಭಾರತ್ ರೈಲುಗಳು ಮತ್ತು ಬುಲೆಟ್ ರೈಲುಗಳ ಯೋಜನೆ ಕೂಡ ಪ್ರಯಾಣಿಕರಲ್ಲಿ ಸಾಕಷ್ಟು ಉತ್ಸಾಹವನ್ನು ತುಂಬಿವೆ. ಹೀಗಾಗಿ ವಂದೇ ಭಾರತ್ ರೈಲುಗಳು ಪ್ರತಿ ಸ್ಥಳದಿಂದ ಓಡಬೇಕು ಎಂದು ಪ್ರಯಾಣೀಕರು ಒತ್ತಾಯಿಸಿದ್ದಾರೆ. ಪಾಟ್ನಾ ಜಂಕ್ಷನ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮಾತನಾಡಿ, ಸರ್ಕಾರ ಶೀಘ್ರದಲ್ಲೇ ಬುಲೆಟ್ ಟ್ರೈನ್ ಯೋಜನೆಯನ್ನು ಘೋಷಿಸಬೇಕು ಎಂದರು.

ಜೊತೆಗೆ ರೈಲುಗಳ ಶುಚಿತ್ವದ ಬಗ್ಗೆ ರೈಲ್ವೆ ಇಲಾಖೆ ಇನ್ನೂ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅಲ್ಲದೆ, ಕೋವಿಡ್ ಸಮಯದಲ್ಲಿ ನಿಲ್ಲಿಸಿದ ರೈಲುಗಳನ್ನು ಮತ್ತೆ ಕಾರ್ಯಗತಗೊಳಿಸಬೇಕು ಎಂದು ಮತ್ತೊಬ್ಬ ಪ್ರಯಾಣಿಕ ರಾಜನ್ ಕುಮಾರ್ ಹೇಳಿದರು.

ವಿದ್ಯಾರ್ಥಿಗಳ ನಿರೀಕ್ಷೆಗಳೇನು?

ವಿದ್ಯಾರ್ಥಿಗಳ ನಿರೀಕ್ಷೆಗಳೇನು?

ಸಾಮಾನ್ಯ ರೈಲ್ವೆ ಪ್ರಯಾಣಿಕರು ರಾಷ್ಟ್ರದಾದ್ಯಂತ ಹೆಚ್ಚು ರೈಲುಗಳನ್ನು ಚಲಾಯಿಸಲು ಬಯಸಿದ್ದಾರೆ. ಅವಶ್ಯಕತೆ ಇರುವ ಕಡೆಗಳಲ್ಲಿ ಹೆಚ್ಚು ರೈಲು ಸಂಚಾರದ ಅವಶ್ಯಕತೆ ಇದೆ ಎಂದು ಪ್ರಯಾಣಿಕರು ಹೇಳಿದ್ದಾರೆ. ಇನ್ನೂ ವಿದ್ಯಾರ್ಥಿಗಳು ಪರೀಕ್ಷೆಗಳ ಸಂದರ್ಭದಲ್ಲಿ ಪ್ರತ್ಯೇಕ ರೈಲುಗಳನ್ನು ಓಡಿಸಬೇಕೆಂದು ಒತ್ತಾಯಿಸಿದರು. ಅವರು ಸಾಮಾನ್ಯವಾಗಿ ಸ್ಪರ್ಧಾತ್ಮಕ ಅಥವಾ ಇತರ ಪರೀಕ್ಷೆಗಳಿಗಾಗಿ ಇತರ ನಗರಗಳಿಗೆ ಪ್ರಯಾಣಿಸಬೇಕಾಗುತ್ತದೆ ಮತ್ತು ಸಾಮಾನ್ಯ ಪ್ಯಾಸೆಂಜರ್ ರೈಲುಗಳಲ್ಲಿ ಸೀಟುಗಳನ್ನು ಕಾಯ್ದಿರಿಸಲು ಕಠಿಣವಾಗಿರುತ್ತದೆ. ಇದರಿಂದಾಗಿ ನಮಗೆ ಪರೀಕ್ಷೆ ಸಮಯದಲ್ಲಿ ಪ್ರತ್ಯೇಕ ರೈಲು ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.

ಮಹಿಳಾ ಪ್ರಯಾಣಿಕರು ಏನು ಬಯಸುತ್ತಾರೆ?

ಮಹಿಳಾ ಪ್ರಯಾಣಿಕರು ಏನು ಬಯಸುತ್ತಾರೆ?

ರೈಲುಗಳಲ್ಲಿ ಮಹಿಳೆಯರಿಗಾಗಿ ಹೆಚ್ಚು ಸುರಕ್ಷತೆ ಇರುವುದು ಮುಖ್ಯವಾಗಿದೆ. ಹೀಗಾಗಿ ರೈಲುಗಳಲ್ಲಿ ಮಹಿಳೆಯರಿಗೆ ಹೆಚ್ಚು ವ್ಯವಸ್ಥೆ ಮಾಡಬೇಕು ಎಂದು ಮಹಿಳೆಯರು ಹೇಳಿದರು. ಜೊತೆಗೆ ರೈಲುಗಳಲ್ಲಿ ಉತ್ತಮ ಆಹಾರವನ್ನು ಒದಗಿಸಬೇಕು. ಇವೆಲ್ಲಾ ವಿಚಾರಗಳನ್ನು ರೈಲ್ವೆ ಬಜೆಟ್‌ನಲ್ಲಿ ಗಮನಹರಿಸಬೇಕು ಎಂದು ಪ್ರಯಾಣಿಕರು ಹೇಳಿದರು.

ಗೃಹಿಣಿಯರ ಬೇಡಿಕೆ ಏನು?

ಗೃಹಿಣಿಯರ ಬೇಡಿಕೆ ಏನು?

ಜೊತೆಗೆ ಹೆಚ್ಚುತ್ತಿರುವ ಹಣದುಬ್ಬರ ತಮ್ಮ ಮನೆ ನಿರ್ವಹಣೆಗೆ ಸಮಸ್ಯೆಯನ್ನುಂಟು ಮಾಡುತ್ತಿದೆ. ತಮ್ಮ ಖರ್ಚನ್ನು ನಿಯಂತ್ರಿಸಲು ಅವರಿಗೆ ಸವಾಲಾಗುತ್ತಿದೆ ಎಂದು ಗೃಹಿಣಿಯರು ಹೇಳಿದ್ದಾರೆ. ಆಹಾರ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳಂತಹ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು ತಮ್ಮ ಸಮಸ್ಯೆಗಳು ಉಲ್ಬಣಗೊಂಡಿವೆ ಎಂದು ಗೃಹಿಣಿಯರು ಹೇಳಿದ್ದಾರೆ.


ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಹಣಕಾಸು ಸಚಿವರ ಬಜೆಟ್ ಭಾಷಣದ ನಂತರ ಬಜೆಟ್ ಡಾಕ್ಯುಮೆಂಟ್ ಅನ್ನು ಆಂಡ್ರಾಯ್ಡ್ ಮತ್ತು ಆಪಲ್ ಓಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ "ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್" ಮೂಲಕ ಪ್ರವೇಶಿಸಬಹುದು.

English summary
Budget 2023 Expectations : Here are the common man's expectations from the FM Nirmala Sitharaman's Union Budget 2023-24. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X