ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿ ಶೇ. 14ಕ್ಕೆ ಏರಿಕೆ

|
Google Oneindia Kannada News

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಯಶಸ್ವಿಯಾಗಿ ಮಂಡಿಸಿದ್ದಾರೆ. ಎನ್‌ಡಿಎ ಸರ್ಕಾರದ 10ನೇ ಹಾಗೂ ನಿರ್ಮಲಾ ಸೀತಾರಾಮನ್‌ರ 4ನೇ ಬಜೆಟ್ ಇದಾಗಿದ್ದು, ಬಹುನಿರೀಕ್ಷಿತ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಆದ್ರೆ ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು ಶೇಕಡಾ 10 ರಿಂದ ಶೇಕಡಾ 14ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಬಜೆಟ್ ಮಂಡನೆ ವೇಳೆ ಈ ಕುರಿತಾಗಿ ತಿಳಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ '' ಈ ತೆರಿಗೆ ಕಡಿತದ ಮಿತಿ ಹೆಚ್ಚಿಸುವುದರಿಂದ ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸಮನಾಗಿ ತರಲು ಸಹಾಯ ಮಾಡುತ್ತದೆ'' ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.

Budget 2022: Tax deduction limit on employer’s NPS contribution for State govt employees hiked from 10% to 14%

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ಕಡಿತದ ಮಿತಿ ಶೇಕಡಾ ಶೇ. 14ಕ್ಕೆ ಏರಿಕೆ ಒಂದೆಡೆಯಾದ್ರೆ, ಖಾಸಗಿ ವಲಯದ ಉದ್ಯೋಗಿಗಳ ವಿಷಯದಲ್ಲಿ, ತೆರಿಗೆ ಪ್ರಯೋಜನವನ್ನು ಶೇ. 10%ಕ್ಕೆ ಸೀಮಿತಗೊಳಿಸಲಾಗಿದೆ.

ಒಂದು ಹಣಕಾಸು ವರ್ಷದಲ್ಲಿ ಎನ್‌ಪಿಎಸ್‌ನಲ್ಲಿ 1.5 ಲಕ್ಷದವರೆಗಿನ ಹೂಡಿಕೆಯು ಸೆಕ್ಷನ್ 80CCD (1) ಅಡಿಯಲ್ಲಿ ಕಡಿತಕ್ಕೆ ಅರ್ಹವಾಗಿದೆ. ಈ ಕಡಿತವು ಸೆಕ್ಷನ್ 80C ಅಡಿಯಲ್ಲಿ ಅನುಮತಿಸಲಾದ ರೂ. 1.5 ಲಕ್ಷದ ಒಟ್ಟಾರೆ ಮಿತಿಯ ಅಡಿಯಲ್ಲಿ ಬರುತ್ತದೆ.

ಇದಲ್ಲದೆ, ಎನ್‌ಪಿಎಸ್‌ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ವಿಭಾಗ 80C ಕಡಿತದ ಮೇಲೆ ಹೆಚ್ಚುವರಿ ಕಡಿತವನ್ನು ನೀಡುತ್ತದೆ. ಈ ಹೆಚ್ಚುವರಿ ಕಡಿತವು ಸೆಕ್ಷನ್ 80CCD (1b) ಅಡಿಯಲ್ಲಿ ರೂ 50,000 ವರೆಗೆ ಲಭ್ಯವಿದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ಹೂಡಿಕೆಯು ಆದಾಯ ತೆರಿಗೆ ಕಾಯಿದೆ, 1961 ರ ಮೂರು ವಿಭಿನ್ನ ವಿಭಾಗಗಳ ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ನೀಡುತ್ತದೆ.

ಎನ್‌ಪಿಎಸ್‌ನ ಶ್ರೇಣಿ ಒಂದರ ಖಾತೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆದಾರರು 50,000 ರೂ.ವರೆಗೆ ಹೆಚ್ಚುವರಿ ಕಡಿತವನ್ನು (ತೆರಿಗೆ ವಿಧಿಸುವ ಮೊದಲು ಒಟ್ಟು ಆದಾಯದಿಂದ) ಪಡೆಯಬಹುದು. ಈ ರೀತಿಯಾಗಿ ತೆರಿಗೆದಾರರು ಎನ್‌ಪಿಎಸ್‌ ನಲ್ಲಿ ಹೂಡಿಕೆ ಮಾಡುವ ಮೂಲಕ ನಿರ್ದಿಷ್ಟ ಹಣಕಾಸು ವರ್ಷದಲ್ಲಿ 2 ಲಕ್ಷ ರೂಪಾಯಿ ಒಟ್ಟಾರೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು.

ಆದಾಯ ಕೊಡುಗೆ 7.5 ಲಕ್ಷ ರೂಪಾಯಿಗಳನ್ನು ಮೀರಿದರೆ ತೆರಿಗೆ ಬಿಸಿ

ಎನ್‌ಪಿಎಸ್ ಖಾತೆ ಮತ್ತು ಇಪಿಎಫ್‌ ಮತ್ತು ಸೂಪರ್‌ಅನ್ಯುಯೇಷನ್‌ಗೆ ಉದ್ಯೋಗದಾತರ ಕೊಡುಗೆಯು ಆರ್ಥಿಕ ವರ್ಷದಲ್ಲಿ 7.5 ಲಕ್ಷ ರೂಪಾಯಿಗಳನ್ನು ಮೀರಿದರೆ ಉದ್ಯೋಗಿಯ ಎನ್‌ಪಿಎಸ್‌ ಖಾತೆಗೆ ಉದ್ಯೋಗದಾತರ ಕೊಡುಗೆಯು ತೆರಿಗೆಗೆ ಒಳಪಡುತ್ತದೆ.

ಅಂದ್ರೆ ಎನ್‌ಪಿಎಸ್‌ ಖಾತೆಗೆ ಉದ್ಯೋಗದಾತರ ಕೊಡುಗೆಯು ತೆರಿಗೆ ನಿಯಮಗಳೆರಡರಲ್ಲೂ ಲಭ್ಯವಿರುವ ಏಕೈಕ ತೆರಿಗೆ ವಿರಾಮವಾಗಿದೆ.

ಇದೇ ವೇಳೆಯಲ್ಲಿ ಸಹಕಾರಿ ಸಂಘಗಳ ಸರ್ಜ್ ಚಾರ್ಜ್ ಅನ್ನು ಇಳಿಕೆ ಮಾಡಲಾಗಿದೆ. ಶೇ.18ರಿಂದ ಶೇ.15ಕ್ಕೆ ಸರ್ಜ್ ಕೋ ಆಪರೇಟಿವ್ ಸೊಸೈಟ್ ಸರ್ಜ್ ಚಾರ್ಜ್ ಇಳಿಕೆ ಮಾಡಲಾಗುತ್ತಿದೆ. ಶೇ.12 ರಿಂದ 7ಕ್ಕೆ 1 ಕೋಟಿಯಿಂದ 2 ಕೋಟಿಯವರೆಗೆ ಸರ್ಜ್ ಚಾರ್ಜ್ ಇಳಿಕೆ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

English summary
hikes tax exemption on employer’s NPS contribution for state govt staff to 14% from 10%
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X