• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್‌ 2022; ರಿಯಲ್ ಎಸ್ಟೇಟ್ ವಲಯದ ನಿರೀಕ್ಷೆಗಳು

|
Google Oneindia Kannada News

ನವದೆಹಲಿ, ಜನವರಿ 17; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ರಿಯಲ್ ಎಸ್ಟೇಟ್ ವಲಯ ಬಜೆಟ್ ಮೇಲೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದೆ.

ತೆರಿಗೆ ರಿಯಾಯಿತಿ ನೀಡಬೇಕು ಎಂಬುದು ವಲಯದ ಪ್ರಮುಖ ಬೇಡಿಕೆಯಾಗಿದೆ. ಗೃಹ ಸಾಲದ ಬಡ್ಡಿ ಕಡಿತ ಮಿತಿಯನ್ನು 2 ರಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಬೇಕು ಎಂಬುದು ಮೊದಲ ಬೇಡಿಕೆಯಾಗಿದೆ.

ಬಜೆಟ್; ರೈಲ್ವೆ ಇಲಾಖೆಯಡಿಯ 6 ಸಂಸ್ಥೆಗಳ ವಿಲೀನ ಬಜೆಟ್; ರೈಲ್ವೆ ಇಲಾಖೆಯಡಿಯ 6 ಸಂಸ್ಥೆಗಳ ವಿಲೀನ

ಕ್ರೆಡೈ ಅಧ್ಯಕ್ಷ ಹರ್ಷವರ್ಧನ್ ಪಟೋಡಿಯಾ ಈ ಕುರಿತು ಮಾತನಾಡಿದ್ದಾರೆ, "ಪ್ರಧಾನಮಂತ್ರಿಗಳಾದ ಕನಸಾದ ಎಲ್ಲರಿಗೂ ವಸತಿ ಯೋಜನೆ ಜಾರಿಗೊಳಿಸಲು ತೆರಿಗೆ ಸಡಿಲಿಕೆ ನೀತಿ ಸಹಾಯಕವಾಗಲಿದೆ" ಎಂದು ಹೇಳಿದ್ದಾರೆ.

ಬಜೆಟ್; ಒಂದೇ ಮಾದರಿ ಜಿಎಸ್‌ಟಿಗೆ ಉತ್ಪಾದನಾ ವಲಯದ ಬೇಡಿಕೆ ಬಜೆಟ್; ಒಂದೇ ಮಾದರಿ ಜಿಎಸ್‌ಟಿಗೆ ಉತ್ಪಾದನಾ ವಲಯದ ಬೇಡಿಕೆ

ಕನಿಷ್ಠ 50,000 ರೂಪಾಯಿಯಿಂದ ಪ್ರಾರಂಭವಾಗುವ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳಲ್ಲಿ ಹೂಡಿಕೆಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಕೋರಲಾಗಿದೆ. ಸರ್ಕಾರ ವಲಯದ ಭವಿಷ್ಯದ ದೃಷ್ಟಿಯಿಂದ ಯಾವ ಕ್ರಮ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕಿದೆ.

ಕೇಂದ್ರ ಬಜೆಟ್ 2022: ಉದ್ಯೋಗಿ ವಲಯದ 5 ನಿರೀಕ್ಷೆಗಳು ಕೇಂದ್ರ ಬಜೆಟ್ 2022: ಉದ್ಯೋಗಿ ವಲಯದ 5 ನಿರೀಕ್ಷೆಗಳು

2019ರಲ್ಲಿನ ಕೋವಿಡ್ ಪರಿಸ್ಥಿತಿ ಬಳಿಕ ರಿಯಲ್ ಎಸ್ಟೇಟ್ ಉದ್ಯಮ ಕುಸಿತ ಕಂಡಿತ್ತು. 2021ರಲ್ಲಿ ಉದ್ಯಮದಲ್ಲಿ ಚೇತರಿಕೆ ಕಂಡುಬಂದಿತ್ತು. ಸ್ಥಗಿತಗೊಂಡಿದ್ದ ವಸತಿ ಯೋಜನೆಗಳ ಕಾರ್ಯ ಮತ್ತೆ ಆರಂಭವಾಗಿತ್ತು.

ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಮೂಲ ಸೌಕರ್ಯ ವಿಭಾಗದಡಿ ತರಲು ಸಹ ಬೇಡಿಕೆ ಇಡಲಾಗಿದೆ. ಇದರಿಂದಾಗಿ ವಿದೇಶಿ ಮತ್ತು ಸ್ಥಳೀಯ ಹೂಡಿಕೆಗಳಿಗೆ ಸಹಾಯಕವಾಗಲಿದೆ ಎಂಬ ನಿರೀಕ್ಷೆ ಇದೆ. ಹೊಸ ಹೂಡಿಕೆ ಉತ್ತೇಜನ ಮಾಡಲು ಸಿಂಗಲ್ ವಿಂಡೋ ಕ್ಲಿಯರೆನ್ಸ್‌ ವ್ಯವಸ್ಥೆ ಜಾರಿಗೆ ತರಬೇಕು ಎಂದು ಬೇಡಿಕೆ ಇಡಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಅನ್ನು 2022ರ ಡಿಸೆಂಬರ್ 31ರ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯೂ ಇದೆ. ಮೆಟ್ರೋ ಮತ್ತು ನಾನ್ ಮೆಟ್ರೋ ನಗರಗಳಿಗೆ ಪ್ರತ್ಯೇಕ ನಿಯಮಗಳನ್ನು ಜಾರಿಗೊಳಿಸಬೇಕು ಎಂಬ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರ 2015ರಲ್ಲೇ 2022ರೊಳಗೆ ಸರ್ವರಿಗೂ ಸೂರು ಎಂದು ಘೋಷಣ ಮಾಡಿತ್ತು. ಸಾಮಾನ್ಯ ಜನರೂ ಸಹ ಹೊಸ ಮನೆ ಕಟ್ಟಲು ಅನುಕೂಲವಾಗುವಂತೆ ನೀತಿ ರೂಪಿಸುವುದು ಇದರ ಉದ್ದೇಶವಾಗಿತ್ತು.

ತೆರಿಗೆ ನಿರ್ವಹಣೆಗೆ ಅನುಕೂಲವಾಗುಂತೆ ಈಗ ಎರಡು ವಿಭಾಗ ಮಾಡಲಾಗಿದೆ. ಕೈಗೆಟಕುವ ಬೆಲೆಯ ಗೃಹಗಳು ಮತ್ತು ಇತರ ಗೃಹಗಳು ಮೆಟ್ರೋ ಹಾಗೂ ಇತರ ನಗರಗಳನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಹಿಂದೆ ತೆರಿಗೆ ನೀತಿಯ ನಿರ್ಣಯ ಕೈಗೊಳ್ಳಲಾಗಿದೆ. ಈ ನೀತಿ ಏಪ್ರಿಲ್ ಬಳಿಕ ಜಾರಿಗೆ ಬರಲಿದೆ.

ಕಳೆದ ವರ್ಷ ತೈಲ ಬೆಲೆಗಳ ಏರಿಕೆಯಿಂದಾಗಿ ಮನೆ ನಿರ್ಮಾಣ ಕಚ್ಚಾ ವಸ್ತುಗಳ ಬೆಳೆಗಳು ಸಹ ಏರಿಕೆ ಕಂಡವು. ಸಿಮೆಂಟ್, ಮರಳು, ಕಬ್ಬಿಣ, ಪೈಂಟ್ ಇತ್ಯಾದಿಗಳ ದರಗಳು ಏರಿಕೆಯಾಗಿ ಜನರು ಸಂಕಷ್ಟಕ್ಕೆ ಸಿಲುಕಿದರು.

ಕ್ರೆಡಾಯ್ ಕಳೆದ ವರ್ಷ ನಡೆಸಿದ ಸಮೀಕ್ಷೆ ಪ್ರಕಾರ ದೇಶದ ಜಿಡಿಪಿಗೆ ಗೃಹ ನಿರ್ಮಾಣ ಕ್ಷೇತ್ರ ಶೇ 11ರಷ್ಟು ಕೊಡುಗೆ ನೀಡುತ್ತದೆ. ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಸಹ ಆಗುವುದರಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಲಿದೆ.

ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರವನ್ನು ಪುನಶ್ಚೇತನಗೊಳಿಲು ಜಿಎಸ್‌ಟಿ ದರವನ್ನು ಕಡಿಮೆ ಮಾಡುವುದು ಸಹಾಯಕವಾಗಲಿದೆ. ಆದರೆ ಬಜೆಟ್‌ನಲ್ಲಿ ಯಾವ ಘೋಷಣೆಯಾಗಲಿದೆ? ಎಂದು ಕಾದು ನೋಡಬೇಕಿದೆ.

ಈ ವರ್ಷದ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಹೊಸ ತೆರಿಗೆ ನೀತಿ ಜಾರಿಗೆ ಬರಲಿದೆ. ಅಗ್ಗದ ಮನೆಗಳಿಗೆ ಪ್ರಸ್ತುತ ಇರುವ ಶೇ 8ರ ತೆರಿಗೆಗೆ ಹೊಸದಾಗ ಶೇ 1ರಷ್ಟು ಸೇರ್ಪಡೆಯಾಗಲಿದೆ. ಇತರ ಗೃಹಗಳ ಶೇ 12ರ ತೆರಿಗೆಗೆ ಶೇ 5ರಷ್ಟು ಸೇರ್ಪಡೆಯಾಗಲಿದೆ.

ನಿರ್ಮಲಾ ಸೀತಾರಾಮನ್
Know all about
ನಿರ್ಮಲಾ ಸೀತಾರಾಮನ್
English summary
Fiance minister Nirmala Sitharaman will present budget 2022-23 on February 1. Here are the exceptions of real estate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X